ಕೋಣೆಯಲ್ಲಿ ಶವವಾಗಿ ಪತ್ತೆಯಾದ ಸ್ಟಾರ್ ನಟ! ಏಕಾಏಕಿ ಆಗಿದ್ದೇನು?

ಪ್ರಸಿದ್ಧ ಮಲಯಾಳಂ ಸಿನಿಮಾ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ ಹಠಾತ್ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ ಚೊಟ್ಟನಿಕ್ಕಾರದಲ್ಲಿರುವ ಹೋಟೆಲ್ ಕೋಣೆಯಲ್ಲಿ ಈ ನಟ ಶವವಾಗಿ ಪತ್ತೆಯಾಗಿದ್ದಾರೆ. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನವಾಸ್ ಸಿನಿಮಾ ಚಿತ್ರೀಕರಣಕ್ಕಾಗಿ ತಂಗಿದ್ದ ಸ್ಥಳದ ಬಗ್ಗೆ ಮಾಹಿತಿ ನೀಡಲಾಗಿದೆ. ಶುಕ್ರವಾರ ಸಂಜೆ ನವಾಸ್ ಹೋಟೆಲ್ ಖಾಲಿ ಮಾಡಿ ಹೊರ ಹೋಗಬೇಕಿತ್ತು. ಆದರೆ ಅವರು ಬಹಳ ಸಮಯವಾದರೂ Reception ಬಳಿ ಬಂದಿರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿ ಅವರ ಕೋಣೆಗೆ ಹೋಗಿ ನೋಡಿದಾಗ ಅಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು.
ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆಂದು ಘೋಷಿಸಿದರು. ನಟನಿಗೆ ಹೃದಯಾಘಾತವಾಗಿದ್ದು, ಅದು ಅವರ ಸಾವಿಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇಲ್ಲಿಯವರೆಗೆ ನಟನ ಸಾವಿಗೆ ಯಾವುದೇ ನಿರ್ದಿಷ್ಟ ಕಾರಣ ಬಹಿರಂಗಗೊಂಡಿಲ್ಲ. ಅವರ ಕೋಣೆಯಲ್ಲಿಯೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಬಹುಮುಖ ಪ್ರತಿಭೆಯ ನವಾಸ್ ಮಲಯಾಳಂ ಚಿತ್ರರಂಗದಲ್ಲಿ ಮಿಮಿಕ್ರಿ ಕಲಾವಿದ, ಹಿನ್ನೆಲೆ ಗಾಯಕ ಮತ್ತು ನಟನಾಗಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ಅದ್ಭುತ ಕೆಲಸಕ್ಕಾಗಿ ಅಪಾರ ಪ್ರಶಂಸೆಯನ್ನೂ ಪಡೆದುಕೊಂಡಿದ್ದರು.
ಕಲಾವಿದ, ಹಿನ್ನೆಲೆ ಗಾಯಕ ಮತ್ತು ನಟನಾಗಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ಅದ್ಭುತ ಕೆಲಸಕ್ಕಾಗಿ ಅಪಾರ ಪ್ರಶಂಸೆಯನ್ನೂ ಪಡೆದುಕೊಂಡಿದ್ದರು.
ಕಲಾಭವನ್ ನವಾಸ್ 1995ರಲ್ಲಿ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿತು. ಅವರು ಮೊದಲು ಮಲಯಾಳಂ ಚಿತ್ರ 'ಚೈತನ್ಯಂ' ನಲ್ಲಿ ಕಾಣಿಸಿಕೊಂಡರು. ಅವರು ನಟಿಸಿದ ಚಿತ್ರಗಳಲ್ಲಿ ಜೂನಿಯರ್ ಮಂದ್ರೇಕ್, ಚಂದಮಾಮ, ಮಿಮಿಕ್ಸ್ ಆಕ್ಷನ್ 500, ಒನ್ ಮ್ಯಾನ್ ಶೋ, ಮಟ್ಟುಪೆಟ್ಟಿ ಮಚ್ಚನ್ ಮುಂತಾದ ಜನಪ್ರಿಯ ಚಿತ್ರಗಳು ಸೇರಿವೆ. ಅವರು ಕೊನೆಯದಾಗಿ ಡಿಟೆಕ್ಟಿವ್ ಉಜ್ಜವಾಲನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಅವರು ಅನೇಕ ಟಿವಿ ಕಾರ್ಯಕ್ರಮಗಳಲ್ಲಿಯೂ ನಟಿಸಿದ್ದರು. ನಟನ ನಿಧನದ ಸುದ್ದಿ ಅವರ ಅಭಿಮಾನಿಗಳು ಮತ್ತು ಚಿತ್ರೋದ್ಯಮವನ್ನು ಶೋಕದಲ್ಲಿ ಮುಳುಗಿಸಿದೆ.