ಸಂಜು ಬಸಯ್ಯ ಒಂದು ದಿನಕ್ಕೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ! ಕೇಳಿದರೆ ಶಾಕ್ ಆಗುತ್ತೀರಾ ?

ಸಂಜು ಬಸಯ್ಯ  ಒಂದು ದಿನಕ್ಕೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ! ಕೇಳಿದರೆ ಶಾಕ್ ಆಗುತ್ತೀರಾ ?

ಬೈಲಹೊಂಗಲ ಮೂಲದವರಾದ ಸಂಜು ಬಸಯ್ಯ ʻಕಾಮಿಡಿ ಕಿಲಾಡಿಗಳುʼ ಶೋ ಮೂಲಕ ಇಡೀ ಕರುನಾಡಿಗರಿಗೆ ಚಿರಪರಿಚಿತರಾದವರು. ತಮ್ಮ ಕಾಮಿಡಿ ಟೈಮಿಂಗ್‌ ಮತ್ತು ಪಂಚ್‌ ಡೈಲಾಗ್‌ಗಳ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದಾರೆ. ʻಕಾಮಿಡಿ ಕಿಲಾಡಿಗಳುʼ ಶೋಗೆ ಹೋಗುವ ಮುನ್ನ ʻಡ್ರಾಮಾ ಜೂನಿಯರ್ಸ್‌ʼಗೂ ಸಂಜು ಬಸಯ್ಯ ಆಡಿಷನ್‌ ಕೊಟ್ಟಿದ್ದರು. ಕಾರಣಾಂತರಗಳಿಂದ ಆ ಶೋಗೆ ಹೋಗಲಾಗಲಿಲ್ಲ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಾತ್ರಾ ಸಮಯದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳು, ನಾಟಕಗಳಲ್ಲಿ ಕಾಣಿಸಿಕೊಂಡು ಸಂಜು ಬಸಯ್ಯ ಫೇಮ್‌ ಗಿಟ್ಟಿಸಿಕೊಂಡಿದ್ದಾರೆ

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಂಜು ಬಸಯ್ಯ ಅವರ ಸಂಭಾವನೆ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. ಒಂದು ಕಾಲದಲ್ಲಿ ಜೀವನ ನಡೆಸಲು ಹರಸಾಹಸ ಪಡುತ್ತಿದ್ದ ಸಂಜು ಬಸಯ್ಯ ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗೆ ಕಲಾಮಾಮದ್ಯ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಂಭಾವನೆ ಕುರಿತು ಮಾಹಿತಿ ನೀಡಿದ್ದರು.

ಕಾಮಿಡಿ ಕಿಲಾಡಿಗಳುʼ ಮತ್ತು ʻಜೋಡಿ ನಂ 1ʼ ಸೀಸನ್‌ 2 ಶೋ ಮೂಲಕ ಮನೆಮಾತಾಗಿರುವ ಸಂಜು ಬಸಯ್ಯ ತಮ್ಮ ಹಾಸ್ಯದಿಂದಲೇ ಮನೆಮಾತಾಗಿದ್ದಾರೆ. ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸದ್ಯ ಹಲವು ಬೇರೆ ಬೇರೆ ವೇದಿಕೆ ಕಾರ್ಯಕ್ರಮಗಳಲ್ಲಿ ಸಂಜು ಬಸಯ್ಯ ಅವರು ಫುಲ್‌ ಬ್ಯುಸಿಯಾಗಿದ್ದಾರೆ. ಜೊತೆಗೆ ಕೈ ತುಂಬಾ ಹಣವನ್ನು ಸಂಪಾದಿಸುತ್ತಿದ್ದಾರೆ. ದಿನಕ್ಕೆ 3 ಗಂಟೆ ಕಾರ್ಯಕ್ರಮಕ್ಕೆ ಸಂಜು ಬಸಯ್ಯ ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದನ್ನು ಇದೀಗ ರಿವೀಲ್‌ ಮಾಡಿದ್ದಾರೆ.

ಕಾಮಿಡಿ ಕಿಲಾಡಿಗಳು ನಂತರ ನಾನು ಈಗ 3 ಗಂಟೆ ಕಾರ್ಯಕ್ರಮಕ್ಕೆ 25 ಅಥವಾ 30 ಸಾವಿರ ರೂಪಾಯಿ ಪೇಮೆಂಟ್‌ ಕೇಳಿದ್ದರು ಕೊಡ್ತೀನಿ ಬನ್ನಿ ಅಂತಾರೆ. ಟಿವಿ ಕಾರ್ಯಕ್ರಮದಿಂದ ನನ್ನ ಲೈಫ್‌ ಅಷ್ಟೇ ಅಲ್ಲ, ನಾನೇ ಬದಲಾಗಿದ್ದೇನೆ” ಎಂದು ಇತ್ತೀಚೆಗೆ ʻಕಲಾಮಾಧ್ಯಮʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಂಜು ಬಸಯ್ಯ ಹೇಳಿಕೊಂಡಿದ್ದಾರೆ