ವರ್ತೂರ್ ಸಂತೋಷ್ ಗೆ ಕಾಲ್ ಮಾಡಿ ಐ ಲವ್ ಯೂ ಎಂದ ತನಿಷಾ ಕುಪ್ಪಂಡ : ರಿಪ್ಲೈ ಕೇಳಿ ಶಾಕ್

ಇತ್ತೀಚಿಗಷ್ಟೇ ತಮ್ಮ ಹೊಸ ಗೋಲ್ಡ್ ಆಭರಣದ ಶಾಪ್ ಅನ್ನು ತೆರೆದಿದ್ದರು . ಅದಕ್ಕೆ ವಿಶೇಶ ಅಥಿತಿಯಾಗಿ ವರ್ತೂರ್ ಸಂತೋಷ್ ಅವರನ್ನು ಆಮಂತ್ರಣ ಕೊಟ್ಟು ಕರೆದಿದ್ದರು
ಬಹಳ ದಿನದಿಂದ ವರ್ತೂರ್ ಸಂತೋಷ್ ಹಾಗೂ ತನಿಷಾ ಕುಪ್ಪಂಡ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ. ಅದ್ರಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು . ಈ ಪ್ರಶ್ನೆಗೆ ತನಿಷಾ ಕುಪ್ಪಂಡ ಸಂದರ್ಶನವೊಂದರಲ್ಲಿ ನೇರವಾಗಿ ಉತ್ತರಿಸಿರುವುದಲ್ಲದೇ, ವರ್ತೂರು ಸಂತೋಷ್‌ಗೆ ಐ ಲವ್ ಯೂ ಎಂದಿದ್ದಾರೆ.
ಯೂಟ್ಯೂಬ್ ಚಾನೆಲ್‌ನ ಸಂದರ್ಶನದ ಮಧ್ಯದಲ್ಲಿ ತನಿಷಾ, ವರ್ತೂರು ಸಂತೋಷ್‌ಗೆ ಕರೆ ಮಾಡಿದ್ದಾರೆ. ಮೊದಲು ಉಭಯ ಕುಶಲೋಪರಿ ವಿಚಾರಿಸಿದ ಬಳಿಕ.. ವರ್ತೂ, ನಾನೇದಾರೂ ನಿನಗೆ ಅಲ್ಲಿ ಮನೆ ಹತ್ತಿರ ಬಂದು ಐ ಲವ್ ಯೂ ಅಂತಾ ಹೇಳಿದರೆ ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಾರೆ.
ತನಿಷಾ ಪ್ರಶ್ನೆಗೆ ಉತ್ತರಿಸಿದ ವರ್ತೂರು ಸಂತೋಷ್, ಅದರಲ್ಲೇನಿದೆ ಫ್ರೆಂಡ್ಸ್ ಐ ಲವ್ ಯೂ ಹೇಳುತ್ತಿದ್ದಾರೆ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ವರ್ತೂರು ಸಂತೋಷ್ ಉತ್ತರಕ್ಕೆ ಜೋರಾಗಿ ನಕ್ಕ ತನಿಷಾ ಥ್ಯಾಂಕ್ಯೂ ಫ್ರೆಂಡ್ಸ್ ಇಲ್ಲೋಬ್ಬರು ನಮ್ಮಿಬ್ಬರ ಬಗ್ಗೆ ಡೌಟ್ ಎನ್ನುತ್ತಿದ್ದರು. ಅದಕ್ಕೆ ಕಾಲ್ ಮಾಡಿದೆ ಅವರ ಅನುಮಾನಕ್ಕೆ ನೀನೇ ಉತ್ತರ ಕೊಡು ಎಂದಿದ್ದಾರೆ. ವರ್ತೂರು ಸಂತೋಷ್ ತಾವಿಬ್ಬರು ಸ್ನೇಹಿತರು ಎನ್ನುವುದನ್ನು ಸಂದರ್ಶಕರಿಗೆ ತಿಳಿಸಿದ್ದಾರೆ.
ಈ ಹಿಂದೆ ಕೂಡ ತಮ್ಮ ಪ್ರೀತಿ ಹಾಗೂ ಮದುವೆ ಗಾಸಿಪ್‌ಗೆ ಉತ್ತರ ಕೊಟ್ಟಿದ್ದ ವರ್ತೂರು ಸಂತೋಷ್, ನಮ್ಮ ನಡುವೆ ಒಳ್ಳೆ ಗೆಳೆತನ ಇದೆ. ನನಗೆ ಬೆಂಕಿ ಒಳ್ಳೆ ಫ್ರೆಂಡ್. ಹೇಗೆ ಅಂದರೆ ಅವರ ಶೋ ಮುಗಿದಿದ್ದರೂ ನಾನು ಬರುವವರೆಗೂ ಕಾದಿದ್ದರು. ಅದರಲ್ಲೇ ಗೊತ್ತಾಗುತ್ತದೆ ಅವರು ನನಗೆ ಕೊಡುವ ಗೌರವ. ಹಾಗೂ ನಾನು ಅವರಿಗೆ ಕೊಡುವ ಗೌರವ ಗೊತ್ತಾಗುತ್ತದೆ ಎಂದಿದ್ದರು. ( video credit : Art Of Media Kannada )