ಸಾವಿನಿಂದ ಪಾರಾದ ರಿಷಬ್ ಶೆಟ್ಟಿ !! ಕಾಂತಾರ-1 ಶೂಟಿಂಗ್‌ ವೇಳೆ ಅವಘಡ, ಬಚಾವಾಗಿದ್ದು ಹೇಗೆ ನೋಡಿ?

ಸಾವಿನಿಂದ ಪಾರಾದ ರಿಷಬ್ ಶೆಟ್ಟಿ !! ಕಾಂತಾರ-1 ಶೂಟಿಂಗ್‌ ವೇಳೆ ಅವಘಡ,  ಬಚಾವಾಗಿದ್ದು ಹೇಗೆ ನೋಡಿ?

ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ಕಾಂತಾರ-1 ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ಶನಿವಾರ(ಜೂ14) ನಡೆದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಚಿತ್ರ ತಂಡದ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರದ ಕೊನೆಯ ಹಂತದ ಶೂಟಿಂಗ್ ಗಾಗಿ ತೀರ್ಥಹಳ್ಳಿಯ ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ನಡೆಸಲಾಗುತ್ತಿತ್ತು.ಶೂಟಿಂಗ್ ನಡೆಸುತ್ತಿದ್ದ ವೇಳೆ ದೋಣಿ ಮಗುಚಿದೆ ಎಂದು ಹೇಳಲಾಗಿದ್ದು ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಸ್ಥಳದಲ್ಲಿದ್ದರು ಎನ್ನುವ ಮಾಹಿತಿ ಲಭಿಸಿದೆ.ಕೆಮರಾ ಮತ್ತು ಇತರ ಸಾಮಗ್ರಿಗಳು ನೀರು ಪಾಲಾಗಿವೆ ಎಂದು ಹೇಳಲಾಗಿತ್ತು.

ಈಗಾಗಲೇ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಮೂವರು ಕಲಾವಿದರ ಅಕಾಲಿಕ ನಿಧನ ತಂಡಕ್ಕೆ ಶಾಕ್ ಆಗಿ ಪರಿಣಮಿಸಿತ್ತು.

ಕಾಂತಾರ: ಚಾಪ್ಟರ್ 1’ ಚಿತ್ರತಂಡದ ಮತ್ತೊಬ್ಬ ಕಲಾವಿದ ನಿಧನ; ಹೃದಯಾಘಾತದಿಂದ ಕೊನೆಯುಸಿರು
ಕನ್ನಡ ಚಿತ್ರರಂಗದಲ್ಲಿ ಭಾರೀ ಯಶಸ್ಸು ಕಂಡ ಕಾಂತಾರ ಚಿತ್ರದ ಮುಂದುವರಿದ ಭಾಗ ಕಾಂತಾರ: ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ದುಃಖದ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ಕಲಾವಿದ ವಿಜು ವಿ.ಕೆ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಘಟನೆ ವಿವರ
ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಹಾಗೂ ನಟ ವಿಜು ವಿ.ಕೆ. ಅವರು ಕಾಂತಾರ: ಚಾಪ್ಟರ್ 1 ಚಿತ್ರದ ಚಿತ್ರೀಕರಣಕ್ಕಾಗಿ ಆಗುಂಬೆಯ ಹೋಂ ಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಜೂನ್ 11ರ ರಾತ್ರಿ ಅವರು ಏಕಾಏಕಿ ಎದೆ ನೋವನ್ನು ಅನುಭವಿಸಿದರು. ಸ್ಥಳೀಯರು ತಕ್ಷಣವೇ ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು, ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದರು.

ಚಿತ್ರತಂಡದ ಮೇಲೆ ದುಃಖದ ನೆರಳು
ಇದು ಕಾಂತಾರ: ಚಾಪ್ಟರ್ 1 ತಂಡದಲ್ಲಿ ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಮೂರನೇ ಸಾವಿನ ಘಟನೆ. ಮೇ 6ರಂದು ಎಂ.ಎಫ್. ಕಪಿಲ್ ಅವರು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದೇ ತಿಂಗಳ 12ರಂದು ಹಾಸ್ಯನಟ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾದರು.