ಅಶ್ವಿನಿ ಗೌಡಗೆ ಠಕ್ಕರ್ ಕೊಟ್ಟ ರಕ್ಷಿತಾ ಶೆಟ್ಟಿ !! ರಕ್ಷಿತಾ ಗೆ ಬಿದ್ದ ವೋಟ್ ಎಷ್ಟು ಕೋಟಿ ಗೊತ್ತಾ ?
112 ದಿನಗಳ ನಂತರ ಬಿಗ್ ಬಾಸ್ ಸೀಸನ್ 12ರ ಟ್ರೋಫಿ ಒಬ್ಬ ವಿನ್ನರ್ ಕೈಗೆ ಸಿಗಲಿದೆ. ಈ ಸೀಸನ್‌ನಲ್ಲಿ ದಾಖಲೆ ಮಟ್ಟದ ವೋಟಿಂಗ್ ನಡೆದಿದೆ. ವಿನ್ನರ್‌ಗೆ ಸಿಕ್ಕಿರುವ ವೋಟುಗಳ ಸಂಖ್ಯೆ ಸುಮಾರು 37 ಕೋಟಿ. ನಿಖರವಾಗಿ ಹೇಳಬೇಕಾದರೆ, ಒಂದು ದಿನ ವೋಟಿಂಗ್ ಲೈನ್ ಓಪನ್ ಇದ್ದಾಗಲೇ 37ಕ 49ಲ 12999 ವೋಟುಗಳು ಬಿದ್ದಿವೆ. ಈ ಲೆಕ್ಕಾಚಾರವನ್ನು ನೋಡಿದರೆ, ಒಟ್ಟು ವೋಟುಗಳು 40 ಕೋಟಿಗೂ ಮೀರಬಹುದು ಎಂಬ ನಿರೀಕ್ಷೆ ಇದೆ.
ರನ್ನರ್ ಅಪ್ ಸ್ಥಾನ
ಮೊದಲ ರನ್ನರ್ ಅಪ್ ಸ್ಥಾನ ಪಡೆದವರಿಗೂ ಸುಮಾರು 30 ಕೋಟಿ ವೋಟುಗಳು ಬಿದ್ದಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಸ್ವತಃ ಸುದೀಪ್ ಅವರು ತಿಳಿಸಿದ್ದಾರೆ. ಮೊದಲ ಸ್ಥಾನ ಮತ್ತು ಎರಡನೇ ಸ್ಥಾನಗಳ ನಡುವೆ ಅಂತರ ಹೆಚ್ಚು ಇಲ್ಲ. ಕೊನೆಯ ದಿನ ಗಿಲ್ಲಿಯ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ವೋಟು ಹಾಕಿದ ಕಾರಣ, ಗಿಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದರೆ ಎರಡನೇ ಸ್ಥಾನ ಯಾರಿಗೆ ಸಿಗುತ್ತದೆ ಎಂಬುದು ಚರ್ಚೆಯ ವಿಷಯವಾಗಿದೆ.
ರಕ್ಷಿತಗೆ ಸಿಕ್ಕ ಹೈಪ್
ಬಿಗ್ ಬಾಸ್ ಸೀಸನ್ 12 ಹೈಪ್ ತಗೊಳ್ಳಲು ಪ್ರಮುಖ ಕಾರಣ ರಕ್ಷಿತ. ಅವರು ಮನೆಗೆ ಒಂದು ವಾರ ಬಿಟ್ಟು ಬಂದ ನಂತರ, ಶೋಗೆ ಭಾರೀ ಹೈಪ್ ಸಿಕ್ಕಿತು. ಅಶ್ವಿನಿ ಮತ್ತು ರಕ್ಷಿತ ನಡುವೆ ನಡೆದ ಜಗಳ, ಸಂಭಾಷಣೆಗಳು ಜನರಿಗೆ ಹೆಚ್ಚು ಇಷ್ಟವಾದವು. ಇದರಿಂದ ಅಶ್ವಿನಿ ವಿರುದ್ಧ ದ್ವೇಷ ಹುಟ್ಟಿತು ಮತ್ತು ರಕ್ಷಿತಗೆ ಜನಪ್ರಿಯತೆ ಹೆಚ್ಚಿತು. ಆ ಸಮಯದಲ್ಲಿ ರಕ್ಷಿತಗೆ ಸಿಕ್ಕ ಹೈಪ್ ಅಸಾಧಾರಣವಾಗಿತ್ತು.
ಅಂತಿಮ ಫಲಿತಾಂಶ
ಹೊರಗಿನ ವೋಟಿಂಗ್‌ಗಳನ್ನು ಗಮನಿಸಿದರೆ, ಮೊದಲ ಸ್ಥಾನ ಗಿಲ್ಲಿಗೆ ಮತ್ತು ಎರಡನೇ ಸ್ಥಾನ ರಕ್ಷಿತಗೆ ಸಿಗುತ್ತದೆ ಎಂಬುದು ಸ್ಪಷ್ಟ. ಸುದೀಪ್ ಅವರ ಕೈಯಲ್ಲಿ ಗಿಲ್ಲಿ ನಿಂತಿದ್ದರೆ, ಇನ್ನೊಂದು ಕೈಯಲ್ಲಿ ರಕ್ಷಿತ ನಿಂತಿರುತ್ತಾರೆ. ರಕ್ಷಿತ ಈ ಬಾರಿ ರನ್ನರ್ ಅಪ್ ಆಗುವ ಸಾಧ್ಯತೆ ಬಹಳ ಹೆಚ್ಚು. ಅವರು ಕೂಡಾ ರೆಕಾರ್ಡ್ ಬ್ರೇಕಿಂಗ್ ವೋಟುಗಳನ್ನು ಪಡೆದಿದ್ದಾರೆ.
ಫೈನಲ್ ದಿನದ ಪ್ರಕ್ರಿಯೆ
ಇಂದು ರಾತ್ರಿ 11 ಗಂಟೆಯವರೆಗೆ ವೋಟಿಂಗ್ ಲೈನ್ ಓಪನ್ ಇರುತ್ತದೆ. ನಂತರ ಶೂಟಿಂಗ್ ಪ್ರಾರಂಭವಾಗುತ್ತದೆ. ಶೂಟಿಂಗ್ ಮುಗಿದ ಆರು ಗಂಟೆಗಳ ನಂತರ ಟೆಲಿಕಾಸ್ಟ್ ಮಾಡಲಾಗುತ್ತದೆ. ಆರು ಜನರಲ್ಲಿ ಒಬ್ಬೊಬ್ಬರನ್ನು ಎಲಿಮಿನೇಟ್ ಮಾಡುತ್ತಾ, ಕೊನೆಗೆ ಟಾಪ್ 2 – ಗಿಲ್ಲಿ ಮತ್ತು ರಕ್ಷಿತ ಉಳಿಯುತ್ತಾರೆ. ಅಂತಿಮವಾಗಿ ಗಿಲ್ಲಿ ಗೆದ್ದರೆ, ರಕ್ಷಿತ ರನ್ನರ್ ಅಪ್ ಆಗುತ್ತಾರೆ. ಇವರಿಬ್ಬರ ವೋಟುಗಳನ್ನು ಸೇರಿಸಿದರೆ, ಒಟ್ಟು 70–80 ಕೋಟಿಯಷ್ಟು ವೋಟುಗಳು ಬಿದ್ದಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.




