ಗಂಡನ ಸಹವಾಸವೇ ಬೇಡ ಅಂತ ಕುಡಿದ ಮತ್ತಲ್ಲಿ ಕಂಬ ಏರಿ ಕುಳಿತ್ರಾ ನಿವೇದಿತಾ ಗೌಡ? ವಿಡಿಯೋ ವೈರಲ್

ಗಂಡನ ಸಹವಾಸವೇ ಬೇಡ ಅಂತ ಕುಡಿದ ಮತ್ತಲ್ಲಿ ಕಂಬ ಏರಿ ಕುಳಿತ್ರಾ ನಿವೇದಿತಾ ಗೌಡ? ವಿಡಿಯೋ ವೈರಲ್

ಇದೀಗ ಹೊಸ ವರ್ಷದಲ್ಲಿ ವಿಭಿನ್ನ ರೀತಿಯ ಡ್ರೆಸ್​ ತೊಟ್ಟು, ಕೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ಶೇರ್​ ಮಾಡಿದ್ದಾರೆ. ಇದು ಯಾವ ದೇಶದಲ್ಲಿ ಎನ್ನುವುದನ್ನು ನಿವೇದಿತಾ ಹೇಳದಿದ್ದರೂ ನಿನ್ನೆಯಷ್ಟೇ ಲಂಡನ್​ನ ವಿಡಿಯೋ ಶೇರ್​ ಮಾಡಿದ್ದರಿಂದ ಬಹುಶಃ ಅಲ್ಲಿಯದ್ದೇ ಇರಬಹುದು ಎನ್ನುತ್ತಿದ್ದಾರೆ ಇವರ ಫ್ಯಾನ್ಸ್​. ಆದರೆ ಅವುಗಳಿಗಿಂತಲೂ ಭಿನ್ನವಾಗಿ ಎಲ್ಲರ ಗಮನ ಹೋಗಿದ್ದು, ಅವರು ಕಂಬ ಏರಿರೋ ವಿಷಯ. ನಟಿ, ಸಹಜವಾಗಿ ನೃತ್ಯ ಮಾಡುತ್ತಾ ಅಲ್ಲಿರುವ ಕಂಬ ಏರಿದ್ದಾರೆ. ಆದರೆ ತರ್ಲೆ ಕಮೆಂಟಿಗರು ಸುಮ್ಮನೆ ಇರಬೇಕಲ್ಲಾ? ಹೊಸ ವರ್ಷದ ನಶೆ ಏರಿರಬೇಕು, ಅದಕ್ಕೇ ತಿಳಿಯದೇ ನಟಿ ಕಂಬ ಏರಿ ಬಿಟ್ಟಿದ್ದಾರೆ ಎಂದೆಲ್ಲಾ ಕಮೆಂಟ್​ ಮಾಡುತ್ತಿದ್ದಾರೆ. ನಶೆ ಇಳಿದ ಮೇಲೆಯೇ ಕೆಳಗೆ ಇಳಿದಿರಬೇಕು ಎಂದೆಲ್ಲಾ ಅವರ ಕಾಲೆಳೆಯುತ್ತಿದ್ದಾರೆ. 

ನಿವೇದಿತಾ ಇದೀಗ ಸ್ವತಂತ್ರಳಾಗಿದ್ದಾಳೆ. ಸಂಸಾರದ ಬಂಧನವಿಲ್ಲ. ಇದೇ ಕಾರಣಕ್ಕೆ ಜಾಲಿ ಮೂಡ್​ನಲ್ಲಿ ಇದ್ದಾಳೆ. ತನಗೆ ಇಷ್ಟದಂತೆ ಆಕೆ ಏನಾದರೂ ಮಾಡಬಹುದಾಗಿದೆ. ಅವಳು ಎಲ್ಲಿಯಾದರೂ ಹೋಗಬಹುದು. ಸಂಸಾರವೆಂಬ ಬಂಧನದಲ್ಲಿ ಸಿಲುಕಿದರೆ ಹೆಣ್ಣುಮಕ್ಕಳು ಇಷ್ಟು ಫ್ರೀ ಆಗಿ ಇರಲು ಆಗುವುದಿಲ್ಲ. ಏನೇಮಾಡುವುದಿದ್ದರೂ ಎಲ್ಲರ ಒಪ್ಪಿಗೆ ಪಡೆದು ಮಾಡಬೇಕು. ಹೀಗೆ ಸ್ವತಂತ್ರವಾಗಿ ಟ್ರಿಪ್​-ಟೂರ್​ ಎನ್ನುವುದು ಕನಸಿನ ಮಾತೇ ಎಂದೆಲ್ಲಾ ಹೇಳುವ ಮೂಲಕ ನಿವೇದಿತಾ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