ಕನ್ನಡದ ಅತಿ ಹೆಚ್ಚು  TRP ಗಳಿಸಿದ ನಂಬರ್ ಒನ್ ಸೀರಿಯಲ್ ಯಾವುದು ನೋಡಿ ?

ಕನ್ನಡದ ಅತಿ ಹೆಚ್ಚು  TRP ಗಳಿಸಿದ ನಂಬರ್ ಒನ್ ಸೀರಿಯಲ್ ಯಾವುದು ನೋಡಿ ?

ಅಂದ್ಹಾಗೆ ಈ ಬಾರಿ ಟಿಆರ್‌ಪಿ ಕಾದಾಟದಲ್ಲಿ ಗೆದ್ದ ಸೀರಿಯಲ್‌ ಯಾವುದು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!ಕಳೆದ ಕೆಲವು ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿತ್ತು. ಆದ್ರೀಗ ನಂಬರ್ 1 ಸ್ಥಾನಕ್ಕೆ ‘ಲಕ್ಷ್ಮೀ ನಿವಾಸ’ ಸೀರಿಯಲ್‌ ಏರಿದೆ. 

ಎರಡನೇ ಸ್ಥಾನಕ್ಕೆ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ ಕುಸಿದಿದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಸೀರಿಯಲ್‌ ಇದೆ. ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’, ಐದನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಹ್ಮಣ್ಯ’ ಸೀರಿಯಲ್ ಇದೆ.

ಟಾಪ್‌ 5 ಧಾರಾವಾಹಿಗಳು ಜೀ ಕನ್ನಡ ವಾಹಿನಿಯ ಪಾಲಾಗಿವೆ. ಆರನೇ ಸ್ಥಾನದಲ್ಲಿ ‘ರಾಮಾಚಾರಿ’, ಏಳನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’, ಎಂಟನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಇದೆ.

ಜಗದೀಶ್ ಎಲಿಮಿನೇಷನ್ ಬಳಿಕ ‘ಬಿಗ್ ಬಾಸ್ ಕನ್ನಡ 11’ ಟಿಆರ್‌ಪಿ ಬಿದ್ದು ಹೋಗುತ್ತೆ ಅಂತ ಕೆಲವರು ಅಂದಾಜಿಸಿದ್ದರು. ಆದರೆ, ಕೆಲವರ ಅಂದಾಜು ತಲೆಕೆಳಗಾಗಿದೆ. ಜಗದೀಶ್ ಇಲ್ಲದೆಯೂ ‘ಬಿಗ್ ಬಾಸ್ ಕನ್ನಡ 11’ ಟಿಆರ್‌ಪಿ ಚೆನ್ನಾಗಿಯೇ ಇದೆ. ಜಗದೀಶ್ ಔಟ್ ಆದ ಬಳಿಕ ವಾರದಿಂದ ವಾರಕ್ಕೆ ‘ಬಿಗ್ ಬಾಸ್’ ರೇಟಿಂಗ್ ಏರುಗತಿಯಲ್ಲಿ ಸಾಗುತ್ತಿದೆ. ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಆರನೇ ವಾರದ ಟಿಆರ್‌ಪಿ ಔಟ್‌ ಆಗಿದೆ. ಆರನೇ ವಾರ - ವಾರದ ದಿನಗಳಲ್ಲಿ 7.4 ಟಿವಿಆರ್‌ ದಾಖಲಾಗಿದೆ. ಶನಿವಾರದ ಸಂಚಿಕೆಗೆ 8.7 ಟಿವಿಆರ್‌, ಭಾನುವಾರದ ಸಂಚಿಕೆಗೆ 9.1 ಟಿವಿಆರ್‌ ಲಭಿಸಿದೆ.