ಶಾಕಿಂಗ್ ನ್ಯೂಸ್ : ಖ್ಯಾತ ಸ್ಟಾರ್ ನಟನ ಮಗಳಿಗೆ ಅತ್ಯಾಚಾರದ ಬೆದರಿಕೆ

Updated: Tuesday, October 20, 2020, 12:24 [IST]

ಶಾಕಿಂಗ್ ನ್ಯೂಸ್ : ಖ್ಯಾತ ಸ್ಟಾರ್ ನಟನ ಮಗಳಿಗೆ ಅತ್ಯಾಚಾರದ ಬೆದರಿಕೆ

  

Advertisement
 

ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಕಿಡಿಗೇಡಿಯೊಬ್ಬ ಅಸಹ್ಯಕರ ಟ್ವೀಟ್ ಮಾಡಿದ್ದಾನೆ . ರಿತಿಕ್ ಎಂಬ ಟ್ವಿಟರ್ ಹ್ಯಾಂಡಲ್ ‌ನಿಂದ ಈ ಟ್ವೀಟ್ ಹೊರಬಿದ್ದಿದೆ. ವಿಜಯ್ ಸೇತುಪತಿ ಮತ್ತು ಅವರ ಮಗಳ ಫೋಟೋ ಹಾಕಿ ಈ ಅಸಹ್ಯಕರ ಟ್ವೀಟ್ ಮಾಡಿದ್ದಾನೆ. ಈ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಜಯ್ ಮತ್ತು ಪುಟ್ಟ ಮಗಳ ಫೋಟೋವನ್ನು ಶೇರ್ ಮಾಡಿ ಅತ್ಯಾಚಾರ ನಡೆಸಬೇಕು, ಅವಳ ತಂದೆಗೆ ತಮಿಳರು ಶ್ರೀಲಂಕಾದಲ್ಲಿ ನಡೆಸಿದ ಜೀವನ ಅರ್ಥವಾಗಬೇಕು' ಎಂದು ಟ್ವೀಟ್ ಮಾಡಿದ್ದಾನೆ.

  

Advertisement

ಈ ಟ್ವೀಟ್ ವಿರೋಧಿಸಿ ವಿಜಯ್ ಸೇತುಪತಿ ಅಭಿಮಾನಿಗಳು ಆ ಕಿಡಿಗೇಡಿಯ ವಿರುದ್ಧ ಮುಗಿಬಿದ್ದಿದ್ದಾರೆ. ಅವನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಸದ ಎಸ್ ಸೆಂಥಿಲ್ ಕುಮಾರ್ ಟ್ವೀಟ್ ಮಾಡಿ ಇವರು ಮನುಷ್ಯರಾ ? ಇವನನ್ನು ತಕ್ಷಣವೇ ಬಂಧಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿದ್ದಾರೆ.

ಶ್ರೀಲಂಕಾದ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಜೀವನ ಆಧಾರಿತ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ನಟಿಸುವುದಾಗಿ ಅನೌನ್ಸ್ ಮಾಡಿದ್ದರು. ತಮಿಳುನಾಡಿನ ಜನ ಇದನ್ನು ವ್ಯಾಪಕವಾಗಿ ವಿರೋಧಿಸಿದ್ದರು. ಜನರ ಆಕ್ರೋಶದ ಬೆನ್ನಲ್ಲೇ ನಟ ವಿಜಯ್ ಸೇತುಪತಿ ಚಿತ್ರದಿಂದ ಹೊರಬಂದಿದ್ದರು.