ಹಿಂದಿ ಬಿಗ್ ಬಾಸ್‌ಗೆ ಲಾಯರ್ ಜಗದೀಶ್ ಎಂಟ್ರಿ ಗ್ಯಾರಂಟಿ ಯಾವಾಗ ನೋಡಿ ?

ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ) ಸ್ಪರ್ಧಿಯಾಗಿ ಸಖತ್ ಮಿಂಚಿದವರು ಲಾಯರ್ ಜಗದೀಶ್ ಆದರೆ ಎರಡನೇ ವಾರಕ್ಕೆ ಗಲಾಟೆ ಮಾಡಿಕೊಂಡು ಜಗದೀಶ್ ಅವರು ಆಚೆ ಬಂದರು. ಇದೀಗ ಇದೇ ಫೇಮ್ ಇಟ್ಟುಕೊಂಡು ಹಿಂದಿ ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ. ಸ್ವತಃ ಲಾಯರ್ ಜಗದೀಶ್ ಸ್ಪಷ್ಟನೆ ಕೊಟ್ಟಿದ್ದಾರೆ. ಜಗದೀಶ್ ಅವರು ಹಿಂದಿ ಬಿಗ್ ಬಾಸ್‌ಗೆ ಎಂಟ್ರಿ ಕೊಡುವ ಪೊಸ್ಟ್ ಸಖತ್ ವೈರಲ್ ಆಗುತ್ತಿದೆ . ಸ್ವತಃ ಈ ಬಗ್ಗೆ ಜಗದೀಶ್ ಅವರು ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ.
ಕರ್ನಾಟಕದ ಬಾಲಿವುಡ್ ಎಂಟ್ರಿ, ಐಶ್ವರ್ಯಾ ರೈ, ಪ್ರಕಾಶ್ ರೈ, ಹೀಗೆ ಆ ಅದೃಷ್ಟ ನನಗೂ ಬಂದಿದೆ ಅನಿಸುತ್ತೆ. ಈಗ ದೇವರು ಬಾಲಿವುಡ್‌ನಲ್ಲಿ ಮಿಂಚಗೆ ನನಗೆ ದೇವರು ಅವಕಾಶ ಕೊಟ್ಟಿದ್ದಾನೆ. ನಾನು ನಿಮ್ಮ ಪ್ರೀತಿಯ ಜಗ್ಗುದಾದ. ಎಲ್ಲರೂ ನನ್ನನ್ನು ಜಗ್ಗುದಾದ ಮತ್ತು ಜಗ್ಗಿ ಎಂದು ಕರೆಯುತ್ತಾರೆ ನಿಜಕ್ಕೂ ಇಷ್ಟವಾಗುತ್ತದೆ.
ವಕೀಲ ಜಗದೀಶ್ ಅವರು ಹಿಂದಿ ಬಿಗ್ ಬಾಸ್ ಶೋಗೆ ಹೋಗುತ್ತಿರುವುದನ್ನು ದೃಢಪಡಿಸಿದ್ದಾರೆ. ಈ ವಾರದೊಳಗೆ ಅವರು ಹಿಂದಿ ಬಿಗ್ ಬಾಸ್ ಶೋ ವೇದಿಕೆಗೆ ಪ್ರವೇಶಿಸುತ್ತಾರೆ ಎಂದು ಹೇಳಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ "ಕರ್ನಾಟಕದ ಕ್ರಶ್" ಎಂದು ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಾವು ಅವರ ಬಾಲಿವುಡ್ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸಲು ಶುಭಾಶಯಗಳನ್ನು ಕೋರುತ್ತೇವೆ.
https://www.facebook.com/reel/1989337601539902