ಕರ್ಣ ಧಾರವಾಹಿ ಜೂನ್ 16ರಿಂದ ಪ್ರಸಾರವಾಗುತ್ತಿಲ್ಲ ಕಾರಣ ಏನು ಗೊತ್ತೇ?

ಕರ್ಣ ಧಾರವಾಹಿ ಜೂನ್ 16ರಿಂದ ಪ್ರಸಾರವಾಗುತ್ತಿಲ್ಲ ಕಾರಣ ಏನು ಗೊತ್ತೇ?

ನ್ನಡ ಕಿರುತೆರೆಯಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿದ್ದ ಸೀರಿಯಲ್ ‘ಕರ್ಣ’. ‘ಕನ್ನಡತಿ’ ಸೀರಿಯಲ್ ಬಳಿಕ ಕಿರಣ್‌ ರಾಜ್‌ ಅಭಿನಯಿಸುತ್ತಿರುವ ಧಾರಾವಾಹಿ ‘ಕರ್ಣ’. ಹೀಗಾಗಿ ‘ಕರ್ಣ’ನ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಸ್ವಲ್ಪ ಜಾಸ್ತಿನೇ ಇತ್ತು. ಮೊಟ್ಟ ಮೊದಲ ಪ್ರೋಮೋದಲ್ಲೇ ಡಾ ‘ಕರ್ಣ’ ವೀಕ್ಷಕರ ಮನಸ್ಸನ್ನೂ ಗೆದ್ದಿದ್ದೂ ಆಯ್ತು. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಂದು (ಜೂನ್ 16) ರಾತ್ರಿ 8 ಗಂಟೆಗೆ ‘ಕರ್ಣ’ ಧಾರಾವಾಹಿಯ ಮೊಟ್ಟ ಮೊದಲ ಸಂಚಿಕೆ ಪ್ರಸಾರವಾಗಬೇಕಿತ್ತು. ಆದರೆ, ಕಡೆಯ ಕ್ಷಣದಲ್ಲಿ ‘ಕರ್ಣ’ ಎಪಿಸೋಡ್ ಟೆಲಿಕಾಸ್ಟ್ ರದ್ದಾಗಿದೆ. ಇದಕ್ಕೆ ಅಸಲಿ ಕಾರಣವೇನು ಗೊತ್ತಾ?

ಜೂನ್ 16 ರಂದು ‘ಕರ್ಣ’ ಪ್ರಸಾರವಾಗೋದು ಖಚಿತವಾಗಿತ್ತು. ಹೀಗಿರುವಾಗಲೇ, ಜೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್‌ ಜೂನ್‌ 14 ರಂದು ಕೋರ್ಟ್‌ ಮೆಟ್ಟಿಲೇರಿದೆ. ‘ಕರ್ಣ’ ಧಾರಾವಾಹಿ ಪ್ರಸಾರವಾಗಬಾರದೆಂದು ಕೋರ್ಟ್‌ನಿಂದ ಪ್ರತಿಸ್ಪರ್ಧಿ ಚಾನೆಲ್‌ ಸ್ಟೇ ಆರ್ಡರ್‌ ತಂದಿದೆ. ಇದೇ ಕಾರಣಕ್ಕೆ ಇಂದಿನಿಂದ ರಾತ್ರಿ 8ಕ್ಕೆ ನಿಗದಿಯಾಗಿದ್ದ ‘ಕರ್ಣ’ ಸೀರಿಯಲ್‌ ಪ್ರಸಾರಕ್ಕೆ ತಡೆ ಬಿದ್ದಿದೆ.ಜೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್‌ ಜೊತೆಗೆ ಭವ್ಯಾ ಗೌಡ ಅವರ ಅಗ್ರೀಮೆಂಟ್‌ ಆಗಿತ್ತು. ಅಗ್ರೀಮೆಂಟ್‌ ಪ್ರಕಾರ, ಕೆಲ ತಿಂಗಳ ಮಟ್ಟಿಗೆ ಭವ್ಯಾ ಗೌಡ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತಿಲ್ಲ. ಇದನ್ನೇ ಇಟ್ಟುಕೊಂಡು ಪ್ರತಿಸ್ಪರ್ಧಿ ಚಾನೆಲ್‌ ಕೋರ್ಟ್‌ ಮೆಟ್ಟಿಲೇರಿದೆ. ‘ಕರ್ಣ’ ಧಾರಾವಾಹಿ ಪ್ರಸಾರಕ್ಕೆ ಸ್ಟೇ ತಂದಿದೆ.

ಭವ್ಯಾ ಗೌಡ ವಿಚಾರವಾಗಿ ಕೋರ್ಟ್‌ನಿಂದ ಸ್ಟೇ ಬಂದಿರೋದ್ರಿಂದ ಅವರಿಗೆ ಸಂಬಂಧಿಸಿದಂತೆ ‘ಕರ್ಣ’ ಧಾರಾವಾಹಿಯ ಎಲ್ಲಾ ಪೋಸ್ಟ್, ವಿಡಿಯೋ ಹಾಗೂ ಪ್ರೋಮೋಗಳನ್ನ ಡಿಲೀಟ್ ಮಾಡಲಾಗಿದೆ. ಭವ್ಯಾ ಗೌಡ ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲೂ ‘ಕರ್ಣ’ ಸೀರಿಯಲ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆಯಲಾಗಿದೆ.