ನಾನೇನು ಸುಮ್ಮನೆ ಬಿಡಲಿಲ್ಲ !! ಮಾಜಿ ಪತಿ ಬಗ್ಗೆ ಆ್ಯಂಕರ್ ಜಾನ್ವಿ ಶಾಕಿಂಗ್ ಹೇಳಿಕೆ !!

ಆ್ಯಂಕರ್ ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಪ್ರವೇಶಿಸಿ, ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಈ ನಡುವೆ ಅವರ ವೈಯಕ್ತಿಕ ಜೀವನವೂ ಚರ್ಚೆಗೆ ಗ್ರಾಸವಾಗಿದೆ. ಹಿಂದೆಯೇ ವಿಚ್ಛೇದನದ ವಿಚಾರವಾಗಿ ಸುದ್ದಿಯಾಗಿದ್ದ ಜಾನ್ವಿ, ಈ ಬಾರಿ ಮನೆಯಲ್ಲಿ ತಮ್ಮ ಜೀವನದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಜಾನ್ವಿ, ಮಲ್ಲಮ್ಮ ಮತ್ತು ಕಾಕ್ರೋಚ್ ಸುಧಿ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದ ಸಂದರ್ಭ, ಜಾನ್ವಿ ಮಲ್ಲಮ್ಮಗೆ “ನೀವು ಸ್ಫೂರ್ತಿದಾಯಕ” ಎಂದು ಹೇಳಿದರು. ಮಲ್ಲಮ್ಮ ಅವರ 15ನೇ ವಯಸ್ಸಿಗೆ ಮದುವೆಯಾಗಿದ್ದು, ನಂತರ ಮಕ್ಕಳಿಗಾಗಿ ಬದುಕಿದ ಕಥೆ ಕೇಳಿದಾಗ ಜಾನ್ವಿಯೂ ಭಾವುಕವಾಗಿ ತಮ್ಮ ಜೀವನದ ಪಾಠಗಳನ್ನು ಹಂಚಿಕೊಂಡರು.
“ಮದುವೆ ಆದಾಗ ನಾನು ಇನ್ನೂ ಬೆಂಗಳೂರಿಗೆ ಬಂದಿರಲಿಲ್ಲ” ಎಂದು ಜಾನ್ವಿ ತಮ್ಮ ಕಷ್ಟಗಳನ್ನು ಹೇಳಿದಾಗ, ಮಲ್ಲಮ್ಮ “ಈಗ ನಿಮ್ಮ ಪತಿ ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು. ಜಾನ್ವಿ ಸ್ಪಷ್ಟವಾಗಿ “ಡಿವೋರ್ಸ್ ಆಗಿದೆ” ಎಂದು ಉತ್ತರಿಸಿದರು. ಮಲ್ಲಮ್ಮ “ಮದುವೆ ಆದ್ಮೇಲೆ ಹಾಗೆಲ್ಲ ಬಿಡಬಾರದು” ಎಂದು ಸಲಹೆ ನೀಡಿದಾಗ, ಜಾನ್ವಿ “ನಾನು ಜೊತೆಯಲ್ಲಿ ಇರುವಾಗಲೇ ಅವರಿಗೆ ಬೇರೆ ಮದುವೆ ಆಗಿ ಮಗು ಆಗಿತ್ತು. ಹೀಗಾದಾಗ ಆ ಸಂಬಂಧಕ್ಕೆ ಅರ್ಥವಿಲ್ಲ” ಎಂದು ವಿವರಿಸಿದರು. ಈ ಮಾತು ಕೇಳಿದ ಮಲ್ಲಮ್ಮ ಸಹ ಜಾನ್ವಿಯ ಮಾತಿಗೆ ಒಪ್ಪಿಗೆ ಸೂಚಿಸಿದರು.
ಆ್ಯಂಕರಿಂಗ್ ಮೂಲಕ ಜನಪ್ರಿಯರಾದ ಜಾನ್ವಿ, ವಿಚ್ಛೇದನದ ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದರು. ನಂತರ ಅವರಿಗೆ ಸಿನಿಮಾಗಳಲ್ಲಿ ನಟನೆಯ ಅವಕಾಶಗಳು ಬಂದವು. ಈಗ ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸುತ್ತಿದ್ದಾರೆ. ಈ ಶೋದಲ್ಲಿ ಅವರು ಮಿಂಚಿದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಿನಿಮಾ ಅವಕಾಶಗಳು ಬರುವ ಸಾಧ್ಯತೆ ಇದೆ.