ಸೋನು ಗೌಡ ಭರ್ಜರಿ ವರ್ಕೌಟ್ ವಿಡಿಯೋ ವೈರಲ್..! ನೆಟ್ಟಿಗರಿಂದ ಶಬ್ಬಾಷ್ ಎನಿಸಿಕೊಂಡ ಸೋನು
ಸೋನು ಶ್ರೀನಿವಾಸ ಗೌಡ. ಹೌದು ಈ ಹೆಸರನ್ನು ಬಹುತೇಕ ಜನರು ಈಗಾಗಲೇ ಸಾಕಷ್ಟು ಬಾರಿ ಕೇಳಿದ್ದೀರಿ. ಅವರು ಅವರದೇ ಆದ ವಿಭಿನ್ನ ಶೈಲಿಯ ಮೂಲಕ ಕರ್ನಾಟಕಕ್ಕೆ ಪರಿಚಯ ಆದವರು. ಹಾಗೆ ಆರಂಭದಲ್ಲಿ ಟಿಕ್ ಟಾಕ್ ಮಾಡುತ್ತಾ ಹೆಚ್ಚು ಪ್ರಸಿದ್ಧಿ ಪಡೆದ ಸೋನು ಶ್ರೀನಿವಾಸ ಗೌಡ ಅವರು ನಂತರದ ದಿನದಲ್ಲಿ ಕಾಣಿಸಿಕೊಂಡಿದ್ದೆ ಬೇರೆ ರೀತಿ. ಅದರಿಂದ ಸೋನು ಶ್ರೀನಿವಾಸಗೌಡ ಅವರು ಹೆಚ್ಚು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ಇತ್ತೀಚಿಗೆ ಮೊನ್ನೆ ಮೊನ್ನೆ ಅಷ್ಟೇ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದರು. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ನ ಕೆಲವು ವೀಕ್ಷಕರು ಹಾಗೆ ಅಭಿಮಾನಿಗಳಿಂದ ಟೀಕೆಗೆ ಕೂಡ ಚಾನೆಲ್ ಹಾಗೂ ಬಿಗ್ ಬಾಸ್ ಸಹ ಒಳಗಾಗಿತ್ತು. ಇಂತಹವರನ್ನು ಬಿಗ್ ಬಾಸ್ ಮನೆಗೆ ಪ್ರತಿಷ್ಠಿತವಾದ ಸ್ಥಳಕ್ಕೆ ಕಳುಹಿಸಿ ಯಾಕೆ ನೋಡುಗರನ್ನು ಬೇಸರ ಮಾಡುತ್ತೀರಾ, ಅಂತಹ ಸ್ಥಳಕ್ಕೆ ಇಂಥವರು ಬೇಕಾ ಎಂಬುದಾಗಿ ಹೆಚ್ಚು ಪ್ರಶ್ನೆ ಮಾಡಲಾಗಿತ್ತು.
ಸೋನು ಶ್ರೀನಿವಾಸ ಗೌಡ ಹೆಚ್ಚು ಬಾರಿ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಯೂಟ್ಯೂಬ್ ಚಾನೆಲ್ ಮತ್ತು ಕೆಲ ಮಾಧ್ಯಮಗಳು ಇವರನ್ನು ಸಂದರ್ಶನ ಕೂಡ ಮಾಡಿರುವುದು ಆಶ್ಚರ್ಯ ಸಂಗತಿ. ಈಗಲೂ ಕೂಡ ಹೆಚ್ಚು ಆಕ್ಟಿವ್ ಆಗಿರುವ ಸೋನು ಶ್ರೀನಿವಾಸ ಗೌಡ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳ ಮೂಲಕ ಅಥವಾ ವಿಡಿಯೋಗಳ ಮೂಲಕ ಇನ್ಯಾವುದೋ ಒಂದು ವಿಚಾರದ ಮೂಲಕ ಅವರ ವಿಡಿಯೋಗಳ ಶೇರ್ ಮಾಡಿಕೊಳ್ಳುತ್ತಾರೆ. ಅಥವಾ ಬೇರೆ ಬೇರೆ ಪ್ರಾಡಕ್ಟ್ ಗಳನ್ನು ಪ್ರಮೋಷನ್ ಕೂಡ ಮಾಡುತ್ತಾರೆ ಸೋನು ಶ್ರೀನಿವಾಸ ಗೌಡ.
ಹೌದು ಸೋನು ಇದೀಗ ಮತ್ತೊಂದು ವಿಡಿಯೋದಲ್ಲಿ ಕಾಣಿಸಿದ್ದು ಹೆವಿ ವರ್ಕ್ ಔಟ್ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಸೋನು ಶ್ರೀನಿವಾಸ ಗೌಡ ಅವರು ಲೆಗ್ ವರ್ಕೌಟ್ ಮಾಡುತ್ತಿದ್ದಾರೆ ಎಂದು ಸ್ವತಹ ಅವರೇ ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸೋನು ಅವರ ಈ ವಿಡಿಯೋಗೆ ಕೆಲವರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದರೆ, ಇನ್ನೂ ಕೆಲವರಿಂದ ಕೆಟ್ಟದಾದ ರೀತಿಯಲ್ಲಿ ಕಮೆಂಟ್ ಗಳು ಹರಿದುಬಂದಿವೆ. ಸೋನು ಶ್ರೀನಿವಾಸಗೌಡ ಅವರ ಈ ವಿಡಿಯೋವನ್ನು ನೀವು ನೋಡಿದ್ದಲ್ಲಿ ಬೆರಗಾಗುತ್ತೀರಾ. ಅಷ್ಟಕ್ಕೂ ಅದು ಯಾವ ರೀತಿ ಇವರು ವರ್ಕೌಟ್ ಮಾಡಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ವರ್ಕೌಟ್ ವೈರಲ್ ಆದಂತಹ ವಿಡಿಯೋ ನೋಡಿ ಶೇರ್ ಮಾಡಿ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ..




