ಕೊನೆಗೂ ಗಂಡನ ಜೊತೆಗಿನ ಸಂಬಂಧ ಬಿಡ್ತಾರಾ ನಟಿ ಸಿತಾರಾ..! ಇದೇನಿದು ಹೊಸ ಟ್ವಿಸ್ಟ್

ಕೊನೆಗೂ ಗಂಡನ ಜೊತೆಗಿನ ಸಂಬಂಧ ಬಿಡ್ತಾರಾ ನಟಿ ಸಿತಾರಾ..! ಇದೇನಿದು ಹೊಸ ಟ್ವಿಸ್ಟ್

ಹೌದು ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಏರುಪೇರುಗಳು ನಡೆಯುವುದು ಮಾಮೂಲಿ. ಈ ಸಿನಿಮಾರಂಗದ ಕಲಾವಿದರ ಜೀವನದಲ್ಲಿ ಕೂಡ ಸಾಕಷ್ಟು ವಿಚಾರಗಳು ನಡೆಯುತ್ತವೆ. ಸಿನಿಮಾದಲ್ಲಿ ಕಾಣಿಸುವ ಹಾಗೆ ಸೀರಿಯಲ್ ಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳನ್ನು ಉಟ್ಟುಕೊಂಡು ತುಂಬಾ ಸಂತಸದಿಂದ ಇರುವ ಹಾಗೆ, ಕಾಣಿಸುವ ನಟ ನಟಿಯರು ಅವರ ನಿಜ ಜೀವನದಲ್ಲಿ ತುಂಬಾ ಕಷ್ಟಗಳ ಜೀವನ ಎದುರಿಸುತ್ತಾರೆ. ಎಲ್ಲರೂ ಹಾಗೆ ಅಂದು ಹೇಳಲು ಅಸಾದ್ಯ. ಅಂತಹ ಕೆಲವರ ಸಾಲಿನಲ್ಲಿ ಇದೀಗ ಸೀತಾರಾ ನೀನಾಸಂ ಕೂಡ ಸೇರಿದ್ದಾರೆ ಎಂದು ಹೇಳಬಹುದು. ಹೌದು ಕನ್ನಡ ಕಿರುತೆರೆಯಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ನಟಿ ಸಿತಾರಾ ಅವರು ಸುಮಾರು ವರ್ಷಗಳಿಂದ ಮಿಂಚುತ್ತಿದ್ದಾರೆ.

2017ರಲ್ಲಿ ನಟಿ ಸೀತಾರಾ ನೀನಾಸಂ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೌಟುಂಬಿಕ ಜೀವನದ ಜೊತೆ ಸೀರಿಯಲ್ ಎಲ್ಲವನ್ನೂ ಕೂಡ ನಿಭಾಯಿಸುತ್ತಿರುತ್ತ ಬಂದಿದ್ದರು. ಆದರೆ ಇದೀಗ ಅವರ ಕೌಟುಂಬಿಕ ಜೀವನ ಸರಿ ಇಲ್ಲ ಎಂಬ ಮಾತು ಕೇಳಿಬಂದಿದ್ದು ಅವರೇ ಅವರ ದಾಂಪತ್ಯ ಜೀವನದ ಬಗ್ಗೆ ನೋವಿನಲ್ಲಿ ಏನೆಲ್ಲಾ ವಿಚಾರ ಹಂಚಿಕೊಂಡರು ಗೊತ್ತಾ.? ಮುಂದೆ ಓದಿ. ''2019 ರಲ್ಲಿ ಮದುವೆ ಮಾಡಿಕೊಂಡೆ, ನನ್ನ ವಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟವಿಲ್ಲ.. ಏಕೆಂದರೆ ಅದು ಚೆನ್ನಾಗಿ ನಡೆಯಲಿಲ್ಲ..ಏನಾದರೂ ಯಾರ ಬಗ್ಗೆ ಆದರೂ ಮಾತನಾಡಿದರೆ ಅದು ದೂರು ಹೇಳುತ್ತಿರುವ ಹಾಗೆ ಅನಿಸುತ್ತದೆ. ಮದುವೆ ಆಗಿತ್ತು.  

