ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಸತ್ಯ ಬಿಚ್ಚಿಟ್ಟ ಹೃದ್ರೋಗ ತಜ್ಞರು !! ನೋಡಿ ಎಲ್ಲರೂ ಶಾಕ್ ?

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಸತ್ಯ ಬಿಚ್ಚಿಟ್ಟ ಹೃದ್ರೋಗ ತಜ್ಞರು !! ನೋಡಿ ಎಲ್ಲರೂ ಶಾಕ್ ?

ಹಾಸನ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೃದಯಾಘಾತದ  ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜಿಲ್ಲೆಯ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. ಈ ಬಗ್ಗೆ ತಜ್ಞರಾದ ಹೃದ್ರೋಗ ತಜ್ಞ ಡಾ. ಮಹಂತೇಶ್ ಚರಂತಿಮಠ ಅವರು ನೀಡಿರುವ ಹೇಳಿಕೆಯಲ್ಲಿ, ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಅತಿಯಾದ ಮಾಂಸಾಹಾರ ಸೇವನೆ, ಜೀವನಶೈಲಿಯ ಬದಲಾವಣೆ, ಮತ್ತು ಕೆಲಸದ ಒತ್ತಡವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನಹೋದಂತೆ ಹೆಚ್ಚಾಗುತ್ತಲೇ ಇದೆ. ಅಲ್ಲದೇ ವೈದ್ಯರೂ ಕೂಡಾ ಈ ಬಗ್ಗೆ ತನಿಖೆ ನಡೆಸುತ್ತಲೇ ಇದ್ದಾರೆ. ಇದೀಗ ಹೃದ್ರೋಗ ತಜ್ಞರು ಡಾ ಮಹಂತೇಶ್ ಚರಂತಿಮಠ ಕಾರಣ ತಿಳಿಸಿದ್ದು, ಹಾಸನದಲ್ಲಿ ಬಾಡೂಟ ಆಯೋಜನೆ ಹೆಚ್ಚಿರುತ್ತದೆ. ಹೃದಯಾಘಾತಕ್ಕೆ ಅಧಿಕ ಮಾಂಸಹಾರ ಸೇವನೆಯೇ ಕಾರಣ ಎಂದು ಹೇಳಿದ್ದಾರೆ. ಆದ್ದರಿಂದ ಹಾಸನದಲ್ಲಿ ಹಾರ್ಟ್ ಆಟ್ಯಾಕ್ ಕೇಸ್ ಹೆಚ್ಚಾಗಲು ಬಾಡೂಟವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಹೆಚ್ಚಿನ ಬಾಡೂಟ ಸೇವನೆಯಿಂದ‌ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ, ಅಲ್ಲದೇ ವ್ಯಾಯಾಮ ಇಲ್ಲದೆ ಹೃದಯಕ್ಕೆ ಹೆಚ್ಚಿನ ಒತ್ತಡ ಆಗಿ ಹಾರ್ಟ್ ಅಟ್ಯಾಕ್ ಆಗುತ್ತೆ ಎಂದು ಹೇಳಿದ್ದಾರೆ.

ನಮ್ಮ ಜೀವನ ಶೈಲಿ ಬದಲಾವಣೆ, ಕೆಲಸದ ಒತ್ತಡದಿಂದ ಹೃದಯಾಘಾತ ಕೇಸ್ ಹೆಚ್ಚಾಗ್ತಿವೆ. ಯುವಜನತೆ ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ. ಈ ಮೊದಲು 40 ವಯಸ್ಸಿನ ಮೇಲ್ಪಟ್ಡವರಿಗೆ ಹೃದಯಾಘಾತ ಕೇಸ್ ದಾಖಲಾಗ್ತಿತ್ತು, ಆದ್ರೆ ಈಗ 20ರ ಹರೆಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಯುವಕರು ಹಾರ್ಟ್ ಅಟ್ಯಾಕ್‌ಗೆ ಒಳಗಾಗಲು ಕಾರಣ ಅತಿಯಾದ ಮಾಂಸಹಾರ ಸೇವನೆ ಎಂದು ಹೇಳಿದ್ದಾರೆ.
ಇನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ. ಮಂಜುನಾಥ್ ಪ್ರಕಾರ, ಧೂಮಪಾನ, ಮಾದಕ ದ್ರವ್ಯಗಳ ಸೇವನೆ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಯುವ ಜನರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತಿದೆ. "ನಿಯಮಿತ ಆಹಾರ ಮತ್ತು ವ್ಯಾಯಾಮವನ್ನು ಅಳವಡಿಸಿಕೊಂಡರೆ, ಹೃದಯಾಘಾತವನ್ನು ತಡೆಗಟ್ಟಬಹುದು. ಆದರೆ, ಅತಿಯಾದ ವ್ಯಾಯಾಮವೂ ಕೂಡಾ ಹೃದಯಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ವ್ಯಾಯಾಮವು ಸಮತೋಲನವಾಗಿರಬೇಕು," ಎಂದು ಅವರು ಒತ್ತಿ ಹೇಳಿದ್ದಾರೆ.