ತ್ರಿವಿಕ್ರಮ್ ಗೆ ಗ್ರಹಚಾರ ಬಿಡಿಸಿದ ಮೋಕ್ಷಿತ ಪೈ : ನಾನಾ ನೀನಾ ನೋಡೇ ಬಿಡೋಣ ಸವಾಲ್ ?

ತ್ರಿವಿಕ್ರಮ್ ಗೆ ಗ್ರಹಚಾರ ಬಿಡಿಸಿದ ಮೋಕ್ಷಿತ ಪೈ : ನಾನಾ ನೀನಾ ನೋಡೇ ಬಿಡೋಣ ಸವಾಲ್ ?

ಇದೀಗ ಬಿಡುಗಡೆಯಾಗಿರುವ ಪ್ರೋಮೋ ನೋಡಿದರೆ, ಮೋಕ್ಷಿತಾ ಆಟದ ವೈಖರಿಯೇ ಬದಲಾಯ್ತಾ ಎಂಬ ಅನುಮಾನ ಹುಟ್ಟಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಮೋಕ್ಷಿತಾರ ಉಗ್ರರೂಪವನ್ನ ಕಾಣಬಹುದು. ತ್ರಿವಿಕ್ರಮ್‌ ವಿರುದ್ಧ ಅವರು ತಿರುಗಿಬಿದ್ದಿದ್ದಾರೆ. ಮೋಕ್ಷಿತಾ 10 ವಾರ ಉಳಿಯುತ್ತಾರೆ ಎಂದು ತ್ರಿವಿಕ್ರಮ್‌ ಹೇಳಿದ್ದೇ ಈ ಜಗಳಕ್ಕೆ ಕಾರಣ. ಗೌತಮಿ ಮತ್ತು ಮೋಕ್ಷಿತಾ ಇಬ್ಬರೂ ತ್ರಿವಿಕ್ರಮ್‌ರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅದರಲ್ಲೂ ಮೋಕ್ಷಿತಾ ಅವರು ತ್ರಿವಿಕ್ರಮ್‌ರಿಗೆ ನೀವು ಗೋಮುಖ ವ್ಯಾಘ್ಯನ ತರಹ ಆಟವಾಡ್ತಿದ್ದೀರಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಯಾರು 10 ವಾರದವರೆಗೆ ಇರ್ತಾರೆ, ಯಾರು ಫಿನಾಲೆ ತನಕ ಇರ್ತಾರೆ ನೋಡೇಬಿಡೋಣ ಎಂದು ಖಡಕ್‌ ಸವಾಲು ಕೂಡ ಹಾಕಿದ್ದಾರೆ..

ತ್ರಿವಿಕ್ರಮ್ ಮತ್ತು ಮೋಕ್ಷಿತಾ ಈಗ ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ಅದರಲ್ಲೂ ತ್ರಿವಿಕ್ರಮ್ ಆಡಿರುವ ಮಾತು ಮೋಕ್ಷಿತಾ ಪೈ ಕಿವಿಗೆ ಬಿದ್ದಿದ್ದು, ಇದೇ ವಿಚಾರವಾಗಿ ವಾಗ್ವಾದಕ್ಕಿಳಿದ್ದಿದ್ದಾರೆ ಮೋಕ್ಷಿತಾ. ಉಗ್ರಂ ಮಂಜು  ಜೊತೆಗೆ ತ್ರಿವಿಕ್ರಮ್ ಮಾತನಾಡುತ್ತಾ, ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಈಗ ಮೋಕ್ಷಿತಾ ಕಿವಿಗೆ ಬಿದ್ದಿದೆ. ನಾನು 10 ವಾರ ಇರುತ್ತೇನೆ ಅಂತ ಡಿಸೈಡ್ ಮಾಡೋಕೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ ಮೋಕ್ಷಿತಾ. ಅದಕ್ಕೆ ತ್ರಿವಿಕ್ರಮ್, ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದು ತಿರುಗೇಟು ನೀಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಮೊದಲಿನಿಂದಲೂ ಸಿಕ್ಕಾಪಟ್ಟೆ ಸೈಲೆಂಟ್‌ ಆಗಿದ್ದವರು, ಬೇಕಾದಷ್ಟಕ್ಕೆ ಮಾತ್ರ ಮಾತಾಡಿಕೊಂಡು ಇದ್ದವರು ಎಂದರೆ ಗೌತಮಿ ಮತ್ತು ಮೋಕ್ಷಿತಾ ಆಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಇವರಿಬ್ಬರ ವರ್ತನೆ, ನಡತೆ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ತುಂಬ ಶಾಂತವಾಗಿರುತ್ತಾರೆ..ಬೇಡದ ವಿಷಯಕ್ಕೆ ಮೂಗು-ಬಾಯಿ ತೂರಿಸುವುದಿಲ್ಲ ಎಂದು ಹೇಳಲಾಗುತ್ತಿತ್ತು. ಅದೇನೇ ಇದ್ದರೂ ಅಗತ್ಯಬಿದ್ದಲ್ಲಿ ತಿರುಗಿಬೀಳ್ತೇವೆ ಎಂಬ ಸಂದೇಶವನ್ನ ಇಂದು ಮೋಕ್ಷಿತಾ ಪೈ ಕೊಟ್ಟಂತೆ ಕಾಣುತ್ತಿದೆ.