ಬಿಗ್ ಬಾಸ್ ಇಂದ ಆಚೆ ಬಂದ ಮೋಕ್ಷಿತಾ ಪೈ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದಾರೆ : ಏನದು ನೋಡಿ ?

ಮೋಕ್ಷಿತಾ ಪೈ ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ಒಂದು ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಅಲ್ಲದೆ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೂಡ ಕೊಟ್ಟಿದ್ದಾರೆ ಹಾಗಾದ್ರೆ ಮೋಕ್ಷಿತಾ ಪೈ ಹೇಳಿದ್ದೇನು ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲಾ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ತುಂಬಾ ನೆಗೆಟಿವ್ ಆಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು ಇದು ಮೋಕ್ಷಿತ ಅವರ ಕುಟುಂಬಕ್ಕೂ ಕೂಡ ತುಂಬಾ ಬೇಸರವನ್ನ ಉಂಟುಮಾಡಿತ್ತು ಎಲ್ಲರಿಗೂ ಗೊತ್ತಿರುವಂತೆ ಕಳೆದ ವಾರ ಎಲಿಮಿನೇಟ್ ಆಗಿದ್ದ ಧನರಾಜ್ ಅವರು ತಮಗೆ ಬಂದಿದ್ದ ಎಲ್ಲಾ ಹಣವನ್ನು ಕೂಡ ಪುತ್ತೂರಿನ ಆಶ್ರಮ ಒಂದಕ್ಕೆ ದಾನ
ಮಾಡಿದ್ದರು ಇದೀಗ ಮೋಕ್ಷಿತಾ ಪೈ ಕೂಡ ಧನರಾಜ್ ಅವರಂತೆ ಬಿಗ್ ಬಾಸ್ ಮನೆಯಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ತಮ್ಮನ ಹೆಸರಿನಲ್ಲಿ ಅಂಗವಿಕಲರ ಆಶ್ರಮಕ್ಕೆ ದಾನ ಮಾಡಿದ್ದಾರೆ ಎರಡು ಲಕ್ಷ ಹಣವನ್ನು ಅಂಗವಿಕಲರ ಆಶ್ರಮಕ್ಕೆ ಮೋಕ್ಷಿತ ಪೈ ದಾನ ಮಾಡಿದ್ದಾರೆ ಇದು ನಿಜವಾಗಿಯೂ ಅವರ ಒಳ್ಳೆತನವನ್ನ ತೋರಿಸುತ್ತೆ
ಬಿಗ್‌ಬಾಸ್ ಮನೆಯಲ್ಲಿ 120 ದಿನಗಳ ಜರ್ನಿ ಕಂಪ್ಲೀಟ್ ಮಾಡಿದ ಮೋಕ್ಷಿತಾ ಪೈ ಕ್ರಶ್ ಅಂತಲೇ ಹೆಸರಾಗಿದ್ದಾರೆ. ಹಾಗಾದರೆ ಮೋಕ್ಷಿತಾ ಮುಂದಿನ ನಡೆ ಏನು? ಸೀರಿಯಲ್ ಮಾಡ್ತಾರಾ? ಸಿನಿಮಾ ಮಾಡ್ತಾರಾ? ಮದುವೆ ಆಗ್ತಾರಾ? ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎನ್ನುವ ಬಗ್ಗೆ ಸ್ವತ: ಅವರೇ ವಿವರಣೆ ನೀಡಿದ್ದಾರೆ ಸಂದರ್ಶನವೊಂದರಲ್ಲಿ ಮಾತನಾಡಿದ ಬಿಗ್‌ಬಾಸ್ ಕನ್ನಡ ಸೀಸನ್ 11ರ ಟಾಪ್ 4 ಸ್ಪರ್ಧಿ ಮೋಕ್ಷಿತಾ ಪೈ ಈಗಾಗಲೇ ಸಿನಿಮಾ ಮಾಡಿದ್ದಾರೆ. ಆದರೆ ಒಂದು ಸಿನಿಮಾ ಇನ್ನೂ ಕೂಡ ಪೂರ್ಣಗೊಂಡಿಲ್ಲ. ಆ ಸಿನಿಮಾ ಬಹುತೇಕ ಪೂರ್ಣಗೊಂಡಿದ್ದು 2%ರಷ್ಟು ಮಾತ್ರ ಕೆಲಸ ಬಾಕಿ ಇದೆ. ಇದೀಗ ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿದೆ ಎಂದು ಮೋಕ್ಷಿತಾ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮೋಕ್ಷಿತಾ ಅವರೇ ಹೇಳುವಂತೆ ಅವರದ್ದು ಒಂದು ಸಿನಿಮಾ ಕಂಪ್ಲೀಟ್ ಆಗಿದೆ. ಇನ್ನೊಂದು ಸಾಂಗ್ ಬಾಕಿ ಇದೆಯಂತೆ. ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಮೋಕ್ಷಿತಾ ಕಪ್ಪು ಹುಡುಗಿಯಾಗಿರುತ್ತಾರಂತೆ. ಹೀಗೆ ಹೇಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ ಮೋಕ್ಷಿತಾ. ಮತ್ತು ಸಂದರ್ಶನ್ ಒಂದರಲ್ಲಿ ಇಂಟರ್ವ್ಯೂ ಕೊಟ್ಟಾಗ ನನಗೆ ಇಷ್ಟ ಆಗುವ ಹುಡುಗ ಸಿಕ್ಕರೆ ಗ್ಯಾರಂಟಿ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