ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ ಕನ್ನಡ ನಟಿ, ಅಂದು ಮಂಚಕ್ಕೆ ಕರೆದಾಗ ಹೋಗಿದ್ದರೆ ಇಂದು ಖ್ಯಾತ ನಟಿ ಆಗಿರುತ್ತಿದೆ!!

ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ ಕನ್ನಡ  ನಟಿ, ಅಂದು ಮಂಚಕ್ಕೆ ಕರೆದಾಗ ಹೋಗಿದ್ದರೆ ಇಂದು ಖ್ಯಾತ ನಟಿ ಆಗಿರುತ್ತಿದೆ!!

ನಟಿ ಆಶಿತಾ ಕನ್ನಡ ಚಿತ್ರರಂಗದ ಕರಾಳ ಮುಖವನ್ನು ಬಹಿರಂಗಪಡಿಸಿರುವುದು ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಹಿಂದೆಯೂ ಹಲವಾರು ನಟಿಯರು ತಮ್ಮ ಅನುಭವಗಳನ್ನು ಬಹಿರಂಗಪಡಿಸಿದ್ದರೂ, ಆಶಿತಾ ನೀಡಿದ ಹೇಳಿಕೆಗಳು ಚಿತ್ರರಂಗದ ಅಂಧಕಾರದ ಮತ್ತೊಂದು ಮುಖವನ್ನು ತೋರಿಸುತ್ತವೆ.

ಅವಕಾಶಗಳಿಗಾಗಿ ಮಂಚಕ್ಕೆ ಹೋಗಬೇಕಿತ್ತು, ಇಲ್ಲವಾದರೆ ಶೂಟಿಂಗ್ ವೇಳೆ ಹಿಂಸೆ ಅನುಭವಿಸಬೇಕಾಗುತ್ತಿತ್ತು ಎಂಬ ಆಶಿತಾ ಅವರ ಹೇಳಿಕೆ ಚಿತ್ರರಂಗದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿದೆ. ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡುತ್ತ, ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ಎಲ್ಲವೂ ಸರಿಯಾಗಿತ್ತು, ಆದರೆ ಖ್ಯಾತಿ ದೊರೆಯುತ್ತಿದ್ದಂತೆ ಅಸಭ್ಯ ಆಫರ್‌ಗಳು ಬರಲಾರಂಭಿಸಿದವು ಎಂದು ಹೇಳಿದ್ದಾರೆ.

ರಾಜಕಾರಣಿಗಳು, ನಿರ್ಮಾಪಕರು ಹಾಗೂ ಉದ್ಯಮಿಗಳು ಚಿತ್ರರಂಗವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ಆಶಿತಾ ಬಹಿರಂಗಪಡಿಸಿದ್ದಾರೆ. ನಟಿಯರ ವೈಯಕ್ತಿಕ ಆಸೆಗಳನ್ನು ಈಡೇರಿಸಿದರೆ ಮಾತ್ರ ಅವಕಾಶ ನೀಡಲಾಗುತ್ತಿತ್ತು, ಇಲ್ಲವಾದರೆ ಶೂಟಿಂಗ್ ಸೆಟ್‌ನಲ್ಲೇ ಹಿಂಸೆ ಅನುಭವಿಸಬೇಕಾಗುತ್ತಿತ್ತು ಎಂಬುದು ಅವರ ಹೇಳಿಕೆಯ ಪ್ರಮುಖ ಅಂಶವಾಗಿದೆ.

ಇನ್ನು ಆ ಸಮಯದಲ್ಲಿ ನಟಿ ಆಶಿತಾ ಸಂದರ್ಶನದಲ್ಲಿ ನೀಡಿದ ಈ ಹೇಳಿಕೆಯಿಂದ ಸಿನಿರಂಗದಲ್ಲಿ ಸಂಚಲನ ಸೃಷ್ಟಿಯಾಗಿತ್ತು.. ಆದರೆ ಈ ವಿಚಾರದಲ್ಲಿ ನಟಿಯ ಧೈರ್ಯವನ್ನು ಮೆಚ್ಚಲೇಬೇಕು.. ಅವಕಾಶ ನೀಡುವುದಾಗಿ ಹೇಳಿ ಹೆಣ್ಣನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.  ಆಶಿತಾ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ, ನಾನು ಅವರ ಆಫರ್‌ಗಳಿಗೆ ಒಪ್ಪಿಗೆ ನೀಡಿದ್ದರೆ ಇಂದು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿರುತ್ತಿದ್ದೆ, ಆದರೆ ನಾನು ಆ ದಾರಿಯನ್ನು ಆಯ್ಕೆ ಮಾಡಲಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಚಿತ್ರರಂಗದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇಂತಹ ಅಸಭ್ಯ ಆಲೋಚನೆಗಳು ನಿಲ್ಲಬೇಕು, ಕಲಾವಿದರಿಗೆ ಗೌರವ ಸಿಗಬೇಕು, ಮತ್ತು ಹೆಣ್ಣುಮಕ್ಕಳಿಗೆ ಭದ್ರತೆ ಒದಗಬೇಕು ಎಂಬ ಆಶಿತಾ ಅವರ ಅಭಿಪ್ರಾಯವು ಚಿತ್ರರಂಗದಲ್ಲಿ ಬದಲಾವಣೆಗೆ ಪ್ರೇರಣೆ ನೀಡುವಂತಿದೆ. ಅವರ ಧೈರ್ಯವನ್ನು ಮೆಚ್ಚಲೇಬೇಕು, ಏಕೆಂದರೆ ಅವರು ತಮ್ಮ ಅನುಭವವನ್ನು ಬಹಿರಂಗಪಡಿಸುವ ಮೂಲಕ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶಿಸುವವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.