ವಯಸ್ಸಿನಲ್ಲಿ ಚಿಕ್ಕವನಾದರೂ ಯಶ್ ಕಾಲಿಗೆ ಬೀಳ್ತೇನೆ ಎಂದ ತಮಿಳು ನಿರ್ಮಾಪಕ..! ಕಾರಣ ಕೇಳಿದರೆ ಶಾಕ್ ಆಗ್ತೀರಾ ವಿಡಿಯೋ ನೋಡಿ

ಕನ್ನಡದ ಸ್ಟಾರ್ ನಟ ಯಶ್ ಅವರ ಹವಾ ಇದೀಗ ಇನ್ನಷ್ಟು ಹೆಚ್ಚುತ್ತಿದೆ. ಹೌದು ಯಶ್ ಅವರ ಕೆಜಿಎಫ್ ಸಿನಿಮಾದ ಬಳಿಕ ಯಶ್ ಅವರು ತುಂಬಾನೇ ಎತ್ತರಕ್ಕೆ ಬೆಳೆದಿದ್ದಾರೆ. ಭಾರತ ಸಿನಿಮಾಮಾರಂಗದಲ್ಲಿ ಯಶ್ ಅವರು ಅವರದ್ದೇ ಆದ ಹೊಸ ಟ್ರೆಂಡ್ ಅನ್ನೆ ಸೃಷ್ಟಿ ಮಾಡಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಎಲ್ಲೇ ಹೋದರು ನಟ ಯಶ್ ಅವರ ಗುಣಗಾನ ಹೆಚ್ಚುತ್ತಿದೆ. ಬಾಲಿವುಡ್ ನ ಸಿನಿ ಮೇಕರ್ಸ್ ಸಹ ಯಶ್ ಅವರ ಜೊತೆ ಸಿನಿಮಾ ಮಾಡುವುದಕ್ಕೆ ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪರಬಾಷಾ ಸಿನಿ ತಜ್ಞರು ಯಶ್ ಅವರ ಜೊತೆ ಮಾತುಕೆಗೆ ನಡೆಸಿದ್ದಾರೆ ಎಂದು ಹೇಳಬಹುದು.
ಹೌದು ಕೆಜಿಎಫ್ ಸಿನಿಮಾವನ್ನು ನಾವು ದೊಡ್ಡ ಮಟ್ಟದಲ್ಲಿ ಯಶಸ್ವಿ ಮಾಡಬೇಕು. ನಮ್ಮ ಚಿತ್ರರಂಗ ಎಂದರೆ ಕೆಲವರು ಒಂದು ರೀತಿ ನೋಡುತ್ತಾರೆ, ಅವರ ಆ ನೋಟವನ್ನು ಬದಲಾಯಿಸಬೇಕು, ಪರಭಾಷೆ ಸಹ ನಮ್ಮ ಕನ್ನಡದ ಕಡೆ ತಲೆ ಎತ್ತಿ ನೋಡಬೇಕು ಎಂಬ ಕನಸು ಹೊಂದಿದ್ದರು. ಅದರಂತೆ ಇದೀಗ ಅವರು ಸಾಧನೆ ಮಾಡಿದ್ದಾರೆ. ಕನ್ನಡ ಸಿನಿಮಾ ಶಕ್ತಿ ಏನು ಕನ್ನಡ ಚಿತ್ರರಂಗದ ಅಬ್ಬರ ಹೇಗಿರುತ್ತದೆ ಎಂಬುದಾಗಿ ಎಲ್ಲರಿಗೂ ತೋರಿಸಬೇಕು ಎಂಬುದಾಗಿ ದೊಡ್ಡ ಹಠ ತೊಟ್ಟು ಯಶ್ ಗೆದ್ದು ಬೀಗಿದ್ದಾರೆ. ಕೇವಲ ಯಶ್ ಅವರು ಮಾತ್ರವಲ್ಲದೆ ಇಡೀ ಚಿತ್ರತಂಡ ಮತ್ತು ಕನ್ನಡ ಚಿತ್ರರಂಗ ಜೊತೆಗೆ ಕನ್ನಡಿಗರು ಕೂಡ ಈ ಸಿನಿಮಾ ಮೂಲಕ ಹೆಮ್ಮೆಯಿಂದ ಓಡಾಡುವ ಹಾಗಾಗಿದೆ.
