ಸೀತಾ ರಾಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಮುದ್ದು ಮಗು ಸಿಹಿ ಕಣ್ಣೀರ ಕಥೆ ಇಲ್ಲಿದೆ ನೋಡಿ

ಹೌದು ಸಿಹಿ ಸೀತಾ ರಾಮ ಸಿರೀಯಲ್‌ನ ಆಧಾರ ಸ್ತಂಭ.. ಈ ಮುದ್ದು ಗೊಂಬೆಯ ಮಾತು ಕೇಳಲೆಂದೆ ಹಲವರು ಈ ಧಾರವಾಹಿ ನೋಡುತ್ತಿದ್ದಾರೆ.. ಅಷ್ಟು ಕ್ಯೂಟ್ ಆಗಿ ಮೂಡಿ ಬರುತ್ತಿರುವ ಪಾತ್ರ ಅದು.. ಹಾಗಾದ್ರೆ ಆ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ನಿಜವಾದ ತಾಯಿ ಯಾರು? ಆ ಮಗುವಿನ ನಿಜ ಜೀವನ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ.
ಸಿಹಿಯ ನಿಜವಾದ ಹೆಸರು ರಿತು ಸಿಂಗ್.. ಮೂಲತಃ ನೇಪಾಳಿಯವರು.. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಈ ಮಗು ತಾಯಿ ಪ್ರೀತಿಯನ್ನು ಮಾತ್ರ ಕಂಡಿದೆ.. ಈ ಮಗುವಿನ ತಾಯಿ ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ..
ಇನ್ನು ಈಕೆ ಕನ್ನಡ ಕಲಿತಿದ್ದು ಕೂಡ ಅಷ್ಟೇ ವಿಶೇಷ ರಿತು( ಅವ್ರ ಅಮ್ಮ ಕೆಲಸ ಅರಸಿ ನೇಪಾಳ ಬಿಟ್ಟು ಬಂದಾಗ ರಿತು ಚಿಕ್ಕ ಮಗು ಹಿಂದಿ ನೇಪಾಳಿ ಬಿಟ್ಟು ಬೇರೆ ಭಾಷೆ ಮಾತಾಡ್ತಿರಲಿಲ್ಲ ಆದ್ರೆ ಅಕ್ಕ ಪಕ್ಕದ ಮನೆಯ ಮಕ್ಕಳ ಜೊತೆಗೆ ಆಟವಾಡಲು ಯಾವಾಗ ರಿತು ಶುರು ಮಾಡ್ತಳೋ ಆಗ ಸ್ವಲ್ಪ ಸ್ವಲ್ಪ ಕನ್ನಡ ಕಲಿಯುತ್ತಾಳೆ ನಂತರ ಅಲ್ಲಿನ ಅಂಗಡಿಯ ಅಂಕಲ್ ಒಬ್ಬರು ರಿತುಗೆ ಕನ್ನಡ ಕಲಿಸುತ್ತಾರೆ. ಇನ್ನು ರಿತು ತಾಯಿ ಅವಳನ್ನ ಡ್ರಾಮಾ ಜೂನಿಯರ್ಸ್ ಗೆ ಕರೆದುಕೊಂಡು ಬಂದಾಗ ಇವಳ ಮಾತಿನ ಮೋಡಿಗೆ ಜಡ್ಜ್ ಸ್ ಫಿಧಾ ಆಗಿ ಸೆಲೆಕ್ಟ್ ಮಾಡ್ತಾರೆ ಅದಾದ ಬಳಿಕ ಇದೀಗ ಕಿರುತೆರೆಯಲ್ಲಿ ಮೋಡಿ ಮಾಡ್ತಿದ್ದಾಳೆ.
ಜೀ ಕುಟುಂಬ ಪ್ರಶಸ್ತಿ ಸಮಾರಂಭದಲ್ಲಿ ಅಕುಲ್ ಬಾಲಾಜಿ ಅವರು ಸಿಹಿ ಮತ್ತು ಅವರ ತಾಯಿ ಬೆಂಗಳೂರಿಗೆ ಬಂದಾಗ ಅವರ ಬಳಿ ಮನೆ ಇರಲಿಲ್ಲ ಮತ್ತು ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್‌ನಲ್ಲಿ ತಿರುಗಾಡುತ್ತಿದ್ದರು ಎಂದು ಹೇಳಿದರು. ಆದರೆ, ಅವರು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋದಲ್ಲಿ ಅಭಿನಯಿಸಲು ಅವಕಾಶ ಪಡೆದರು ಮತ್ತು ಅಲ್ಲಿ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಯಿತು.
ಅಕುಲ್ ಬಾಲಾಜಿ ಅವರ ಈ ಮಾತುಗಳು, ಸಿಹಿ ಮತ್ತು ಅವರ ತಾಯಿಯ ಕಠಿಣ ಪರಿಶ್ರಮ ಮತ್ತು ಸಾಧನೆಗಳನ್ನು ತೋರಿಸುತ್ತವೆ. ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ ನಂತರ, ಅವರ ಜೀವನದಲ್ಲಿ ಹೊಸ ತಿರುವುಗಳು ಬಂದವು ಮತ್ತು ಅವರು ಯಶಸ್ಸಿನ ಹಾದಿಯಲ್ಲಿ ಮುಂದುವರಿದರು.
ಸಿಹಿ ಮತ್ತು ಅವರ ತಾಯಿಯ ಈ ಕಥೆ, ಪ್ರೇಕ್ಷಕರಿಗೆ ಪ್ರೇರಣೆಯಾಗಿದೆ. ಕಠಿಣ ಪರಿಶ್ರಮ ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಅವರು ತಮ್ಮ ಜೀವನವನ್ನು ಬದಲಾಯಿಸಿಕೊಂಡರು
ಸ್ಕ್ರೀನ್ ಮೇಲೆ ಕಾಣುವಂತೆ ಸಿಹಿಯ ಜೀವನ ಕಹಿಯಿಂದಲೇ ಕೂಡಿದೆ.. ಅಪ್ಪನ ಪ್ರೀತಿಯನ್ನೇ ನೋಡದ ಕಂದ ತೆರೆ ಮೇಲೆ ನಗುತ್ತಾ ಎಲ್ಲರನ್ನು ನಗಿಸುತ್ತಾ ಕಿರುತೆರೆ ಲೋಕದಲ್ಲಿ ಮಿಂಚುತ್ತಿದೆ