ಕೊನೆಗೂ ತನ್ನ ಬಾಯ್​ಫ್ರೆಂಡ್ ಯಾರೆಂದು ತಿಳಿಸಿದ ರಮ್ಯಾ !! ಎಲ್ಲರೂ ಶಾಕ್ !!

ಕೊನೆಗೂ ತನ್ನ ಬಾಯ್​ಫ್ರೆಂಡ್ ಯಾರೆಂದು ತಿಳಿಸಿದ ರಮ್ಯಾ !!  ಎಲ್ಲರೂ ಶಾಕ್ !!

ನಟಿ ರಮ್ಯಾ ಮೊದಲ ಬಾರಿ ತಮ್ಮ ತಂದೆಯ, ತಾಯಿ ಮತ್ತು ಪಾರ್ಟ್​ನರ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೆ ಪಾಡ್​ಕಾಸ್ಟ್ ಒಂದರಲ್ಲಿ ವೈಯಕ್ತಿಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..ರಮ್ಯಾ ಸಾಕುತಂದೆ ಉದ್ಯಮಿ ನಾರಾಯಣ್ ಜತೆಗಿನ ಬಾಂಧವ್ಯದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿರುವ ರಮ್ಯಾ, ‘ಅಪ್ಪ ಯಾವತ್ತೂ ಹೀಗೇ ಇರು ಅಂತ ಹೇಳುತ್ತಿರಲಿಲ್ಲ. ಅವರ ಬಳಿ ಯಾರಾದರೂ ಸಹಾಯ ಕೇಳಿ ಬಂದರೆ, ಸುಳ್ಳು ಭರವಸೆ ನೀಡುತ್ತಿರಲಿಲ್ಲ. ಯಾರಿಗೂ ಗೊತ್ತಾಗದಂತೆ ಸಹಾಯ ಮಾಡುತ್ತಿದ್ದರು. ಅಮ್ಮನೂ ಹಾಗೇ ಇದ್ದರು. ನನ್ನ ಬಹುತೇಕ ಹುಟ್ಟುಹಬ್ಬಗಳನ್ನು ಅನಾಥಾಶ್ರಮಗಳಲ್ಲಿ ಆಚರಿಸುತ್ತಿದ್ದೆ. ಅಮ್ಮನ ಬಳಿ ನೂರು ರೂ. ಇದ್ದರೂ, ಅದನ್ನು ಯಾರಿಗಾದರೂ ಕಷ್ಟದಲ್ಲಿರುವವರಿಗೆ ಕೊಟ್ಟುಬಿಡುತ್ತಿದ್ದರು’ ಎಂದು ಹೇಳಿಕೊಂಡಿದ್ದಾರೆ.

2011ರಿಂದ ನಟಿ ರಮ್ಯಾ ಪೋರ್ಚುಗಲ್ ಮೂಲದ ಉದ್ಯಮಿ ರಫೇಲ್ ಜತೆ ಪ್ರೀತಿಯಲ್ಲಿದ್ದರು. ಕೆಲ ವರ್ಷಗಳ ಹಿಂದೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಆ ಬಳಿಕ ರಮ್ಯಾ ಖಾಸಗಿ ಜೀವನದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಪಾರ್ಟ್​ನರ್ ಬಗ್ಗೆ ಮಾತನಾಡಿರುವ ಅವರು, ‘ನನ್ನ ಪಾರ್ಟ್​ನರ್ ನೀನ್ಯಾಕೆ ನನ್ನ ಬಳಿ ಏನೂ ಹೇಳಿಕೊಳ್ಳುವುದಿಲ್ಲ? ನಿನಗೇನಾಗುತ್ತಿದೆ? ನಿನ್ನನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಎಂದು ಕೇಳುತ್ತಿರುತ್ತಾರೆ. ಆದರೆ, ನಾನಿರುವುದೇ ಹೀಗೆ. ಮತ್ತೊಬ್ಬರ ಬಳಿ ಹೇಳಿಕೊಳ್ಳುವುದು ದೌರ್ಬಲ್ಯ ಅಂತ ನಂಬುವ ಕಾರಣ, ಅಷ್ಟು ಸುಲಭವಾಗಿ ನಾನು ನನ್ನೊಳಗಿನ ವಿಷಯಗಳನ್ನು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ ಎಂದಿದ್ದಾರೆ

"ರಮ್ಯಾ ಚುನಾವಣೆಯತ್ತ ಗಮನ ಹರಿಸುತ್ತಿದ್ದರು, ಮತ್ತು ರಾಫೆಲ್ ತನ್ನ ವ್ಯವಹಾರದಲ್ಲಿ ನಿರತರಾಗಿದ್ದರು. ಅವರು ಹೆಚ್ಚು ಸಮಯ ಒಟ್ಟಿಗೆ ಕಳೆಯಲು ಸಾಧ್ಯವಾಗಲಿಲ್ಲ. ಅಲ್ಲದೆ, ರಮ್ಯಾ ಭಾರತವನ್ನು ತೊರೆಯುವ ಯಾವುದೇ ಯೋಜನೆಯನ್ನು ಹೊಂದಿಲ್ಲ, ಮತ್ತು ರಾಫೆಲ್ ಪೋರ್ಚುಗಲ್ ಅನ್ನು ಬಿಡಲು ಬಯಸುವುದಿಲ್ಲ. ಅಂತಹ ಕಾರಣಗಳಿಂದಾಗಿ, ಅವರು ಒಳ್ಳೆಯ ರೀತಿಯಲ್ಲಿ ಬೇರ್ಪಟ್ಟಿದ್ದಾರೆ, ಆದರೆ ಅವರು ಇನ್ನೂ ಸ್ನೇಹಿತರಾಗಿದ್ದಾರೆ" ಎಂದು ಅವರು ಹೇಳಿದರು.