ನಮ್ರತಾ ಗೌಡ ಜೊತೆಗಿನ ಲವ್‌ ಬಗ್ಗೆ ಕಿಶನ್‌ ಶಾಕಿಂಗ್ ಹೇಳಿಕೆ ?

ನಮ್ರತಾ ಗೌಡ ಜೊತೆಗಿನ ಲವ್‌  ಬಗ್ಗೆ ಕಿಶನ್‌  ಶಾಕಿಂಗ್ ಹೇಳಿಕೆ ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 7ರʼ ಮೂಲಕ ಭಾರಿ ಜನಪ್ರಿಯತೆ ಪಡೆದವರು ಡ್ಯಾನ್ಸರ್‌ ಕಿಶನ್‌ ಬಿಳಗಲಿ. ಆಗಾಗ ತಮ್ಮ ಡ್ಯಾನ್ಸ್‌ಗಳಿಂದಲೇ ಸಖತ್‌ ಸುದ್ದಿಯಲ್ಲಿರುತ್ತಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಕಿಶನ್‌ ಅವರು ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಅಂದರೆ ಅದರಲ್ಲಿ ನೋ ಡೌಟ್.‌ ಎಲ್ಲಾ ನಟಿಯರ ಜೊತೆಗೆ ಕಿಶನ್‌ ಡ್ಯುಯೆಟ್‌ ರೀಲ್‌ ಮಾಡುತ್ತಿರುತ್ತಾರೆ. ಈ ರೀಲ್‌ಗಳನ್ನು ನೋಡಿ ಹಲವರು ಹಲವು ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಅಲ್ಲದೇ ಹೆಚ್ಚಾಗಿ ನಮ್ರತಾ ಗೌಡ ಜೊತೆಗೆ ಕಿಶನ್‌ ರೀಲ್ಸ್‌ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಇವರಿಬ್ಬರು ಪ್ರೀತಿಯಲ್ಲಿದ್ದಾರಾ? ಅಥವಾ ಮದುವೆಯಾಗಲಿದ್ದಾರಾ? ಅಂತಲೂ ನೆಟ್ಟಿಗರು ಪ್ರಶ್ನೆ ಮಾಡುತ್ತಿರುತ್ತಾರೆ.

ನಮ್ರತಾ ಗೌಡ ಅವರೊಟ್ಟಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಆದಷ್ಟು ಬೇಗ ಇಬ್ಬರು ಗುಡ್‌ ನ್ಯೂಸ್‌ ಕೊಡಲಿದ್ದಾರೆ ಎಂಬ ಗಾಸಿಪ್‌ಗಳು ಕೂಡ ಹಬ್ಬಿದೆ. ಈ ಬಗ್ಗೆ ಕಿಶನ್‌ ಬಿಳಗಲಿ ಮಾತನಾಡಿ, “ನಾನು ನಮ್ರತಾ ಗೌಡ ಬೆಸ್ಟೆಸ್ಟ್‌ ಫ್ರೆಂಡ್ಸ್‌, ನಾನು ಮುಂಬೈನಲ್ಲಿ ಹೆಸರು ಮಾಡಿ ಬೆಂಗಳೂರಿಗೆ ಬಂದಾಗ ನಾನು ಮಾಡಿದಂತಹ ಮೊದಲ ಡ್ಯಾನ್ಸ್‌ ಶೋನಲ್ಲಿ ನಮ್ರತಾ ಗೌಡ ಅವರ ಪಾರ್ಟ್‌ನರ್‌ ಆಗಿದ್ದೆ. ಶುರುವಿನಲ್ಲಿ ನನಗೆ ಅವಳನ್ನು ನೋಡಿದ್ದರೆ ಆಗುತ್ತಿರಲಿಲ್ಲ, ಅವಳಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ” ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿಶನ್‌ ಹೇಳಿಕೊಂಡಿದ್ದಾರೆ.

“ಒಂದು ತಿಂಗಳು ನಾವು ಸರಿಯಾಗಿ ಮಾತನಾಡಿಯೇ ಇರಲಿಲ್ಲ ಹಾಗೆಯೇ ಪರ್ಫಾಮೆನ್ಸ್‌ ಮಾಡಿದ್ದೆವು. ಹೋಗ್ತಾ ಹೋಗ್ತಾ ಚೆನ್ನಾಗಿ ಮಾತನಾಡುತ್ತಾ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್‌ ಆದೆವು. ನಾವಿಬ್ಬರೂ ಈ ಆರು ವರ್ಷದಲ್ಲಿ ಚೂರು ಕೂಡ ಅಸೂಯೆ ಇಲ್ಲ, ಜಗಳವಾಡಿಲ್ಲ. ನಮಗೇನಾದರೂ ಬೇಜಾರಾದರೆ ಸೈಲೆಂಟ್‌ ಆಗಿಬಿಡುತ್ತೇವೆ. ನಮ್ಮ ಗೆಳೆತನ ತುಂಬಾ ದೂರ ಸಾಗುತ್ತದೆ. ಮದುವೆ ಬಗ್ಗೆ ಅವಳು ಏನಾದರೂ ನ್ಯೂಸ್‌ ಕೊಡಬಹುದು ನನಗೆ ಗೊತ್ತಿಲ್ಲ” ಎಂದಿದ್ದಾರೆ ಕಿಶನ್‌ ಬಿಳಗಲಿ.