"ಜೊತೆ ಜೊತೆಯಲಿ" ಸೀರಿಯಲ್ ಮೀರ ಪಾತ್ರದಲ್ಲಿ ಅಭಿನಿಯಿಸಿದ್ದ ಮಾನಸ ಮನೋಹರ್ ಎರಡನೇ ಮದುವೆ! ಮೊದಲ ಗಂಡನ ಬಗ್ಗೆ ಹೇಳಿದಿಷ್ಟು ?

ಕನ್ನಡ ಧಾರಾವಾಹಿ "'ಜೊತೆ ಜೊತೆಯಲಿ "ಯಲ್ಲಿ ಅನಿರುದ್ಧ್ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿ ಮೀರಾ ಪಾತ್ರದಲ್ಲಿ ಅಭಿನಯಿಸಿದ ಮಾನಸ ಮನೋಹರ್, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಅವರು "ಲಕ್ಷ್ಮಿ ನಿವಾಸ" ಧಾರಾವಾಹಿಯಲ್ಲಿ ಸಿದ್ದೇಗೌಡರ ಅತ್ತಿಗೆ ಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ, ಅವರು ಫುಟ್‌ಬಾಲ್ ಆಟಗಾರ ಪ್ರೀತಮ್ ಚಂದ್ರ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಅವರ ಎರಡನೇ ಮದುವೆ.
ಈ ಸಂಬಂಧದಲ್ಲಿ,ಮಾನಸ ಅವರು ತಮ್ಮ ಮೊದಲ ಮದುವೆ ಕೇವಲ ಶಾರೀರಿಕ ಸಂಬಂಧವನ್ನು ಒಳಗೊಂಡಿದ್ದ "ಸಮಾಯೋಜನೆ ಮದುವೆ" ಎಂದು ಬಹಿರಂಗಪಡಿಸಿದ್ದಾರೆ. "ನಾನು ಈ ಮದುವೆಯಲ್ಲಿ ಬಹಳಷ್ಟು ಕಷ್ಟಪಟ್ಟೆ. ಈಗ ನನಗೆ ನಿಜವಾದ ಹೃದಯವಂತ ವ್ಯಕ್ತಿಯನ್ನು ಕಂಡುಕೊಂಡಿದ್ದೇನೆ. ಈ ವ್ಯಕ್ತಿಯನ್ನು ಮದುವೆಯಾಗುವುದರಲ್ಲಿ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ" ಎಂದು ಅವರು ಹೇಳಿದ್ದಾರೆ.
ಹಾಗೇ ಇದು ಮಾನಸ ಅವರಿಗೆ ಎರಡನೇ ಮದುವೆ. ಅದರ ಬಗ್ಗೆಯೂ ನೆಟ್ಟಿಗರು ಕಮೆಂಟ್ ಹಾಕಿದ್ದಾರೆ. ಅದನ್ನು ಪಾಸಿಟಿವ್ ಹಾಗೇ ತೆಗೆದುಕೊಂಡಿರೋ ಮಾನಸ, ಅದಕ್ಕೂ ಉತ್ತರಿಸಿದ್ದಾರೆ ನಿಮ್ಮ ಅನುಮಾನಗಳನ್ನು ಹೋಗಲಾಡಿಸುತ್ತಿದ್ದೇನೆ. ಹೌದು ಇದು ನನ್ನ ಎರಡನೇ ಮದುವೆ. ಜೀವನದಲ್ಲಿ ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಆದರೂ ಎಲ್ಲರ ಒಳಿತಿಗಾಗಿ ಆ ಸಂಬಂಧವನ್ನು ಮುಂದುವರೆಸಬೇಕು. ಆದರೆ ಈಗ ನಾನು ನನ್ನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಮತ್ತು ನಾನಿ ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ.
ಅವರ ಹೆಸರು ಪ್ರೀತಂ ಚಂದ್ರ. ಫುಟ್ ಬಾಲ್ ಪ್ಲೇಯರ್ ಎಂಬುದು ಅವರ ಸೋಷಿಯಲ್ ಮೀಡಿಯಾ ನೋಡಿದಾಗ ತಿಳಿಯುತ್ತೆ. ಹಾಗೇ ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ.
"ನನ್ನ ಎಲ್ಲಾ ಅನುಯಾಯಿಗಳು ನನ್ನನ್ನು ಆಶೀರ್ವದಿಸಿ, ನಾನು ಸಂತೋಷದ ಜೀವನವನ್ನು ನಡೆಸಲು ಸಹಾಯಮಾಡಿ" ಎಂದು ಮಾನಸ ಮನೋಹರ್ ವಿನಂತಿಸಿದ್ದಾರೆ. "ನಿಮ್ಮೆಲ್ಲರಿಗೂ ಧನ್ಯವಾದಗಳು" ಎಂದು ಅವರು ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ( video credit : Mega Suddi )