ಆದ್ರೆ ಈ ವರ್ಷದ ಕೊನೆಯಲ್ಲಿ ವಿಚ್ಛೇದನ ಸಿಗಬಹುದು, ಖಂಡಿತ ಆಗುತ್ತೆ. ಈಗ ಜೀವನದಲ್ಲಿ ಮತ್ತೆ ಒಂಟಿಯಾಗಿರುವೆ. ಮತ್ತೆ ಲೈಫ್ ಪಾರ್ಟ್ನರ್ ಸಿಗಲ್ಲ ಎಂಬ ಮಾತಲ್ಲ ಪ್ರತಿಯೊಬ್ಬರೂ ಒಂದೇ ರೀತಿ ಬೆಳೆದಿರುವುದಿಲ್ಲ, ನಾನು ಬೆಳೆದ ರೀತಿಯೇ ಬೇರೆ ಆಗಿರುತ್ತದೆ. ಮತ್ತೊಬ್ಬರ ವ್ಯಕ್ತಿತ್ವ ಮತ್ತು ಬೆಳೆದ ರೀತಿ ಬೇರೆಯದ್ದೆ ಇರುತ್ತದೆ. ಅವರು ಹೊಂದಿಕೊಳ್ಳುತ್ತಾರೆ ಅನ್ನೋ ಭ್ರಮೆಯಲ್ಲಿ ಇರುತ್ತೇವೆ ಅಷ್ಟೇ. ಆದರೆ ಯಾರು ಕೂಡ ನಿಜಕ್ಕೂ ಹೊಂದಿಕೊಳ್ಳುವುದಿಲ್ಲ, ಬಹುಶಃ ನಾನೆ ಅರ್ಜೆಂಟ್ ಮಾಡಿದೆ, ದುಡಿಕಿಬಿಟ್ಟೆ ಅನ್ಸುತ್ತೆ...ನಂದು ಲವ್ ಮ್ಯಾರೇಜ್ ಅಲ್ಲ, ಪಕ್ಕಾ ಅರೇಂಜ್ಡ್ ಮ್ಯಾರೇಜ್, ಜೀವನದಲ್ಲಿ ಏನಾಗುತ್ತದೆ ಅಂದ್ರೆ ಸ್ವಾಭಿಮಾನ ಹೆಚ್ಚು ಮುಖ್ಯ ಆಗುತ್ತದೆ..ಅದು ಕುಟುಂಬ ಆಗಬಹುದು, ಯಾರೇ ಇರಬಹುದು ನಾನು ಮದುವೆ ಆಗಿರುವ ಹುಡುಗನ ಫ್ಯಾಮಿಲಿ ಕೂಡ ತುಂಬಾ ರೆಸ್ಪೆಕ್ಟೆಡ್ ಫ್ಯಾಮಿಲಿ..ಹಾಗೆ ನನ್ನ ಅತ್ತೆ ಮತ್ತು ಮಾವ ತುಂಬಾ ಒಳ್ಳೆಯವರು...ನನ್ನ ಗಂಡ ಕೂಡ ತುಂಬಾನೇ ಒಳ್ಳೆಯವರು" ಎಂದು ಇದೀಗ ಖಾಸಗಿ ಯೌಟ್ಯೂಬ್ ಚಾನೆಲ್ ಮೂಲಕ ನಟಿ ಸಿತಾರಾ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.. ಹೌದು ಈ ಸಂದರ್ಶನದಲ್ಲಿ ಮುಂದೆ ಮಾತನಾಡುತ್ತಾ ಇನ್ನು ಏನೇನು ಹೇಳಿದರು ಗೊತ್ತ ಮುಂದೆ ಓದಿ..

"ಸಣ್ಣ ಪುಟ್ಟ ಮನಸ್ತಾಪಗಳಿತ್ತು, ಕೆಲವು ವಿಚಾರಗಳು ನಮಗೆ ಹೊಂದಾಣಿಕೆ ಆಗಲಿಲ್ಲ ಮುಂದಕ್ಕೆ ಸಿಗಬಹುದು ಸಿಗದೇ ಇರಬಹುದು ಆದರೆ ಮದುವೆ ಮಾಡಿಕೊಳ್ಳದೆ ಸಾಧನೆ ಕಡೆ ಗಮನ ಕೊಡಬೇಕು ಅನ್ನೋದೇ ನನ್ನ ಯೋಚನೆ..ಕುಟುಂಬ ಮತ್ತು ಗಂಡ ಅನ್ನೋ ವಿಚಾರ ನನಗೂ ಅವರಿಗೂ ಕೂಡಿ ಬರುತ್ತಿರಲಿಲ್ಲ..ನಾನು ಅವರಿಗೆ ಅರ್ಥವಾಗಲಿಲ್ಲ..ಹಾಗೆ ಅವರು ಕೂಡ ನನಗೆ ಅರ್ಥವಾಗಿಲ್ಲ. ಸುಮಾರು ಮದುವೆಯಾಗಿ ಮೂರ್ ನಾಲ್ಕು ವರ್ಷ ಆಯಿತು. ಮೂರು ನಾಲ್ಕು ವರ್ಷ ಸಮಯ ಕೊಟ್ಟಿದ್ದೇನೆ, ಇದೆ ಹೇಳುತ್ತೆ ನನಗೆ ತಾಳ್ಮೆ ಜಾಸ್ತಿ ಎಂದು, ನನ್ನ ಸೀರಿಯಲ್ ಕೆಲಸಗಳು ಹಾಗೆ ನಡೆಯುತ್ತಿವೆ. ಕೆಲವೊಂದು ಸೀರಿಯಲ್ ಗಳ ಗಳಲ್ಲಿ ಕಾಸ್ಟೂಮ್ ಮಾಡುತ್ತಿರುವೆ. ಕೆಲವರ ಜೊತೆ ಕ್ಯಾಮೆರಾ ಕಾರ್ಯ ಕೂಡ ನಿರ್ವಹಿಸುತ್ತಿದ್ದೇನೆ. ಈಗಷ್ಟೇ ನಟನಾ ವೃಂದಕ್ಕೆ ಎಂಟ್ರಿ ಕೊಡುತ್ತಿರುವವರಿಗೆ ಒಂದು ವಾರ ನಟನೆ ಹೇಗೆ ಮಾಡಬೇಕು, ಅವರಿಗೆ ಗೊತ್ತಿಲ್ಲದ ವಿಚಾರಗಳನ್ನು ಹೇಳಿಕೊಡುತ್ತಿರುವೆ. ನನ್ನ ಜೀವನದಲ್ಲಿ ನನಗೆ ಖುಷಿ ಇದೆ. ಹೊಸ ವಿಚಾರಗಳನ್ನು ಪ್ರತಿದಿನ ಕಲಿಯುತ್ತಿದ್ದೇನೆ. ಆದ್ರೆ ಇಂದಿಗೂ ಕೂಡ ಕೆಲವು ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದುಬಿಟ್ಟವು, ಈ ವರ್ಷ ಅದಕ್ಕೆ ಉತ್ತರ ಸಿಗುತ್ತದೆ" ಎಂದು ನಟಿ ಸಿತಾರಾ ಹೇಳಿಕೊಂಡಿದ್ದಾರೆ...