ಕಡೆಗೂ ಪುಟ್ಟಕ್ಕನ ಮಕ್ಕಳು ಇಂದ ಆಚೆ ಬಂದಿದ್ದಕ್ಕೆ ಅಸಲಿ ಸತ್ಯ ಬಿಚ್ಚಿಟ್ಟ ಸಂಜನಾ ಬುರ್ಲಿ!!

ಕಡೆಗೂ ಪುಟ್ಟಕ್ಕನ ಮಕ್ಕಳು  ಇಂದ ಆಚೆ ಬಂದಿದ್ದಕ್ಕೆ ಅಸಲಿ ಸತ್ಯ ಬಿಚ್ಚಿಟ್ಟ ಸಂಜನಾ ಬುರ್ಲಿ!!

ಇಡೀ ಕನ್ನಡಿಗರ ಮನಸ್ಸು ಗೆದ್ದಿದ್ದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸ್ನೇಹಳ ಪಾತ್ರದ ಮೂಲಕ ಸಂಜನ ಬುರ್ಲಿ ಅವರು ಮನೆಮಾತಾಗಿದ್ದರು. ಈಗ ಅವರು ‘ಗಂಧದ ಗುಡಿ’ ಎಂಬ ಹೊಸ ಧಾರಾವಾಹಿಯ ಮೂಲಕ ಮತ್ತೆ ಸ್ಮಾಲ್ ಸ್ಕ್ರೀನ್‌ಗೆ ವಾಪಸ್ ಆಗುತ್ತಿದ್ದಾರೆ. ಈ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸಂಜನ ಹೇಳುತ್ತಾರೆ: “ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ನನಗೆ ಕರ್ನಾಟಕದಾದ್ಯಂತ ಅಪಾರ ಪ್ರೀತಿ ಸಿಕ್ಕಿತು. ಸ್ನೇಹಳ ಪಾತ್ರ ನನಗೆ ತುಂಬಾ ಪರ್ಸನಲ್ ಆಗಿತ್ತು. ನಾನು ಆ ಪಾತ್ರ ಬಿಟ್ಟ ನಂತರ ಜನರು ಎಷ್ಟು ಅತ್ತುಬಿಟ್ಟಿದ್ರು, ಎಷ್ಟು ಮಿಸ್ ಮಾಡಿದ್ರು ಅನ್ನೋದು ನನಗೆ ಆಮೇಲೆ ಗೊತ್ತಾಯ್ತು. ಮೂರು ವರ್ಷ ನಾನು ಆ ಪಾತ್ರದಲ್ಲಿ ಸಂಪೂರ್ಣವಾಗಿ ಇನ್ವಾಲ್ವ್ ಆಗಿದ್ದೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ತುಂಬಾ ಕಷ್ಟಪಟ್ಟೆ. ಆದರೆ ನಾನು ಬಿಟ್ಟ ನಂತರ ಜನರು ತೋರಿಸಿದ ಪ್ರೀತಿ, ಅವರ ಪ್ರತಿಕ್ರಿಯೆ, ಅವರ ನೆನಪಿನಲ್ಲಿ ನಾನು ಉಳಿದಿರುವುದು—all that is the true reward for an actor.”

ಅವರು ಮುಂದುವರೆದು ಹೇಳುತ್ತಾರೆ: “ನಾನು ಇಂಜಿನಿಯರಿಂಗ್ ಮಾಡುತ್ತಿದ್ದೆ. ಜೊತೆಗೆ ‘ಪುಟ್ಟಕ್ಕನ ಮಕ್ಕಳು’ ಮಾಡುತ್ತಿದ್ದೆ. ಅದು ತುಂಬಾ ಹೆಕ್ಟಿಕ್ ಆಗಿತ್ತು. ಆ ಕಾರಣದಿಂದಾಗಿ ನನಗೆ ಒಂದು ವರ್ಷ ಬ್ರೇಕ್ ಬೇಕಿತ್ತು—ಮೆಂಟಲಿ, ಫಿಸಿಕಲಿ, ಸ್ಪಿರಿಚುಲಿ. ಆ ಸಮಯದಲ್ಲಿ ನಾನು ಸ್ವಲ್ಪ ರೆಜುಮನೇಟ್ ಆಗಿದೆ. ಈ ನಡುವೆ ಹಲವಾರು ಪ್ರಾಜೆಕ್ಟ್ಸ್ ಬಂದಿದ್ರು. ಆದರೆ ಯಾವುದು ನನ್ನ ಮನಸ್ಸಿಗೆ ತಟ್ಟಲಿಲ್ಲ. ಆದರೆ ‘ಗಂಧದ ಗುಡಿ’ ಬಂದಾಗ, ಟೈಟಲ್ ಗೊತ್ತಿಲ್ಲದಿದ್ದರೂ, ಕಥೆ ಮತ್ತು ಪಾತ್ರ ಕೇಳಿದ ತಕ್ಷಣ ನನಗೆ ‘ಇದು ಮಾಡಲೇಬೇಕು’ ಅನ್ನಿಸಿತು. ಆ ಗಟ್ಟ ಫೀಲಿಂಗ್ ನನಗೆ ಈ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಕಾರಣವಾಯ್ತು.”

