ಮಗನ ವಿಚಾರದಲ್ಲಿ ಕಣ್ಣೀರ್ ಹಾಕಿದ ಮೇಘನಾ ರಾಜ್!! ಅಸಲಿ ಕಾರಣ ಇಲ್ಲಿದೆ

ಮಗನ ವಿಚಾರದಲ್ಲಿ ಕಣ್ಣೀರ್ ಹಾಕಿದ ಮೇಘನಾ ರಾಜ್!! ಅಸಲಿ ಕಾರಣ ಇಲ್ಲಿದೆ

ಇನ್ನೂ ಮೇಘನಾ ರಾಜ್ ಬಗ್ಗೆ ಮಾತನಾಡಿದ ಸುಂದರ್‌ ರಾಜ್ ಮೇಘನಾ ತುಂಬಾ ಸ್ಟ್ರಾಂಗ್ ಎಂದಿದ್ದಾರೆ. ಚಿರಂಜೀವಿ ಸರ್ಜಾ ಅಗಲಿದಾಗ ಮೇಘನಾ ಗರ್ಭಿಣಿ. ಆಗ ಅವರಿಗಾದ ನೋವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮೇಘನಾಗೆ ಹೇಗೆ ಧೈರ್ಯ ಹೇಳಬೇಕು ಗೊತ್ತಾಗಲಿಲ್ಲ. ಆದರೂ ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡು ಮೇಘನಾ ಜೊತೆ ನಿಂತುಕೊಂಡ್ವಿ. ಮೇಘನಾ ರಾಜ್‌ಗೆ ಸಿಂಪತಿ ಅಂದರೆ ಆಗಲ್ಲ. ಅವಳಿಗೆ ಯಾರೂ ಕೂಡ ಅಯ್ಯೋ ಅನ್ಬಾರ್ದು. ಇದು ಅವಳಿಗೆ ಇಷ್ಟ ಆಗುವುದಿಲ್ಲ. ಮೇಘನಾ ತನ್ನ ಜೀವನ ತಾನೇ ನೋಡಿಕೊಳ್ಳುತ್ತಾಳೆ. ರಾಯನ್‌ಗೆ ಸ್ನಾನ, ಊಟ, ಶಾಲೆಗೆ ಕರೆದುಕೊಂಡು ಹೋಗುವುದು ಎಲ್ಲವೂ ಮೇಘನಾದ್ದೇ ಕೆಲಸ.

ರಾಯನ್‌ಗೆ ತಂದೆ ಇಲ್ಲ ಅನ್ನೋದನ್ನು ಹೇಳುವುದು ಕಷ್ಟ.. ಮನುಷ್ಯ ಹೋಗ್ತಾ ಹೋಗ್ತಾ ಮಗುವಾಗುತ್ತಾನೆ. ಯಾಕೆಂದರೆ ಇಷ್ಟೆಲ್ಲಾ ಕಷ್ಟಗಳನ್ನು ನೆನಪು ಇಟ್ಟುಕೊಂಡರೆ ಹುಚ್ಚನಾಗ್ತಾನೆ. ಅದಕ್ಕೆ ಮರಿವಿನ ಶಕ್ತಿ ಕೊಟ್ಟಿರೋದು ದೇವರು. ನಾವು ಹಳೆಯದನ್ನು ಮರೆತು ಮುಂದೆ ಹೋಗಬೇಕು. ಈಗ ರಾಯನ್‌ಗೆ ನಾಲ್ಕುವರೆ ವರ್ಷ. ಮುಂದೆ ರಾಯನ್‌ಗೆ ತಂದೆ ಇಲ್ಲ ಎಂದು ಹೇಳುವುದು ನಮಗೆ ಕಷ್ಟ ಇದೆ. ಯಾಕೆಂದರೆ ರಾಯನ್‌ಗೆ ತಾಯಿ, ತಾತ, ಅಜ್ಜಿ ಎಲ್ಲರೂ ಇದ್ದಾರೆ. ಆದರೆ ಅವನ ಸ್ನೇಹಿತರೊಂದಿಗೆ ಹೋದಾಗ ಅವನಿಗೆ ಅಪ್ಪ ಇಲ್ಲ ಅನ್ನೋ ನೋವು ಆಗೋದು ನೆನಪಿಸಿಕೊಂಡರೆ ತುಂಬಾ ನೋವಾಗುತ್ತದೆ.

