ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆ ನೇರವಾಗಿ ನನ್ನನ್ನು ಮಂಚಕ್ಕೆ ಕರೆಯುತ್ತಾರೆ ಆ ನಟ ?

ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆ ನೇರವಾಗಿ ನನ್ನನ್ನು ಮಂಚಕ್ಕೆ ಕರೆಯುತ್ತಾರೆ ಆ ನಟ ?

90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಶಕೀಲಾ ಖ್ಯಾತ ಹೆಸರು. ಆ ಕಾಲದಲ್ಲಿ ಶಕೀಲಾ ನಟನೆಯ ಬೋಲ್ಡ್‌ ಸಿನಿಮಾಗಳಿ  ಸ್ಟಾರ್ ಹೀರೋಗಳ ಚಿತ್ರಗಳಿಗೆ ಕೂಡ ಸೆಡ್ಡು ಹೊಡೆದಿದ್ದವು ಎಂಬ ಉಲ್ಲೇಖ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿದೆ.ಕೆಲವು ವರ್ಷದ ಬಳಿಕ ನಟಿ ಶಕೀಲಾ ಬೋಲ್ಡ್‌ ಸಿನಿಮಾಗಳಿಂದ ಅಂತರ ಕಾಪಾಡಿಕೊಂಡು ಬಂದರು. ಬಳಿಕ ಮುಖ್ಯವಾಹಿನಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು

ಶಕೀಲಾ ಮಲಯಾಳಂ ಚಿತ್ರರಂಗದ ಕುರಿತು ಮಾತನಾಡಿದ್ದರು. ಮಲಯಾಳಂ ಚಿತ್ರರಂಗದಲ್ಲಿನ ಕಿರುಕುಳದ ಬಗ್ಗೆ ನಟಿ ಶಕೀಲಾ ಮಾತನಾಡಿದ್ದರು. ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಪ್ಯಾನ್ ಇಂಡಿಯಾ ಸಮಸ್ಯೆ ಎಂದು ನಟಿ ಶಕೀಲಾ ಹೇಳಿದ್ದರು.ಮಲಯಾಳಂ ಚಿತ್ರರಂಗದಲ್ಲಿ ಸಮಿತಿ ರಚನೆ ಆಗಿದೆ. ಇದೇ ರೀತಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೂಡ ಸಮಿತಿ ರಚನೆ ಆಗಬೇಕು. ಮಲಯಾಳಂ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗಲ್ಲಿನ ಇಂತಹ ಪರಿಸ್ಥಿತಿ ಹೆಚ್ಚಾಗಿದೆ ಎಂದಿದ್ದರು. 

ಶಕೀಲಾ ಮಲಯಾಳಂ ಚಿತ್ರರಂಗದ ಕುರಿತು ಮಾತನಾಡಿದ್ದರು. ಮಲಯಾಳಂ ಚಿತ್ರರಂಗದಲ್ಲಿನ ಕಿರುಕುಳದ ಬಗ್ಗೆ ನಟಿ ಶಕೀಲಾ ಮಾತನಾಡಿದ್ದರು. ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಪ್ಯಾನ್ ಇಂಡಿಯಾ ಸಮಸ್ಯೆ ಎಂದು ನಟಿ ಶಕೀಲಾ ಹೇಳಿದ್ದರು.

ಹೇಮಾ ವರದಿಯಲ್ಲಿ ಉಲ್ಲೇಖವಾದ ವಿಚಾರವನ್ನು ಶಕೀಲಾ ಒಪ್ಪಿಕೊಂಡಿದ್ದಾರೆ. ಆ ವರದಿಯಲ್ಲಿರುವಂತೆ ಎಣ್ಣೆ ಹೊಡೆದು ನಾಯಕಿಯ ರೂಮ್‌ಗೆ ನುಗ್ಗುವ ಸಂಪ್ರದಾಯ ಮಲಯಾಳಂನಲ್ಲಿದೆ ಎಂದಿದ್ದಾರೆ. 

ಸಂದರ್ಶನದಲ್ಲಿ ತಮಗಾದ ಅನುಭವವನ್ನೂ ಶಕೀಲಾ ಹಂಚಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗವನ್ನೇ ದ್ವೇಷಿಸುವಷ್ಟು ನನಗೆ ಹಿಂಸೆ ನೀಡಿದ್ದರು ಎಂದು ಶಕೀಲಾ ಹೇಳಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ನಾನು ಬಿಕಿನಿ ಹಾಕಿದ್ದೆ. ಆಗ ನನಗೆ ಮೇಕಪ್ ಮಾಡಲು ಬಂದವನು ಎಲ್ಲೆಲ್ಲಿ ಮತ್ತು ಹೇಗೆಲ್ಲ ಮುಟ್ಟಿದ್ದ ಅನ್ನುವುದು ನನಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.