ಗಿಲ್ಲಿನೆ ಗೆಲ್ಲೋದು ಕಪ್ ಫಿಕ್ಸ್ !! ಸೂಚನೆ ಕೊಟ್ರ ಕಿಚ್ಚ ಸುದೀಪ್?
ಬಿಗ್ ಬಾಸ್ ಕನ್ನಡ ಸೀಸನ್ 12 ತನ್ನ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ, ಕಿಚ್ಚ ಸುದೀಪ್ ಅವರ "ಕಿಚ್ಚನ ಚಪ್ಪಾಳೆ" ನಿರ್ಧಾರ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಡೀ ಸೀಸನ್ ಉದ್ದಕ್ಕೂ ಮನೋರಂಜನೆಯ ಮೂಲಕ ವೀಕ್ಷಕರನ್ನು ಕಟ್ಟಿ ಹಾಕಿದ ಗಿಲ್ಲಿ ನಟನಿಗೆ ಈ ವಾರ ಚಪ್ಪಾಳೆ ಸಿಗದೆ, ಅದು ಧ್ರುವಂತ್ ಹಾಗೂ ಅಶ್ವಿನಿ ಅವರಿಗೆ ಸಿಕ್ಕಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಗಿಲ್ಲಿ – ಮನೋರಂಜನೆಯ ಕಿಂಗ್
ಗಿಲ್ಲಿ ಪ್ರತಿ ಎಪಿಸೋಡ್ನಲ್ಲೂ ಕಾಮಿಡಿ ಹಾಗೂ ಎಂಟರ್ಟೈನ್ಮೆಂಟ್ ಮೂಲಕ ವೀಕ್ಷಕರ ಮನ ಗೆದ್ದಿದ್ದಾರೆ. ಯಾವುದೇ ಜಗಳ ನಡೆದರೂ ತಮ್ಮ ತನವನ್ನ ಬಿಟ್ಟುಬಿಡದೆ, ವೀಕ್ಷಕರಿಗೆ ಮಜಾ ನೀಡಿದ ಗಿಲ್ಲಿ, ತಪ್ಪು ಕಂಡಾಗ ಓಪನ್ ಆಗಿ ಹೇಳಿ, ಇತರರಿಗೆ ಸ್ಟ್ಯಾಂಡ್ ಕೂಡ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಲೇ ಅಭಿಮಾನಿಗಳು "ಒನ್ ಮ್ಯಾನ್ ಶೋ" ಎಂದು ಕರೆಯುತ್ತಾ, ಟ್ರೋಫಿ ಗಿಲ್ಲಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಹೊಂದಿದ್ದರು.
ಧ್ರುವಂತ್ ಮತ್ತು ಅಶ್ವಿನಿ – ಟಿಆರ್ಪಿ ಗಿಮಿಕ್?
