ಭಾರತವನ್ನೇ ಬಿಟ್ಟುಹೋಗುವ ನಿರ್ಧಾರ ಮಾಡಿದ ಸ್ನೇಹಾ : ಅಭಿಮಾನಿಗಳು ಶಾಕ್ : ಕಾರಣ ಏನು ನೋಡಿ ?

ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಸಂಜನಾ ಬುರ್ಲಿ ಹೊರಬಂದಿದ್ದಾರೆ. ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್ ಬೈ ಹೇಳಿದ ಕಾರಣಕ್ಕೆ.. ಸ್ನೇಹಾ ಪಾತ್ರವನ್ನೇ ಎಂಡ್ ಮಾಡಲಾಗಿದೆ. ಸ್ನೇಹಾ ಪಾತ್ರಕ್ಕೆ ರೀಪ್ಲೇಸ್‌ಮೆಂಟ್ ಬದಲು ಪಾತ್ರವನ್ನೇ ಅಂತ್ಯಗೊಳಿಸಲಾಗಿದೆ. ತಾವು ಸೀರಿಯಲ್‌ನಿಂದ ಹೊರಬಂದಿರುವ ಬಗ್ಗೆ ಸಂಜನಾ ಬುರ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂಜನಾ ಬುರ್ಲಿ ಇನ್ಸ್ಟಾಗ್ರಾಮ್ ಪೋಸ್ಟ್!
‘’ಪ್ರತಿಯೊಂದು ದೊಡ್ಡ ವಿಷಯವೂ ಕೊನೆಗೊಳ್ಳುತ್ತದೆ. ಜೀ ಕನ್ನಡ ವಾಹಿನಿಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದೊಂದಿಗಿನ ನನ್ನ ಪ್ರಯಾಣವೂ ಅಂತ್ಯಗೊಂಡಿದೆ. ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ನನ್ನ ನಟನಾ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿತ್ತು’’
‘’ಸ್ನೇಹಾ ಪಾತ್ರವನ್ನು ನನಗೆ ವಹಿಸಿಕೊಟ್ಟಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಹಂಚಿಕೊಳ್ಳುತ್ತೇನೆ. ಈಗ ಸ್ನೇಹಾ ಪಾತ್ರವನ್ನ ಬಿಟ್ಟು ನಾನು ಮುಂದುವರೆಯುವ ಸಮಯ ಬಂದಿದೆ. ಕೆಲವು ಅನಿವಾರ್ಯ ಸಂದರ್ಭಗಳು ಮತ್ತು ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಭಾರವಾದ ಹೃದಯದಿಂದ ಸ್ನೇಹಾ ಪಾತ್ರವನ್ನ ತೊರೆಯಬೇಕಾಗಿದೆ’’
ಸ್ನೇಹಾ ಅವರು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಭಾರತವನ್ನು ತೊರೆದು ವಿದೇಶಕ್ಕೆ ಹೋಗುತ್ತಿದ್ದಾರೆ ತಿಳಿದು ಬಂದಿದೆ ಅವರು ಈ ಹಿಂದೆ, "ನಾನು ಧಾರಾವಾಹಿಯಲ್ಲಿ ನಟಿಸುತ್ತಾ, ನನ್ನ ಅಧ್ಯಯನಕ್ಕೆ ನ್ಯಾಯ ಮಾಡಲಾಗುವುದಿಲ್ಲ" ಎಂದು ತಿಳಿಸಿದ್ದರು. ಆದ್ದರಿಂದ, ಅವರು ಧಾರಾವಾಹಿಯಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯನ್ನು ಯಶಸ್ವಿಯಾಗಿ ಮಾಡಲು ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ" ಎಂದು ಸ್ನೇಹಾ ಹೇಳಿದ್ದಾರೆ.
ಸ್ನೇಹಾ ಅವರ ಈ ನಿರ್ಧಾರವು, ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅವರ ಮುಂದಿನ ಶಿಕ್ಷಣಕ್ಕಾಗಿ ಶುಭಾಶಯಗಳನ್ನು ಕೋರುತ್ತೇವೆ.