ಆತನಿಗೆ ಪ್ರೀತಿ ಇದ್ದಿದ್ದು ಅದರ ಮೇಲೆ ಮಾತ್ರ!! ನಮ್ರತಾ ಗೌಡ ಶಾಕಿಂಗ್ ಹೇಳಿಕೆ!!

ನಟಿ ನಮ್ರತಾ ಗೌಡ ತಮ್ಮ ಬಾಲ್ಯದಲ್ಲಿ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಆದರೆ ನಾಗಿಣಿ ಧಾರಾವಾಹಿಯ ಮೂಲಕ ಅವರು ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಅವರ ಸಿನಿ ಜೀವನದಲ್ಲಿ ಹೊಸ ಅವಕಾಶಗಳು ಲಭಿಸುತ್ತಿವೆ. ಈ ನಡುವೆ, ತಮ್ಮ ಪ್ರೇಮ ಜೀವನ ಮತ್ತು ಟ್ರೋಲ್ಗಳ ಬಗ್ಗೆ ಅವರು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಮ್ರತಾ ತಮ್ಮ ಕಾಲೇಜು ದಿನಗಳ ಪ್ರೀತಿಯ ಅನುಭವವನ್ನು ಹಂಚಿಕೊಂಡಿದ್ದು, ಅದು ಅವರ ಮೊದಲ ಮತ್ತು ಕೊನೆಯ ಪ್ರೀತಿಯಾಗಿ ಉಳಿದಿದೆ ಎಂದು ಹೇಳಿದ್ದಾರೆ. ಎಸ್ಎಸ್ಎಲ್ಸಿ ಮುಗಿಸಿ ಪಿಯುಸಿಗೆ ಕಾಲಿಟ್ಟಾಗ, ಒಬ್ಬ ಹುಡುಗ ಅವರ ಹಿಂದೆ ಬಿದ್ದು ಪ್ರೀತಿಸುತ್ತಿದ್ದ. ಪ್ರಾರಂಭದಲ್ಲಿ ಅವರು ಆತನನ್ನು ಒಪ್ಪಿಕೊಳ್ಳಲಿಲ್ಲ,ಪ್ರೀತಿ ಮಾಡಿದೆ ಅನ್ನೋ ಒಂದೇ ಕಾರಣಕ್ಕೆ, 'ನನ್ನ ಜೀವನದಲ್ಲಿ ನೀನು ಇರಬೇಕು' ಅಂತ ತುಂಬಾ ಒತ್ತಾಯ ಮಾಡುತ್ತಿದ್ದೆ. ಮದುವೆಯಾಗಬೇಕು ಅಂತೆಲ್ಲಾ ಅಂದುಕೊಂಡಿದ್ದೆ. ಸಮಯ ಕಳೆಯುತ್ತಿದ್ದಂತೆಯೇ ನಾನು ಪ್ರೀತಿ ಮಾಡುತ್ತಿದ್ದ ಹುಡುಗ ಬದಲಾಗುತ್ತಾ ಹೋದರು. ತುಂಬಾ ಕುಗ್ಗಿದ್ದೆ, 6 ತಿಂಗಳ ಕಾಲ ಡಿಪ್ರೆಸ್ಡ್ ಆಗಿದ್ದೆ. ಅಂತೂ ಕಷ್ಟ ಪಟ್ಟು ಆ ಸಂಬಂಧದಿಂದ ಹೊರ ಬಂದೆ. ಈಗ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ.
ಆದರೆ ನಂತರ ಅವರ ಪ್ರೀತಿಗೆ ಸಮ್ಮತಿಸಿದರು. ಕಾಲೇಜಿನಲ್ಲಿ ಅವರ ಪ್ರೇಮ ಕಥೆ ಬಹಳ ಪ್ರಸಿದ್ಧವಾಗಿತ್ತು. ಆದರೆ, ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ, ಸಮಯದ ಕೊರತೆಯಿಂದಾಗಿ ಅವರ ಸಂಬಂಧ ಮುಕ್ತಾಯವಾಯಿತು.
ಬಿಕಿನಿ ವಿಡಿಯೋ ಟ್ರೋಲ್ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ನಮ್ರತಾ, ತಮ್ಮ ಬ್ರೇಕಪ್ ನಂತರ ಬಾಡಿ ಟೋನ್ ಮಾಡಲು ತೀವ್ರ ಆಸಕ್ತಿ ಹೊಂದಿದ್ದರು. ಈ ಕಾರಣಕ್ಕಾಗಿ, ಅವರು ತಮ್ಮ ಗೆಳತಿ ಐಶ್ವರ್ಯಾ ಶಿಂಧೋಗಿ ಜೊತೆ ಬಾಲಿಗೆ ಪ್ರವಾಸ ಹೋಗಿದ್ದರು. ಆದರೆ, ವಾಪಸ್ಸಾದಾಗ, ಅವರ ಬಿಕಿನಿ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟ್ರೋಲ್ಗೆ ಒಳಗಾದವು. "ನನ್ನ ದೇಹ, ನನ್ನ ದುಡ್ಡು, ನಾನು ಸಂಪಾದನೆ ಮಾಡಿ ತೆಗೆದುಕೊಂಡಿರುವ ಬಿಕಿನಿ—ನಾನು ಏನು ಮಾಡಿದ್ದೇನೆ ಅವರಿಗೆ?" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ರತಾ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಚಿಕ್ಕ ವಯಸ್ಸಿನಲ್ಲಿ ಪ್ರೀತಿಗೆ ಕಮಿಟ್ ಆಗುವುದು ತಪ್ಪು ಎಂಬ ಸಂದೇಶವನ್ನು ಯುವಜನತೆಗೆ ನೀಡಿದ್ದಾರೆ. ಅವರು ತಮ್ಮ ಜೀವನದಲ್ಲಿ ಎದುರಿಸಿದ ಟ್ರೋಲ್ಗಳು ಮತ್ತು ನೆಗೆಟಿವ್ ಪ್ರತಿಕ್ರಿಯೆಗಳನ್ನು ಹೇಗೆ ಎದುರಿಸಿದರು ಎಂಬುದನ್ನು ವಿವರಿಸುತ್ತಾ, ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುವುದು ಮುಖ್ಯ ಎಂದು ಹೇಳಿದ್ದಾರೆ.