ದುಡ್ಡು, ಬಟ್ಟೆ, ಬಂಗಲೆ, ಕಾರು ಇಲ್ಲ ಅನ್ನೋದು ಕೊರಗಲ್ಲ ಆದರೆ ತಂದೆ ತಾಯಿಯಲ್ಲಿ ಯಾರೋ ಒಬ್ಬರು ಇಲ್ಲ ನನಗೆ ಅನ್ನೋದು ಕೊರಗಂತೆ. ತಂದೆ-ತಾಯಿ ಪ್ರೀತಿಗೆ ರೀಪ್ಲೇಸ್‌ಮೆಂಟ್ ಇಲ್ಲ ಎಂದಿದ್ದಾರೆ ಸುಂದರ್‌ ರಾಜ್. ರಾಯನ್‌ಗೆ ಅಮ್ಮ ಅನ್ನು ಅಂದರೆ ಅಪ್ಪ ಅಂತಾನೆ. ಆ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.    ಇದನ್ನು ಮೇಘನಾ ರಾಜ್ ಕೇಳಿ ಅಮ್ಮ ಅನ್ನುವ ಬದಲು ಯಾವಾಗಲು ಅಪ್ಪ ಅನ್ನುತ್ತಾ ಇರುತ್ತಾನೆ . ಇದನ್ನು ಕೇಳಿ ನನಗೆ ಮನಸ್ಸಿಗೆ ತುಂಬಾ ನೋವಾಗುತ್ತೆ . ಅವರ ಅಪ್ಪ ಬದುಕಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವಾ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ ಆದರೆ ಅವರು ದೊಡ್ಡವನಾದ ಮೇಲೆ ಅವನಿಗೆ ಅಪ್ಪ ಇಲ್ಲ ಅನ್ನೋ ಕೊರಗು ಕಾಡುತ್ತದೆ ಅನ್ನೋ ನೋವು ನಮಗಿದೆ ಎಂದಿದ್ದಾರೆ ಸುಂದರ್ ರಾಜ್

ಹೌದು ಕಲಾಮಾಧ್ಯಮ ಯುಟ್ಯೂಬ್ ಚಾನಲ್‌ ಸಂದರ್ಶನವೊಂದರಲ್ಲಿ ಮಾತನಾಡಿದ ಸುಂದರ್‌ರಾಜ್ ಅವರು ದಾಂಪತ್ಯ ಜೀವನದಲ್ಲಿ ಪತಿ ಪತ್ನಿ ಹೇಗಿರಬೇಕು? ಬದುಕಲು ಹಣ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಿದ್ದಾರೆ. ಅವರಾಡಿದ ಮುತ್ತಿನಂತಹ ಮಾತುಗಳು ಪ್ರತಿಯೊಬ್ಬರಿಗೂ ಶಕ್ತಿಯಾಗಲಿದೆ. ಮದುವೆಯಾಗಿ ವಿಚ್ಚೇದನ ಪಡೆದುಕೊಳ್ಳುವುದಕ್ಕಿಂತ ಮದುವೆಯಾಗುವ ಮುನ್ನ ಏನು ಯೋಚನೆ ಮಾಡಬೇಕು ಹಾಗೂ ಮದುವೆ ನಂತರ ಹೇಗಿರಬೇಕು ಅನ್ನೋದನ್ನು ವಿವರಿಸಿದ್ದಾರೆ.