ಜೀವನದಲ್ಲಿ ನಡೆದ ಕಹಿ ಘಟನೆಯನ್ನು ನೆನೆದು ಕಣ್ಣೀರಿಟ್ಟ ನೇಹಾ ಗೌಡ : ಕೇಳಿ ಎಲ್ಲರೂ ಶಾಕ್ ?

ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟಿ ಗೊಂಬೆ ಅಲಿಯಾಸ್ ನೇಹಾ ಗೌಡ ಸದ್ಯ ತಮ್ಮ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಚಂದನ್ ಗೌಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ವರ್ಷದ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ನೇಹಾ. ಹೀಗಾಗಿ ಸದ್ಯ ನಟನೆಯಿಂದ ಗೊಂಬೆ ದೂರ ಉಳಿದಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ಕರಾಳ ಘಟನೆಯೊಂದನ್ನು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಎಷ್ಟೋ ಹೆಣ್ಣುಮಕ್ಕಳು ಇಂದಿಗೂ ಎದುರಿಸುತ್ತಿರುವ ಈ ದೌರ್ಜನ್ಯದ ಬಗ್ಗೆ ಅವರು ಮಾತನಾಡಿದ್ದಾರೆ. "ನಾನು ಆಗ ನಾಲ್ಕನೇ ತರಗಿತಿಯಲ್ಲಿ ಓದುತ್ತಿದ್ದೆ. ಅದೊಂದು ದಿನ ಅಮ್ಮ ನನ್ನನ್ನು ಮಲಗಿಸಿ, ಸಂಬಂಧಿಕರ ಮನೆಗೆ ಹೋಗಿದ್ದರು. ಎಚ್ಚರ ಆದಾಗ, ಅಮ್ಮ ಬರ್ತಾರೆ ಎಂದು ಹೇಳಿ ಅಜ್ಜಿ ನನಗೆ ಸಮಾಧನ ಮಾಡಿದ್ದರು. ನಾನು ಕೇಳದೇ ಅಮ್ಮನನ್ನು ಹುಡುಕಿಕೊಂಡು ಬೇರೆ ಬೀದಿಗೆ ಹೋಗಿಬಿಟ್ಟೆ.." ಎಂದು ಹೇಳಿಕೊಂಡಿದ್ದಾರೆ."ಪಕ್ಕದ ಬೀದಿಯಲ್ಲಿ ಒಬ್ಬ, `ನಿನ್ನಪ್ಪ ವಾಚ್ ರೆಡಿ ಮಾಡುವುದಕ್ಕೆ ಕೊಟ್ಟಿದ್ದರು. ರೆಡಿಯಾಗಿದೆ ತೆಗೆದುಕೊಂಡು ಹೋಗು ಬಾʼ ಅಂದ. ನಾನು ಮೊದಲಿಗೆ ಅದನ್ನ ನಂಬಲಿಲ್ಲ, 'ನನ್ನ ಅಪ್ಪನ ಹೇಸರೇನು ಹೇಳಿ' ಅಂದೆ. ಆತ ಏನೇನೋ ಹೇಳುತ್ತಿದ್ದ.