‘ಗಂಧದ ಗುಡಿ’ ಧಾರಾವಾಹಿಯ ಕಥೆಯ ಬಗ್ಗೆ ಅವರು ಹೀಗೆ ಹೇಳುತ್ತಾರೆ: “ಇದು ಒಂದು ಕಾಮಿಕಲ್ ಡ್ರಾಮಾ. ನಗಿಸುತ್ತೆ, ಅಳಿಸುತ್ತೆ—ಎಮೋಷನಲ್ ರೂಲರ್ ಕೋಸ್ಟರ್ ತರ. ನಾನು ತಮಿಳು ಸ್ಪಿನ್ ಆಫ್ ‘ಐಎನ್ಆರ್ ತುಯಕೆ’ ಕೆಲವೊಂದು ಎಪಿಸೋಡ್ಸ್ ನೋಡಿದ್ದೆ. ಆದರೆ ನಮ್ಮ ಕನ್ನಡದ ಸೊಗಡಕ್ಕೆ ತಕ್ಕಂತೆ ಈ ಕಥೆಯನ್ನು ಅಡಾಪ್ಟ್ ಮಾಡಲಾಗಿದೆ. ನಮ್ಮ ಆಡಿಯನ್ಸ್‌ಗಾಗಿ ನಾವು ಸ್ವಲ್ಪ ಬದಲಾವಣೆಗಳನ್ನು ಮಾಡಿದ್ದೇವೆ. ನಾನು ಖಚಿತವಾಗಿ ಹೇಳಬಹುದು, ಕರ್ನಾಟಕದ ಜನರಿಗೆ ಈ ಧಾರಾವಾಹಿ ತುಂಬಾ ಇಷ್ಟ ಆಗುತ್ತದೆ.”
ಈ ಸೀರಿಯಲ್‌ನ್ನು ಏಕೆ ಆಯ್ಕೆ ಮಾಡಿದರು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಾರೆ: “ನನಗೆ ಗಟ್ ಫೀಲಿಂಗ್ ಆಯ್ತು—this is a once-in-a-lifetime opportunity. ಕನ್ನಡ ಧಾರಾವಾಹಿಗಳಲ್ಲಿ ಈ ತರಹದ ಕಾನ್ಸೆಪ್ಟ್ ನೋಡಿರಲ್ಲ. ಸಾಮಾನ್ಯವಾಗಿ ಅತ್ತೆ–ಸೊಸೆ ಡ್ರಾಮಾ ಜಾಸ್ತಿ ಇರುತ್ತೆ. ಆದರೆ ಇಲ್ಲಿ ಒಂದು ಹುಡುಗಿ ಎಂಟ್ರಿ ಕೊಟ್ಟ ತಕ್ಷಣ ಎಲ್ಲರ ಲೈಫ್ ಚೇಂಜ್ ಆಗುತ್ತೆ. ಇದು ಸಿನಿಮಾದಲ್ಲಿ ನೋಡಿರಬಹುದು, ಆದರೆ ಧಾರಾವಾಹಿಯಲ್ಲಿ ಹೊಸದು. ಜೊತೆಗೆ ನಾನು ಕಾಮಿಡಿ ಹೆಚ್ಚು ಮಾಡಿಲ್ಲ. ಈ ಧಾರಾವಾಹಿಯಲ್ಲಿ ಕಾಮಿಕಲ್ ಡ್ರಾಮಾ ಇರುವುದರಿಂದ ನನ್ನ ಕಾಮಿಡಿ ಟೈಮಿಂಗ್‌ನ್ನು ಇಂಪ್ರೂವ್ ಮಾಡಿಕೊಳ್ಳಲು ಅವಕಾಶ ಸಿಗುತ್ತೆ. ಇದು ಒಂದು ಚಾಲೆಂಜಿಂಗ್ ಮತ್ತು ಸೂಪರ್ ಆಪರ್ಚುನಿಟಿ.”

ಅವರು ಕೊನೆಗೆ ಹೇಳುತ್ತಾರೆ: “ಎಲ್ಲಾ ಹುಡುಗರ ಮಧ್ಯದಲ್ಲಿ ಒಂದು ಹುಡುಗಿಯಾಗಿ ಪರ್ಫಾರ್ಮ್ ಮಾಡೋದು, ಎದ್ದು ಕಾಣಿಸಿಕೊಳ್ಳೋದು, ಹೈಲೈಟ್ ಆಗೋದು—ಇದು ಒಂದು ಆಕ್ಟರ್ ಆಗಿ ನನಗೆ ಸಿಕ್ಕ ಅವಕಾಶ. ಸ್ವಲ್ಪ ಆರ್ಟಿಸ್ಟ್ ಆಗಿ, ಸ್ವಲ್ಪ ಸೆಲ್ಫಿಶ್ ಆಗಿ ಯೋಚನೆ ಮಾಡಿ ಈ ಪ್ರಾಜೆಕ್ಟ್ ಒಪ್ಪಿಕೊಂಡೆ.”