ಧ್ರುವಂತ್ ಆರೋಪಕ್ಕೆ LIVE video ಆಕಿ ಧ್ರುವಂತ್ ಗೆ ಮಂಗಳಾರತಿ ಮಾಡಿದ ಕಿಚ್ಚ!!

ಧ್ರುವಂತ್ ಆರೋಪಕ್ಕೆ LIVE video ಆಕಿ ಧ್ರುವಂತ್ ಗೆ ಮಂಗಳಾರತಿ ಮಾಡಿದ ಕಿಚ್ಚ!!


ಬಿಗ್ ಬಾಸ್ ಕನ್ನಡ ಸೀಸನ್ 12 – ಧ್ರುವಂತ್ ವಿವಾದ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಇತ್ತೀಚೆಗೆ ಮನೆಯಲ್ಲಿ ಹಲವರನ್ನು ಟಾರ್ಗೆಟ್ ಮಾಡುತ್ತಾ, ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಮಲ್ಲಮ್ಮ ಹೊರಹೋದ ನಂತರ ಅವರು ನಿರಂತರವಾಗಿ ಜಗಳ, ಕಿತ್ತಾಟಗಳನ್ನು ಸೃಷ್ಟಿ ಮಾಡುತ್ತಾ ಅಸಭ್ಯ ಪದಗಳನ್ನು ಬಳಸಿ, ಅಸಭ್ಯ ಸನ್ನೆಗಳನ್ನು ಮಾಡುತ್ತಿರುವುದು ಗಮನ ಸೆಳೆದಿದೆ. ಉತ್ತಮ–ಕಳಪೆ ಕೊಡುವ ವೇಳೆ ಅಭಿಷೇಕ್ ಮಾತನಾಡುತ್ತಿದ್ದಾಗ ಧ್ರುವಂತ್ ಮಧ್ಯದ ಬೆರಳನ್ನು ತೋರಿಸಿ ಅಸಭ್ಯ ಸನ್ನೆ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಳೆದ ವಾರ ಗಿಲ್ಲಿ ನಟನಿಗೆ ಕಳಪೆ ಕೊಡಬೇಕೆಂದು ಕಾಕ್ರೂ ಸುಧೀರ್, ಅಶ್ವಿನಿ ಗೌಡ ಹಾಗೂ ಧ್ರುವಂತ್ ಬಹಿರಂಗವಾಗಿ ಚರ್ಚೆ ನಡೆಸಿ, ಪ್ಲಾನ್ ಪ್ರಕಾರವೇ ವೋಟ್ ಹಾಕಿ ಅವರನ್ನು ಜೈಲಿಗೆ ಕಳಿಸಿದ್ದರು. ಇದೇ ರೀತಿಯ ಘಟನೆ ಈ ವಾರವೂ ಮರುಕಳಿಸಿದ್ದು, ಮಾಳುಗೆ ಕಳಪೆ ಕೊಡುವ ಬಗ್ಗೆ ಅಶ್ವಿನಿ ಗೌಡ, ಜಾನ್ವಿ ಹಾಗೂ ಧ್ರುವಂತ್ ಓಪನ್ ಆಗಿಯೇ ಚರ್ಚೆ ನಡೆಸಿದ್ದಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಇಂತಹ ಚರ್ಚೆಗಳು ನಿಷಿದ್ಧವಾಗಿರುವುದರಿಂದ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಈ ವಾರದ ವೀಕೆಂಡ್ ಎಪಿಸೋಡ್ ಮುಗಿದ ನಂತರ ಧ್ರುವಂತ್ ಅವರು ಅಭಿಷೇಕ್ ಬಳಿ ಕಿಚ್ಚ ಸುದೀಪ್ ಅವರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ. ಈ ವಿಡಿಯೋ ಟೆಲಿಕಾಸ್ಟ್ ಆಗದಿದ್ದರೂ 24 ಗಂಟೆಗಳ ಲೈವ್‌ನಲ್ಲಿ ಪ್ರಸಾರವಾಗಿದ್ದು, ವೀಕ್ಷಕರು ಅದನ್ನು ಗಮನಿಸಿ ವೈರಲ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಬೇಕೆಂದು ವೀಕ್ಷಕರು ಒತ್ತಾಯಿಸಿದ್ದಾರೆ.

ಕಿಚ್ಚ ಸುದೀಪ್ ಅವರ ಎಚ್ಚರಿಕೆ
ಇಂದು ನಡೆದ ಕಿಚ್ಚನ ಪಂಚಾಯಿತಿಯಲ್ಲಿ, ಸುದೀಪ್ ಅವರು ಧ್ರುವಂತ್ ಮಾಡಿದ ಮೂರು ತಪ್ಪುಗಳನ್ನು ಲೈವ್ ವಿಡಿಯೋ ಮೂಲಕ ಎಲ್ಲರ ಮುಂದೆ ಬಯಲು ಮಾಡಿದರು. ಉತ್ತಮ–ಕಳಪೆ ಕೊಡುವಾಗ ಪ್ರತಿಯೊಬ್ಬರೂ ತಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು, ಚರ್ಚೆ ಮಾಡಿ ನಿರ್ಧಾರ ಮಾಡುವುದು ನಿಯಮ ಉಲ್ಲಂಘನೆ ಎಂದು ಅವರು ಸ್ಪಷ್ಟಪಡಿಸಿದರು. ಧ್ರುವಂತ್, ಅಶ್ವಿನಿ ಹಾಗೂ ಜಾನ್ವಿಗೆ ಇದು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಅಸಭ್ಯ ಪದಗಳು ಹಾಗೂ ಅಸಭ್ಯ ಸನ್ನೆಗಳನ್ನು ಬಳಸುವುದು ಮನೆಯಲ್ಲಿ ಮುಖ್ಯ ನಿಯಮ ಉಲ್ಲಂಘನೆಯಾಗಿರುವುದರಿಂದ ಧ್ರುವಂತ್ ಅವರಿಗೆ ಸುದೀಪ್ ಗಂಭೀರವಾಗಿ ಚಳಿ ಬಿಡಿಸಿದರು. “ನೀವು ಯಾವ ಶೋನಲ್ಲಿ ಇದ್ದೀರಾ, ಏನು ಮಾಡ್ತಾ ಇದ್ದೀರಾ ಎನ್ನುವ ಅರಿವು ಇದೆಯಾ? ಇದು ನಿಮ್ಮ ಮನೆ ಅಲ್ಲ, ಬಿಗ್ ಬಾಸ್ ಮನೆ” ಎಂದು ನೇರವಾಗಿ ಪ್ರಶ್ನಿಸಿದರು.

ಅಭಿಷೇಕ್ ಅವರಿಗೆ ಕಳಪೆ ಕೊಟ್ಟ ತಕ್ಷಣ ಅಸಭ್ಯ ಸನ್ನೆ ಮಾಡುವುದು ಸರಿಯಲ್ಲ ಎಂದು ತೀವ್ರವಾಗಿ ಎಚ್ಚರಿಸಿದರು. “ಇನ್ನು ಮುಂದೆ ಒಂದೇ ಒಂದು ರೂಲ್ಸ್ ಬ್ರೇಕ್ ಆದರೂ ನಾನು ನಿಮ್ಮನ್ನು ಮನೆಯಿಂದ ಹೊರಗೆ ಕಳಿಸ್ತೀನಿ” ಎಂದು ಕಡಕ್ಕಾಗಿ ವಾರ್ನಿಂಗ್ ನೀಡಿದರು.