ವಿವಾದಾತ್ಮಕ ವಿಡಿಯೋ ಪ್ರಚಾರ ಮಾಡಿದ ನಟಿ ವೈಷ್ಣವಿ ಗೌಡ! ಕಾಮೆಂಟ್ ಬಾಕ್ಸ್ ಆಫ್ ಏನ್ ಅದು ನೋಡಿ ?

ಅಗ್ನಿಸಾಕ್ಷಿʼ ‘ಸೀತಾರಾಮ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ವೈಷ್ಣವಿ ಗೌಡಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ.ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ವಿಚಾರವೊಂದನ್ನು ಹಂಚಿಕೊಂಡಿದ್ದಲ್ಲದೆ ಉದ್ದೇಶಪೂರ್ವಕವಾಗಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಹೌದು, ಜಂ *ಗ್ಲಿ ರ *ಮ್ಮಿ ಗೇಮ್ ಆಡುವ ವಿಚಾರದ ಬಗ್ಗೆ ವೈಷ್ಣವಿ ಗೌಡ ಅವರು ವಿಡಿಯೋ ಶೇರ್ ಮಾಡಿದ್ದಾರೆ. ಜಂ *ಗ್ಲಿ ರ *ಮ್ಮಿ ಪ್ರಚಾರ ಮಾಡುವ ವಿಡಿಯೋ ಇದಾಗಿದೆ. ಇನ್ನು ಈ ವಿಡಿಯೋಕ್ಕೆ ಮಾತ್ರ ವೈಷ್ಣವಿ ಗೌಡ ಅವರು ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ನೆಗೆಟಿವ್ ಪ್ರತಿಕ್ರಿಯೆ ಬರುತ್ತದೆ ಎಂದು ಗೊತ್ತಿದ್ದಕ್ಕೆ ವೈಷ್ಣವಿ ಗೌಡ ಅವರು ಕಾಮೆಂಟ್ ಸೆಕ್ಷನ್ ಆಪ್ ಮಾಡಿದ್ದಾರೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸ್ಟಾರ್ ನಟರು ಕೂಡ ರಮ್ಮಿ ಆಪ್‌ಗಳನ್ನು ಪ್ರಚಾರ ಮಾಡಿ, ಜನರಿಂದ ನಿಂದನೆಗೊಳಗಾದ ಮೇಲೆ ಅದರಿಂದ ದೂರ ಆಗಿದ್ದುಂಟು, ಕ್ಷಮೆ ಕೇಳಿದ್ದೂ ಇದೆ.
ರಮ್ಮಿ ಆಪ್‌ಗಳಿಂದ ಹಣ ಕಳೆದುಕೊಂಡವರು ತುಂಬ ಜನರಿದ್ದಾರೆ. ಇನ್ನು ಈ ರೀತಿ ಆಟಗಳಿಂದ ಆರ್ಥಿಕ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಕಳೆದ ಎರಡು ವಾರಗಳ ಹಿಂದೆ ಮಹಾರಾಷ್ಟ್ರದಲ್ಲಿ ಜಂಗ್ಲಿ ರಮ್ಮಿ ವ್ಯಸನಕ್ಕೆ ಒಳಗಾಗಿ ಓರ್ವ ವ್ಯಕ್ತಿ ಕಳ್ಳನಾಗಿ ಬದಲಾಗಿದ್ದಾನೆ. ಅಷ್ಟೇ ಅಲ್ಲದೆ ಏಳು ಲಕ್ಷ ರೂಪಾಯಿ ಮೌಲ್ಯದ ವಸ್ತು ಕಳವು ಮಾಡಿ ಪೊಲೀಸರ ಅತಿಥಿಯಾಗಿರೋದು ವರದಿಯಾಗಿದೆ. ಯುವಜನತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ರಮ್ಮಿ ಆಪ್‌ಗಳ ಬ್ಯಾನ್ ಮಾಡಬೇಕು ಎಂದು ಗಣೇಶ್ ರಾನು ನಾನಾವರೆ ಅವರು ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವೈಷ್ಣವಿ ಗೌಡ ಅವರು ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀತಾ ಪಾತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಯುಟ್ಯೂಬ್ ಚಾನೆಲ್‌ನಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿರುವ ಇವರು ಅನೇಕ ಬ್ರ್ಯಾಂಡ್‌ಗಳ ಪ್ರಚಾರ ಕೂಡ ಮಾಡೋದುಂಟು.
ಆದರೆ ಮನೆ ಹಾಳು ಮಾಡುವ ಎಷ್ಟೋ ಸಂಸಾರಗಳನ್ನು ಬೀದಿಗೆ ತಂದು ನಿಲ್ಲಿಸಿರುವ ಆನ್ಲೈನ್ ಗೇಮ್ ಜಂಗಲ್ ರಮ್ಮಿ ಪ್ರಮೋಟ್ ಮಾಡಿರುವುದಕ್ಕೆ ವೈಷ್ಣವಿ ಗೌಡ ಗೆ ತರಾಟೆಗೆ ತೆಗೆದು ಕೊಂಡಿದ್ದಾರೆ . ಅದು ಅಲ್ಲದೆ ಅದ್ ಪ್ರಮೋಟ್ ಮಾಡುವ ವೇಳೆ ಅದರ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದಾರೆ . ನೀವೇನಂತೀರಾ ನಿಮ್ಮ ಅಭಿಪ್ರಾಯ ತಿಳಿಸಿ