ಈ ವಾರದ ಟಾಸ್ಕ್‌ಗಳಲ್ಲಿ ಧ್ರುವಂತ್ ಹಾಗೂ ಅಶ್ವಿನಿ ಅತ್ಯುತ್ತಮವಾಗಿ ಆಡಿದರೂ ಅವರಿಗೆ ಯಾವುದೇ ಗೌರವ ಸಿಗದಿದ್ದರೆ ಅದು ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ಕಿಚ್ಚ ಸುದೀಪ್ ಅವರು ಇವರಿಬ್ಬರಿಗೆ ಚಪ್ಪಾಳೆ ನೀಡಿದ್ದು, ಕೆಲವರ ಅಭಿಪ್ರಾಯದಲ್ಲಿ ಇದು ಕೇವಲ ಟಿಆರ್ಪಿ ಗಿಮಿಕ್ ಮಾತ್ರ. ವೀಕ್ಷಕರಲ್ಲಿ ಹುಟ್ಟಿದ ಅಸಮಾಧಾನವನ್ನು ಸಮಾಧಾನಗೊಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಈ ಮಧ್ಯೆ ಧ್ರುವಂತ ಹಾಗೂ ಅಶ್ವಿನಿ ಗೌಡಗೆ ಕಿಚ್ಚ ಚಪ್ಪಾಳೆ ಕೊಡಲು ಒಂದು ದೊಡ್ಡ ಕಾರಣ ಇದೆಯಂತೆ ಎಂದು ವೀಕ್ಷಕರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವನ್ನ ಅಂಚಿಕೊಂಡಿದ್ದಾರೆ. ಹೌದು ಸುದೀಪ್ ಸರ್ ಅವರು ಅವರ ಕೆಲಸವನ್ನ ಮಾಡ್ತಿದ್ದಾರೆ. ಇಷ್ಟು ದಿನ ಪ್ರೇಕ್ಷಕರು ಮತ್ತೆ ಬಿಗ್ ಬಾಸ್ ಗಿಲ್ಲಿನ ಎತ್ತಿ ಮೆರಿಸ್ತಾ ಇದ್ರು. ಈಗ ಅಶ್ವಿನಿ ಮತ್ತೆ ಧ್ರುವಂತ್ಗೆ ಆಗಿರೋ ನೋವಿಗೆ ಸಮಾಧಾನ ಆಗಲಿ ಅಂತ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ. ಇದು ಕೇವಲ ಟಿಆರ್ಪಿಯ ಗಿಮಿಕ್. ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಕೈ ಎತ್ತುವುದು ಗಿಲ್ಲಿ ಕಪ್ ತೆಗೆದುಕೊಳ್ಳುವುದು ಫಿಕ್ಸ್ ಅಂತಿದ್ದಾರೆ.
ಫಿನಾಲೆಯತ್ತ ನಿರೀಕ್ಷೆ
ಸೀಸನ್ ವಿನ್ನರ್ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಿಲ್ಲಿ, ಧ್ರುವಂತ್, ಅಶ್ವಿನಿ ಹಾಗೂ ರಕ್ಷಿತ – ಈ ನಾಲ್ವರು ಸ್ಪರ್ಧಿಗಳ ಹೆಸರುಗಳು ಹೆಚ್ಚು ಚರ್ಚೆಯಲ್ಲಿವೆ. ಆದರೆ ಅಭಿಮಾನಿಗಳ ಬಹುಮತ ಗಿಲ್ಲಿಯೇ ಟ್ರೋಫಿ ಗೆಲ್ಲುತ್ತಾರೆ ಎಂಬುದರತ್ತ ತಿರುಗಿದೆ.
ಅಭಿಮಾನಿಗಳ ಪ್ರತಿಕ್ರಿಯೆ
ಗಿಲ್ಲಿ ಅಭಿಮಾನಿಗಳು, "ಕಿಚ್ಚನ ಚಪ್ಪಾಳೆ ಗಿಲ್ಲಿಗೇ ಸಿಗಬೇಕಾಗಿತ್ತು" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರ ಪ್ರಕಾರ, ಫಿನಾಲೆಯಲ್ಲಿ ಕಿಚ್ಚ ಸುದೀಪ್ ಕೈ ಎತ್ತುವುದು ಗಿಲ್ಲಿಯೇ ಆಗಿರಬೇಕು, ಟ್ರೋಫಿ ಗಿಲ್ಲಿಯೇ ಗೆಲ್ಲಬೇಕು.
???? ನಿಮ್ಮ ಅಭಿಪ್ರಾಯದಲ್ಲಿ ಈ ಸೀಸನ್ ವಿನ್ನರ್ ಯಾರು? ಗಿಲ್ಲಿ ಗೆಲ್ಲಬೇಕು ಎಂದು ನೀವು ಭಾವಿಸುತ್ತಿದ್ದರೆ, ತಪ್ಪದೆ ಲೈಕ್ ಮಾಡಿ!




