ಸುಷ್ಮಾಳ ಒಂಟಿ ಬದುಕಿನ ಕಥೆ : ಮಗು ಆಗ್ತಿದ್ದಂತೆ ದೂರವಾದ ಪತಿ? ಯಾರದು ನೋಡಿ ?

ಸುಷ್ಮಾಳ ಒಂಟಿ ಬದುಕಿನ ಕಥೆ : ಮಗು ಆಗ್ತಿದ್ದಂತೆ ದೂರವಾದ ಪತಿ? ಯಾರದು ನೋಡಿ ?

ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಗುಪ್ತಗಾಮಿಯಲ್ಲಿ ಭಾವನಾ ಪಾತ್ರದ ಮೂಲಕ ಎಲ್ಲರ ಮನಗೆದ್ದ ನಾಯಕಿ ಸುಷ್ಮಾ.. ಇವರ ಪೂರ್ತಿ ಹೆಸರು ಸುಷ್ಮಾ ಕೆ. ರಾವ್..‌ ಇವರು ಪ್ರಸ್ತುತ ಭಾಗ್ಯಲಕ್ಷ್ಮೀ ಸಿರೀಯಲ್‌ನಲ್ಲಿ ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುಮಾರು 10 ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.. 

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ವೈಯಕ್ತಿಕ ಜೀವನ ಕಣ್ಣಿರಿನಲ್ಲಿ ಕೈತೊಳೆಯುವಂತಿತ್ತು.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಬದುಕು ನಡೆಸಿದ್ದಾರೆ..   ಕಿರುತೆರೆಯಲ್ಲಿ ಬಹಳ ಫೇಮಸ್‌ ಆಗಿರುವ ಸುಷ್ಮಾ ಆಂಕರ್‌, ಆಕ್ಟರ್‌ ಹಾಗೂ ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.. ನಿರೂಪಕಿಯಾಗಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದರ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದಿದ್ದಾಳೆ ಈ ಚೆಲುವೆ..   
ಆಂಕರಿಂಗ್‌ನಲ್ಲಿ ಅನುಶ್ರೀ ನಂತರ ಸ್ಥಾನ ಪಡೆದಿರುವಂತಹ ಪ್ರತಿಭೆಯೆಂದರೇ ಅದು ಸುಷ್ಮಾ ಕೆ ರಾವ್..‌ ನಿರೂಪಕಿಯಾಗಿ ಮಾತ್ರವಲ್ಲದೇ ಸಾಕಷ್ಟು ಜನಮನ್ನಣೆ ಗಳಿಸಿದ ಸಿರೀಯಲ್‌ಗಳಲ್ಲಿಯೂ ನಟಿಸುವುದರ ಮೂಲಕ ಸುಷ್ಮಾ ದೊಡ್ಡ ಹೆಸರು ಮಾಡಿದ್ದಾರೆ..    

ಮೂಲತಃ ಕೊಪ್ಪಳದವರಾದ ಇವರ ತಂದೆ ಮಿಲಿಟರಿ ಮ್ಯಾನ್.. ಇನ್ನು ನಟಿ ಸುಷ್ಮಾ ಬಾಳಲ್ಲಿ ಪ್ರೀತಿ ಎನ್ನುವುದು ಚಿಗುರಿದ್ದು.. 2000ದಲ್ಲಿ ಎನ್ನಲಾಗಿದೆ.. ಮುಂಗಾರು ಮಳೆ ಸಿನಿಮಾ ಬಂದಾಗ ಪ್ರೀತಂ ಗುಬ್ಬಿ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಾರೆ.. ಆದರೆ ಅದಕ್ಕೂ ಮುನ್ನ ನಟಿ ಸುಷ್ಮಾ ಹಾಗೂ ಪ್ರೀತಂ ಪ್ರೀತಿಯಲ್ಲಿ ಬಿದ್ದಿರುತ್ತಾರೆ... ನಂತರ 2007 ಮನೆಯವರ ಒಪ್ಪಿಗೆ ಇಲ್ಲದೇ ಇಬ್ಬರು ಮದುವೆಯಾಗ್ತಾರೆ..   

ಕೆಲವು ದಿನಗಳ ನಂತರ ಬಣ್ಣದ ಲೋಕದ ಕಡೆಗೆ ಹೆಚ್ಚು ಪೋಕಸ್‌ ಮಾಡಿದ್ದರ ಪರಿಣಾಮ ಇಬ್ಬರ ಜೀವನದಲ್ಲಿ ಬಿರುಕುವುಂಟಾಗಲು ಪ್ರಾರಂಬಿಸುತ್ತದೆ.. ನಂತರ ಸಾಕಷ್ಟು ಭಿನ್ನಾಬಿಪ್ರಾಯಗಳು ಉಧ್ಭವವಾಗುತ್ತವೆ.. ಪ್ರೀತಿಸಿ ಮದುವೆಯಾಗಿದ್ದ ಸಂಸಾರದಲ್ಲಿ ವೈಮನಸ್ಯ ಉಂಟಾಗತೊಡಗಿ ಇಬ್ಬರ ಸಂಬಂಧ ಮುರಿದು ಬಿತ್ತು.. ಸುಷ್ಮಾ ಮತ್ತು ಪ್ರೀತಂ ಗುಬ್ಬಿ  ಇಂದಿಗೂ ಕೂಡ ಕೋರ್ಟು ಮೆಟ್ಟಿಲು ಏರಿಲ್ಲ ಎನ್ನಲಾಗುತ್ತಿದೆ. ಒಬ್ಬರಿಂದ ಒಬ್ಬರು ವಿಚ್ಛೇದನ ಪಡೆದುಕೊಂಡಿಲ್ಲ ಎಂದು ಹೇಳಲಾಗುತ್ತದೆ.

( video credit : Mega Suddi )