ಆ ಸಮಯದಲ್ಲಿ ನಾನೇ, 'ರಾಮಕೃಷ್ಣ ಗೊತ್ತಾ' ಎಂದು ಕೇಳಿಬಿಟ್ಟೆ. ಅದಕ್ಕೆ ಅವನು, 'ಹೌದು.. ಹೌದು..' ಎಂದ. ಹಾಗಾದರೆ ಇವನಿಗೆ ನನ್ನ ಅಪ್ಪ ಗೊತ್ತು ಎಂದು ಅವನ ಹಿಂದೆ ಹೋದೆ. ಇದೆಲ್ಲಾ ನಡೆದಿದ್ದು ಚಿಕ್ಕಪೇಟೆಯಲ್ಲಿ" ಎಂದು ಹೇಳಿಕೊಂಡಿದ್ದಾರೆ ನೇಹಾ. "ಬೇರೆ ಬೇರೆ ಬೀದಿಯಲ್ಲಿ ಅಡ್ಡಾಡಿ, ಅಲ್ಲಿದ್ದ ವಾಚ್ ಅಂಗಡಿಯೊಂದಕ್ಕೆ ಆತ ನನ್ನನ್ನು ಕರೆದುಕೊಂಡು ಹೋಗಿ ಬಾಗಿಲು ಹಾಕಿದ. ಆತನ ವರ್ತನೆ ತುಂಬಾ ವಿಚಿತ್ರವಾಗಿತ್ತು. ನನಗೆ ಭಯವಾಗಿ ಕೂಗಲು ಶುರುಮಾಡಿದೆ, ಅಳುತ್ತಿದ್ದೆ. ʻನೀನು ಅಳುವುದಕ್ಕೆ ಶುರು ಮಾಡಿದರೆ ಕೊಂದುಬಿಡ್ತೀನಿʼ ಎಂದು ಚಾಕು ತೋರಿಸಿದ. ನನಗೆ ಚೆನ್ನಾಗಿ ಹೊಡೆದ. ಹೇಗೋ ಅವನಿಂದ ತಪ್ಪಿಸಿಕೊಂಡು ಓಡಿ ಬಂದೆ. ಆದರೆ ಎಲ್ಲಿ ಹೋಗುತ್ತಿದ್ದೀನಿ ಅನ್ನುವುದು ನನಗೆ ಗೊತ್ತಿರಲಿಲ್ಲ. ಅಷ್ಟರಲ್ಲೇ ಮನೆಯಲ್ಲಿ ಎಲ್ಲರೂ ನನ್ನನ್ನು ಹುಡುಕುತ್ತಿದ್ದರು. ಅಷ್ಟೊತ್ತಿಗೆ ನನ್ನ ಸಂಬಂಧಿಕರು ಒಬ್ಬರು ನನ್ನನ್ನು ನೋಡಿ ಮನೆಗೆ ಕರೆದುಕೊಂಡು ಹೋದರು" ಎಂದು ಹಳೆಯ ಘಟನೆಯನ್ನು ತಿಳಿಸಿದ್ದಾರೆ ನೇಹಾ.
ಬಾಲ್ಯದಲ್ಲಿ ಅಷ್ಟೇ ಅಲ್ಲ ಶೂಟಿಂಗ್ ಟೈಮ್ನಲ್ಲೂ ಆದ ಈ ತರಹದ ಮತ್ತೊಂದು ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನೇಹಾ ಗೌಡ. "ಚೆನ್ನೈನಲ್ಲಿ ರಿಯಾಲಿಟಿ ಶೋ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನನಗೆ ಒಂದು ರೂಮ್ ಕೊಟ್ಟಿದ್ದರು. ನಾನು ಮಲಗಿದ್ದೆ, ನನ್ನ ಕಾಲಿಗೆ ಏನೋ ತಾಕಿದಂತಾಯ್ತು. ತುಂಬಾ ನಿದ್ರೆಯಲ್ಲಿದ್ದ ಕಾರಣ ಇದು ನನ್ನ ಭ್ರಮೆ ಅಂತ ನಾನು ಮಲಗಿ ಬಿಟ್ಟಿದ್ದೆ. ನಂತರ ನೋಡಿದರೆ ನೆರಳು ಕಾಣುತ್ತಿತ್ತು. ಎದ್ದು ನೋಡಿದರೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಅಲ್ಲಿ ನಿಂತಿದ್ದಾನೆ. ಆತ ಆಮೇಲೆ ಅಲ್ಲಿಂದ ಓಡಿ ಹೋದ. ಆಗಲೂ ನಾನು ಸುಮ್ಮನೆ ಆಗಿರಲಿಲ್ಲ. ಆಮೇಲೆ ಅಲ್ಲಿದ್ದ ಡ್ರೈವರ್ ಒಬ್ಬರು ಆತನಿಗೆ ಚೆನ್ನಾಗಿ ಹೊಡೆದರು" ಎಂದಿದ್ದಾರೆ ನೇಹಾ ಹೌಡ.