ಮಾನಸ ಮೇಲೆ ಕೈ ಮಾಡಿದ ಉಗ್ರಂ ಮಂಜು ಬಿಗ್ ಬಾಸ್ ಮನೆಯಿಂದ ಔಟ್ ?

ಮಾನಸ ಮೇಲೆ ಕೈ ಮಾಡಿದ ಉಗ್ರಂ ಮಂಜು ಬಿಗ್ ಬಾಸ್ ಮನೆಯಿಂದ ಔಟ್ ?

ಮನೆಯಲ್ಲಿ ರಾಜಕೀಯದ ಟಾಸ್ಕ್ ನಡೆಯುತ್ತಿದ್ದು, ಮನೆಯ ರಾಜಕೀಯ ಪಕ್ಷಗಳನ್ನು, ರಾಜಕಾರಣಿಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ.ಬಿಗ್​ಬಾಸ್ ಮನೆಯಲ್ಲೀಗ ರಾಜಕೀಯ ಹವಾ ಎದ್ದಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ ಬಿಗ್​ಬಾಸ್

ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ರಾಜಕೀಯ ಸಾಮಾನ್ಯ. ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಪಕ್ಷ ರಾಜಕೀಯ ಪ್ರಾರಂಭ ಆಗಿದೆ. ಬಿಗ್​ಬಾಸ್ ಮನೆಯ ಸ್ಪರ್ಧಿಗಳನ್ನು ಎರಡು ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯ ಮಾಡುವ ಟಾಸ್ಕ್ ನೀಡಲಾಗಿದೆ. ಎರಡೂ ಪಕ್ಷಗಳವರು ಥೇಟ್ ರಾಜಕಾರಣಿಗಳಂತೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಹಜವಾಗಿಯೇ ಎರಡೂ ಪಕ್ಷಗಳ ನಡುವೆ ಮನೆಯಲ್ಲಿ ಗಲಾಟೆ ಶುರುವಾಗಿದೆ. ಪಕ್ಷದ ಪೋಸ್ಟರ್ ಅನ್ನು ನಮ್ಮ ಮನೆಯ ಬಳಿ ಅಂಟಿಸಿದ್ದೀರಿ ಎಂದು ಇನ್ನೊಂದು ಪಕ್ಷದವರು ಗಲಾಟೆ ಮಾಡಿದ್ದಾರೆ. ಪಕ್ಷದ ಪೋಸ್ಟರ್​ಗಳನ್ನು ಹರಿದು ಹಾಕಿ ಥೇಟ್ ‘ರಾಜಕೀಯ ರೌಡಿ’ಗಳಂತೆ ವರ್ತನೆ ಮಾಡಿದ್ದಾರೆ.

ಮಾನಸ ಉಗ್ರಂ ಮಂಜು ಅಂಟಿಸಿದ್ದ ಪೋಸ್ಟರ್ ಅನ್ನು ತೆಗೆದು ಹಾಕಲು ಹೋದಾಗ ಉಗ್ರಂ ಮಂಜು ಅವರು ಮಾನಸ ಳನ್ನು ಜೋರಾಗಿ ಕೈ ಇಂದ ತಳ್ಳಿದ್ದಾರೆ . ಇದು ಬಿಗ್ ಬಾಸ್ ನಿಯಮಕ್ಕೆ ವಿರುದ್ಧವಾಗಿದೆ . ಇದೆ ರೀತಿ ರಂಜಿತ್ ಅವರು ಜಗದೀಶ್ ಅನ್ನು ತಳ್ಳಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ . ಈಗ ಉಗ್ರಂ ಮಂಜು ಅವರು ಸಹ ಮನೆಯಿಂದ ಆಚೆ ಕಡೆ ಬರುತ್ತಾರಾ ಎಂದು ಕಾದು ನೋಡ ಬೇಕಾಗಿದೆ 

( video credit : Kannada Suddi Samachara )