ಕೊನೆಗೂ ಬಾಯ್ ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಕಿಚ್ಚನ ಪುತ್ರಿ : ಅಸಲಿ ಸತ್ಯ ಇಲ್ಲಿದೆ ನೋಡಿ ?

ಕೊನೆಗೂ ಬಾಯ್ ಫ್ರೆಂಡ್  ಬಗ್ಗೆ ಬಾಯ್ಬಿಟ್ಟ ಕಿಚ್ಚನ ಪುತ್ರಿ : ಅಸಲಿ ಸತ್ಯ ಇಲ್ಲಿದೆ ನೋಡಿ ?

ಈಗಾಗಲೇ ಗಾಯಕಿಯಾಗಿ ಗುರುತಿಸಿಕೊಂಡಿರುವ ಸಾನ್ವಿ ಸುದೀಪ್‌ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್‌ ಆಗಿದ್ದು, ತಮಗೆ ಅನಿಸಿರುವ ವಿಚಾರವನ್ನ ಅತ್ಯಂತ ಮುಕ್ತವಾಗಿ ಹೇಳಿಕೊಳ್ಳುತ್ತಾರೆ.
ಅದರೊಂದಿಗೆ ಪೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫಾಲೋವರ್ಸ್‌ಗಳೊಂದಿಗೆ ಎಂಗೇಜ್‌ ಆಗಿರುತ್ತಾರೆ. ಇತ್ತೀಚೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಅವರು ನನಗೆ ಏನಾದರೂ ಪ್ರಶ್ನೆ ಕೇಳಿ ಅನ್ನೋ ಫ್ಯಾನ್‌ ಎಂಗೇಜ್‌ಮಂಟ್‌ಅನ್ನು ನಡೆಸಿದ್ದರು. ಈ ವೇಳೆ ತಮ್ಮ ಫಾಲೋವರ್ಸ್‌ಗಳು ಕೇಳಿರುವ ಪ್ರಶ್ನೆಗೆ ತಮಾಷೆಯಾಗಿ ಉತ್ತರ ಮಾಡಿದ್ದಾರೆ.

ಅಂದಹಾಗೆ ಇದೀಗ ಕಿಚ್ಚ ಸುದೀಪ್‌ ಪುತ್ರಿ ತಮ್ಮ ಬಾಯ್‌ ಫ್ರೆಂಡ್‌ ಹೆಸರಿನ ಬಗ್ಗೆ ಮಾತನಾಡಿದ್ದಾರೆ.  ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಾನ್ವಿ ಸುದೀಪ್ ಅವರು 'ಆಸ್ಕ್​​ ಮಿ ಎನಿಥಿಂಗ್​' ಸೆಷನ್​ ಮಾಡಿದ್ದರು. ಈ ಸೆಷನ್‌ನಲ್ಲಿ ಅನೇಕರು ಸಾನ್ವಿಗೆ ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲೊಬ್ಬ ಫಾಲೋವರ್, ʼನಿಮ್ಮ ಬಾಯ್‌ಫ್ರೆಂಡ್ ಹೆಸರೇನುʼ ಎಂದು ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಸಾನ್ವಿ, ನನಗೆ ಬಾಯ್‌ಫ್ರೆಂಡ್ ಇಲ್ಲಾ ಬಾಸ್ ಎಂದು ಹೇಳಿದ್ದಾರೆ.  

ಇನ್ನು ಇದೇ ಸಂದರ್ಭದಲ್ಲಿ ಮತ್ತೊಬ್ಬ ಫಾಲೋವರ್‌, ʼನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ ಯಾವ ಪಾತ್ರದಲ್ಲಿ ಬದಲಾಗುತ್ತೀರಿʼ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ʼಪುಷ್ಪದಲ್ಲಿ ರಶ್ಮಿಕಾ ಮಾಡಿದ್ದ ಶ್ರೀವಲ್ಲಿ ಪಾತ್ರʼ ಎಂದು ಸಾನ್ವಿ ಹೇಳಿದ್ದಾರೆ. ಜೊತೆಗೆ ಇದೇ ವೇಳೆ ʼಪುಷ್ಪರಾಜ್‌ನಂತಹ ಗಂಡ ಸಿಕ್ಕರೆ ಅದಕ್ಕಿಂತ ಇನ್ನೇನು ಬೇಕುʼ ಎಂದು ತಮಾಷೆ ಕೂಡ ಮಾಡಿದ್ದಾರೆ.  

ತಮ್ಮ ಆಲ್‌ಟೈಮ್‌ ಫೇವರಿಟ್‌ ಪರ್ಸನ್‌ ಸಂಚಿತ್‌ ಸಂಜೀವ್‌ ಎಂದು ಹೇಳಿದ್ದು, ಇವನು ನನಗೆ ಅಣ್ಣ ಅಂತಲೂ ತಿಳಿಸಿದ್ದಾರೆ. ಈ ವೇಳೆ ತಂದೆ ಸುದೀಪ್‌ ಅಥವಾ ತಾಯಿ ಪ್ರಿಯಾ ಅವರ ಹೆಸರು ಹೇಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು
ಇನ್ನು ಬಿಗ್ ಬಾಸ್‌ಗೆ ಸುದೀಪ್ ಗುಡ್ ಬೈ ಹೇಳಿರುವುದು ಎಲ್ಲರಿಗೆ ಗೊತ್ತೇ ಇದೆ. ಸುದೀಪ್ ಸ್ಥಾನವನ್ನು ಆ ವೇದಿಕೆಯಲ್ಲಿ ಯಾರು ತುಂಬುತ್ತಾರೆ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ. ಇದಕ್ಕೆ ಆನೇಕರ ಹೆಸರುಗಳು ಕೇಳಿ ಬರುತ್ತಿವೆ. ಗಣೇಶ್, ಡಾಲಿ ಧನಂಜಯ್, ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಹೆಸರುಗಳು ಕೂಡ ಚಾಲ್ತಿಯಲ್ಲಿವೆ. ಇದರ ನಡುವೆ ಮತ್ತೊಬ್ಬ ವ್ಯಕ್ತಿಯೊಬ್ಬರಿಗೆ ಸಾನ್ವಿ ಅವರನ್ನು ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ಸ್ಥಾನದಲ್ಲಿ ನೋಡುವ ಆಸೆಯಾಗಿದೆ. ಹೀಗಾಗಿ ತಡಮಾಡದೇ ಮುಂದಿನ ಬಿಗ್ ಬಾಸ್ ಹೋಸ್ಟ್ ನೀವು ಆಗಬಹುದು ಎಂದು ಪ್ರಶ್ನೆಯನ್ನು ವ್ಯಕ್ತಿ ಕೇಳಿದ್ದಾರೆ. ಇದಕ್ಕೆ ಸಾನ್ವಿ ನನಗೆ ಅಷ್ಟು ತಾಳ್ಮೆ ಇಲ್ಲ ಬಾಸ್ ಸಾರಿ ಎಂದು ಉತ್ತರವನ್ನು ನೀಡಿದ್ದಾರೆ. ಹೀಗೆ ಸಾನ್ವಿ ಸುದೀಪ್ ತಮಗೆ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ ಮುಚ್ಚು ಮರೆಯಿಲ್ಲದೇ ಉತ್ತರವನ್ನು ನೀಡಿದ್ದಾರೆ. ತಮಾಷೆ ಕೂಡ ಮಾಡಿದ್ದಾರೆ.