ನಟಿ ಮೇಘನಾ ರಾಜ್‌ ಕನ್ನಡ ಚಿತ್ರ ರಂಗ ತೊರೆಯಲು ನಿರ್ಧಾರ !! ಅಸಲಿ ಕಾರಣ ಇಲ್ಲಿದೆ ನೋಡಿ

ನಟಿ ಮೇಘನಾ ರಾಜ್‌ ಕನ್ನಡ ಚಿತ್ರ ರಂಗ ತೊರೆಯಲು ನಿರ್ಧಾರ !! ಅಸಲಿ ಕಾರಣ ಇಲ್ಲಿದೆ ನೋಡಿ

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ತಮ್ಮ ಮದುವೆ ಹಾಗೂ ಪತಿ ಚಿರು ನಿಧನದ ನಂತರ ಅವರು ಸಿನಿಮಾಗಳಿಂದ ಸ್ವಲ್ಪ ದೂರ ಉಳಿದು, ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಕನ್ನಡ ಪ್ರೇಕ್ಷಕರು ಮೇಘನಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಒತ್ತಾಯ ವ್ಯಕ್ತಪಡಿಸುತ್ತಿದ್ದರೂ, ಇದೀಗ ಅವರು ಕನ್ನಡ ಚಿತ್ರರಂಗ ತೊರೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಮೇಘನಾ ಮೂಲತಃ ಕನ್ನಡದ ಸಿನಿ ಕುಟುಂಬದಲ್ಲಿ ಜನಿಸಿದರೂ, ತಮ್ಮ ಅಭಿನಯಯಾತ್ರೆಯನ್ನು ಬೇರೆ ಭಾಷಾ ಚಿತ್ರರಂಗಗಳಿಂದ ಆರಂಭಿಸಿದ್ದರು. ತೆಲುಗು ಸಿನಿಮಾದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ಮಿಂಚಿದರು. ಸ್ಯಾಂಡಲ್‌ವುಡ್‌ನಲ್ಲಿ ಲೂಸ್ ಮಾದ ಯೋಗಿ ನಟನೆಯ ಪುಂಡ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯವಾದ ಮೇಘನಾ, ಬಳಿಕ ಹಲವು ಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು.

ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಅವರಿಗೆ ಅವಕಾಶಗಳು ಕಡಿಮೆಯಾಗಿರುವ ಕಾರಣ, ಮೇಘನಾ ಬೇರೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಅಚ್ಚರಿಯ ಬೆಳವಣಿಗೆಯಂತೆ, ತಮಿಳಿನ ಖ್ಯಾತ ನಟನ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಜೈಲರ್-2 ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ, ಮೇಘನಾ ರಾಜ್ ಸರ್ಜಾ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ದಶಕಗಳ ಬಳಿಕ ಅವರು ತಮಿಳು ಚಿತ್ರರಂಗಕ್ಕೆ ಈ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಈ ಪ್ಯಾನ್-ಇಂಡಿಯನ್ ಸಿನಿಮಾದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಮೇಘನಾ ಈಗಾಗಲೇ ಕೆಲವು ದಿನಗಳಿಂದ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಅವರ ಪಾತ್ರದ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಕನ್ನಡ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಮೇಘನಾ ತಮಿಳಿನತ್ತ ಮುಖ ಮಾಡಿದ್ದಾರೆ. ಈ ಪ್ಯಾನ್-ಇಂಡಿಯಾ ಸಿನಿಮಾದ ಮೂಲಕ ಅವರು ಮತ್ತೆ ಬಹುಭಾಷಾ ಚಿತ್ರರಂಗದಲ್ಲಿ ಮಿಂಚಲಿದ್ದಾರೆ ಎಂಬ ವರದಿಗಳು ಸದ್ಯ ಹರಿದಾಡುತ್ತಿವೆ.