ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಿವೇದಿತಾ ಗೌಡ

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಿವೇದಿತಾ ಗೌಡ

ನಿವೇದಿತಾ ಗೌಡ ಸದ್ಯ ಏನೇನೋ ಮಾಡ್ತಿದ್ದಾರೆ. ಮನಸಿಗೆ ಬಂದ ರೀತಿನೇ ಓಡಾಡ್ತಿದ್ದಾರೆ. ತಮಗೆ ಬೇಕು ಅನಿಸಿರೋ ಬಟ್ಟೆಗಳನ್ನ ತೊಟ್ಟು ಖುಷಿ ಖುಷಿಯಾಗಿಯೇ ಇದ್ದಾರೆ. ಸಮುದ್ರತೀರದಲ್ಲಿ ಓಡಾಡುತ್ತಿದ್ದಾರೆ. ಬಿಕಿನಿ ತೊಟ್ಟು ಬಿಂದಾಸ್ ಆಗಿಯೇ ಇದ್ದಾರೆ.

ಆದರೆ, ಇದನ್ನ ನೋಡಿದ ನೆಟ್ಟಿಗರು ಬೇಜಾನ್ ಕಾಮೆಂಟ್ ಹೊಡೆಯುತ್ತಿದ್ದಾರೆ. ಬಿಕಿನಿ ತೊಟ್ಟ ನಿವೇದಿತಾ ವಿಡಿಯೋ ನೋಡಿ ವೈಯಕ್ತಿಕವಾಗಿಯೇ ಕಾಮೆಂಟ್ ಕೂಡ ಹೊಡೆದಿದ್ದಾರೆ. ಈ ರೀತಿ ಮಾಡೋಕೇನಾ? ನಮ್ಮ ಚಂದನ್ ಶೆಟ್ರನ್ನ ಬಿಟ್ಟಿರೋದು ಅಂತಲೇ ನಿವೇದಿತಾ ವಿಡಿಯೋದ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದಿದ್ದಾರೆ.

ನಿವೇದಿತಾ ಗೌಡ ಸ್ವಲ್ಪ ಜಾಸ್ತಿನೇ ಬೋಲ್ಡ್ ಅನಿಸೋ ಡ್ರೆಸ್ ತೊಡುತ್ತಿದ್ದರು. ಅದು ಇದೀಗ ಮತ್ತೊಂದು ಲೆವಲ್‌ಗೆ ಹೋಗಿದೆ. ಪುಟ್ಟ ಡ್ರೆಸ್‌ಗಳ ಬದಲು ಡೈರೆಕ್ಟ್ ಬಿಕಿನಿ ತೊಟ್ಟೇ ನಿವೇದಿತಾ ಕಾಣಿಸಿಕೊಂಡಿದ್ದಾರೆ. ಆದರೆ, ಈ ಕಾಮೆಂಟ್‌ಗಳಿಗೆ ನಿವೇದಿತಾ ಗೌಡ ರಿಯಾಕ್ಟ್ ಮಾಡೋಕೆ ಹೋಗಿಯೇ ಇಲ್ಲ. ನೋಡುವ ಗೋಜಿಗೂ ಹೋದಂತೆ ಇಲ್ಲ. ನೋಡಿದ್ದರೇ, ರಿಯಾಕ್ಟ್ ಮಾಡೋ ರೀತಿನೇ ಈ ಎಲ್ಲ ಕಾಮೆಂಟ್‌ಗಳು ಇವೆ. ಹಾಗಂತ ಕೆಸರನ್ನ ಮೈಮೇಲೆ ಎಳೆದುಕೊಳ್ಳಲು ಹೋಗದ ನಿವೇದಿತಾ ಗೌಡ ಬಿಂದಾಸ್ ಆಗಿಯೇ ತಮ್ಮ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.