ಟಿಕ್ ಟಾಕ್ ಸ್ಟಾರ್ ನವೀನ್ ಅವರ ಬರ್ಬರ ಹತ್ಯೆ ! ಕಾರಣ ಏನೂ ಗೊತ್ತಾ?

ಟಿಕ್ ಟಾಕ್ ಸ್ಟಾರ್ ನವೀನ್ ಅವರ ಬರ್ಬರ ಹತ್ಯೆ ! ಕಾರಣ ಏನೂ ಗೊತ್ತಾ?

ಈಗಿನ ಕಾಲದಲ್ಲಿ ಸಣ್ಣ ಪುಟ್ಟ ಮಾತಿಗೂ ಕೊಲೆಯಲ್ಲಿಯೆ ಅಂತ್ಯ ಎನ್ನುವ ಕಾಲದಲ್ಲಿ ನಾವು ಜೀವಿಸುತ್ತಾ ಇದ್ದೇವೆ. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆ ಆಗಿದೆ. ನೆನ್ನೆ ತನ್ನ ಸ್ನೇಹಿತರಿಂದ ಟಿಕ್ ಟಾಕ್ ಸ್ಟಾರ್ ಎಂದೇ ಹೆಸರು ಮಾಡಿದ್ದ "ನವೀನ್" ಅವರ ಹತ್ಯೆ ಆಗಿರುವ ಪ್ರಕರಣ ದಾಖಲು ಆಗಿದೆ. ಇನ್ನೂ ನಮ್ಮ ಪ್ರಪಂಚ ದಿನದಿಂದ ದಿನಕ್ಕೆ ಮುಗೋಪಕ್ಕೆ ಮೂಗು ಕುಯ್ದು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ a ಕ್ಷಣಕ್ಕೆ ಮೈ ಮರೆಯುವ ಮನುಜ ತನ್ನ ಇಡೀ ಜೀವನವನ್ನೇ ಕತ್ತಲೆಗೆ ನುಕುವುದರ ಜೊತೆಗೆ ತನ್ನ ಕುಟುಂಬವನ್ನು ಕೂಡ ನುಕುತ್ತಾನೆ ಎನ್ನುವ ಸತ್ಯವನ್ನು ಅರಿತರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳ ಸಂಖ್ಯೆ ಕಡಿಮೆ ಆಗಬಹುದು.


ಇನ್ನೂ ಮೈಸೂರಿನ ಮೂಲದ ಟಿಕ್ ಸ್ಟಾರ್ ಎಂದು ಹೆಸರು ಮಾಡಿದ್ದ ನವೀನ್ ಕುಮಾರ್ ಕೊಡ ತನ್ನ ಟಿಕ್ ಟಾಕ್ ಜೊತೆಗೆ ರೌಡಿಸಂ ನಲ್ಲಿ ಕೂಡ ಭಾಗಿ ಆಗಿದ್ದ. ಸ್ನೇಹಿತರ ಜೊತೆಗೆ ಕಿರಿಕ್ ಮಾಡಿಕೊಳ್ಳುವ ವಿಚಾರ ಕೊಡ ಆಗಾಗ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಾಗೆಯೇ ಅವನಿಗೆ ಅಹಿತಕರ ಹವ್ಯಾಸಗಳನ್ನು ಕೊಡ ಹೆಚ್ಚಾಗಿಯೇ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಕಳೆದ ಎರಡು ವರ್ಷಗಳ ಹಿಂದೆ ಕೊಡ  ಬೆಂಗಳೂರಿನ "ಕಾರ್ಪೋರೆಟರ್ ಅಣ್ಣ"ನ ಮಗನ ಕೊಲೆಗೆ ಪ್ರತೀಕಾರವಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್ ಆರೋಪಿಯಾಗಿದ್ದ. ಹಾಗೆಯೇ ಒಂದಿಷ್ಟು ವರ್ಷಗಳು ಕೊಡ ಸೆರೆವಾಸ ಮಾಡಿ ಆಚೆ ಬಂದಿದ್ದ ನವೀನ್ ಮತ್ತೆ ತನ್ನ ಚಾಳಿ ಶುರು ಮಾಡಿ ಮೈಸೂರಿಗೆ ಪಿಕ್ನಿಕ್ ಗೆಂದು ಬಂದಿದ್ದ. 

ಈ ಟಿಕ್ ಟಾಕ್ ಸ್ಟಾರ್ ನವೀನ್ ಇಬ್ಬರು ಯುವತಿಯರ ಜೊತೆಗೆ ಮೈಸೂರಿಗೆ ಪ್ರವಾಸಕ್ಕೆಂದು ಬಂದು ಎರಡು ಮೂರು ದಿನಗಳ ಕಾಲ ತಂಗಿದ್ದನ್ನು. ಹೀಗೆ ಅವರ ಕೊಲೆಯಾಗುವ    ಹಿಂದಿನ ದಿನ ಅಂದರೆ ಮೊನ್ನೆ ಸರಿ ಸುಮಾರು 9:45 ರಾತ್ರಿಯಲ್ಲಿ ಅವನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಅವನ ಜೊತೆಗೆ ಬಂದ ಯುವತಿಯರು ದೊರಲ್ಲಿ ತಿಳಿಸಿದ್ದಾರೆ. ನಾಪತ್ತೆಯಾದ ದೂರನ್ನು ದಾಖಲಿಸಿಕೊಂಡ ನಂಜನಗೂಡು ಪೊಲೀಸರಿಗೆ ನವೀನ್ ನಂಜನಗೂಡು ನಾಲೆಯಲ್ಲಿ ಶವವಾಗೀ ಪತ್ತೆಯಾಗಿದ್ದಾರೆ. ಇದೀಗ ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು ಈ ಹಿಂದೆ ನವೀನ್ ಕೊಲೆ ಮಾಡಿದ ಸಂಭಧಿಕರು ಕೊಲೆ ಮಾಡಿರಬಹುದು ಎನ್ನುವ ಶಂಕೆ ಹುಟ್ಟುಹಾಕಿದೆ. ಆದ್ರೆ ಪೊಲೀಸರು ತಮ್ಮ ತನಿಖೆಯ ಮೂಲಕ ಟಿಕ್ ಟಾಕ್ ಸ್ಟಾರ್ ನವೀನ್ ಅವರ ಸಾವಿನ ಅಸಲಿ ಕಾರಣವನ್ನು ತಿಳಿಸಬೇಕಾಗಿದೆ. ( video credit :j3tv kannada )