ಇತ್ತೀಚಿಗೆ ಒಂದು ಸಂದರ್ಶನದಲ್ಲಿ ತಮಿಳುನಾಡು ಚಿತ್ರರಂಗದ ನಿರ್ಮಾಪಕ ಕೆ ರಾಜನ್ ಅವರು ಒಂದು ವಿಚಾರವನ್ನು ಬಿಚ್ಚಿಟ್ಟರು. ತಮಿಳು ಮತ್ತು ತೆಲುಗು ಸಿನಿಮಾರಂಗಗಳು ಹಿಂದೆ ಉಳಿಯಲು ನಮ್ಮಲ್ಲಿಯ ಸಿನಿಮಾದ ನಟರೇ ಕಾರಣ. ಸಿನಿಮಾ ಬಂಡವಾಳದಲ್ಲಿ ಸುಮಾರು 60 ರಿಂದ 70% ಹಣವನ್ನು ಸಂಭಾವನೆ ರೂಪದಲ್ಲಿ ಅವರಿಗೆ ಅಷ್ಟು ಹಣ ನೀಡಿದರೆ ಮೂವತ್ತು ಪರ್ಸೆಂಟ್ ಹಣದಲ್ಲಿ ಸಿನಿಮಾ ಹೇಗೆ ಗೆಲ್ಲುತ್ತದೆ. ಒಂದು ಸಿನಿಮಾ ನೂರು ಕೋಟಿ ವೆಚ್ಚದಲ್ಲಿ ತಯಾರು ಆಗುತ್ತಿದೆ ಎಂದರೆ ಅರವತ್ತರಿಂದ 70 ಕೋಟಿ ಹಣವನ್ನು ಸಿನಿಮಾ ನಾಯಕರುಗಳಿಗೆ ನೀಡಬೇಕು..30 ಕೋಟಿಯಲ್ಲಿ ಸಿನಿಮಾ ಪೂರ್ತಿ ಮುಗಿಸಬೇಕು ಅಂದರೆ, ಅದ್ಹೇಗೆ ಅ ಸಿನಿಮಾ ಗೆಲ್ಲುತ್ತದೆ,
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮಾಡುವಾಗ ನಿರ್ಮಾಪಕರು ಎಷ್ಟು ನಿಮಗೆ ಸಂಭಾವನೆ ನೀಡಬೇಕು ಎಂದು ಕೇಳಿದರೆ, ನನ್ನ ಹಣವನ್ನು ಕೂಡ ನಮ್ಮ ಸಿನಿಮಾಗೆ ಹಾಕಿ ಸಿನಿಮಾ ಮಾಡೋಣ, ನಂತರದಲ್ಲಿ ಸಿನಿಮಾ ಗೆದ್ದರೆ ಬರುವ ಆದಾಯದಲ್ಲಿ ಪಾಲು ಕೊಡಿ ಎಂದು ಹೇಳಿದರಂತೆ ಯಶ್, ಅವರು ನನಗಿಂತ ಸಣ್ಣವರಾದರೂ ಕೂಡ ಅವರಿಗೆ ನಾನು ನಮಸ್ಕರಿಸುತ್ತೇನೆ. ಅವರ ಕಾಲಿಗೆ ಬೀಳುತ್ತೇನೆ ಎಂದಿದ್ದಾರೆ ಕೆ ರಾಜನ್ ಅವರು. ಯಶ್ ಅವರ ತೆಲೆಯಲ್ಲಿ ನಿರ್ಮಾಪಕರನ್ನು ಉಳಿಸಬೇಕು ಎನ್ನುವ ಅಂಶ ಇದೆ ನಿರ್ಮಾಪಕರು ಬೆಳೆದರೆ ನಾವು ಬೆಳೆಯುತ್ತೇವೆ ಎನ್ನುವ ಮಹತ್ವಕಾಂಕ್ಷೆಯನ್ನು ಅವರು ಹೊಂದಿದ್ದಾರೆ,
ಅವರ ರೀತಿ ಎಲ್ಲರೂ ಯೋಚನೆ ಮಾಡಿದರೆ ನಿರ್ಮಾಪಕರು ಎಂದಿಗೂ ಬೀದಿಗೆ ಬರುವುದಿಲ್ಲ, ಅದೆಂತಹ ಮನಸ್ಥಿತಿ ಅವರಿಗಿರಬಹುದು ಎಂದು ಯಶ್ ಅವರನ್ನು ಹಾಡಿ ಹೊಗಳಿದ್ದಾರೆ ಕೆ ರಾಜನ್ ಅವರು. ಹೌದು ಅದೇ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗೆ ಯಶ್ ಗುಣಗಾನ ಮಾಡುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...