ಮದುವೆಯಾದ ಕೆಲವೇ ದಿನಕ್ಕೆ ಹೊಸ ಸತ್ಯ ಹೊರಹಾಕಿದ ಅನುಶ್ರೀ !!

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ. ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಅವರೊಂದಿಗೆ ಸಪ್ತಪದಿ ತುಳಿದಿರುವ ಅನುಶ್ರೀ ಅವರು ಮದುವೆಯಾದ ಕೆಲವೇ ದಿನಗಳಲ್ಲಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ಅಭಿಮಾನಿಗಳ ಗಮನ ಸೆಳೆದಿದೆ.
ಅನುಶ್ರೀ ಅವರು ವೇದಿಕೆಯಲ್ಲಿ ಮಾತನಾಡುವಾಗ ತಮ್ಮ ಮದುವೆಯ ಕುರಿತು ಕೆಲವು ಸತ್ಯಗಳನ್ನು ಬಹಿರಂಗಪಡಿಸಿದರು. “ನನಗೆ ಬಹಳ ಸರಳವಾಗಿ ಮದುವೆಯಾಗುವ ಆಸೆ ಇತ್ತು. ನನ್ನ ಮದುವೆಗೆ ಬಂದವರು ಸೆಲೆಬ್ರಿಟಿಗಳು ಅಲ್ಲ, ನನ್ನ ಆತ್ಮೀಯರು,” ಎಂದು ಅವರು ಹೇಳಿದರು. ಎಲ್ಲರನ್ನ ಮದುವೆಗೆ ಕರೆಯಲು ಸಾಧ್ಯವಾಗದಿದ್ದರೂ, ತಮ್ಮ ಮನೆಯವರಿಗಿಂತ ಹೆಚ್ಚು ಓಡಾಡಿ ಮದುವೆಯ ವ್ಯವಸ್ಥೆ ಮಾಡಿದ್ದು ರಾಜ್ ಬಿ ಶೆಟ್ಟಿ ಎಂದು ಅವರು ಕೃತಜ್ಞತೆಯಿಂದ ಹೇಳಿದರು.
ಅವರು ತಮ್ಮ ಜೀವನದ ಅತ್ಯಂತ ಸುಂದರ ಕ್ಷಣವನ್ನ ಹುಡುಗೊರೆಯಾಗಿ ಕೊಟ್ಟವರು ತಮ್ಮ ಅಣ್ಣ ವರುಣ್ ಗೌಡ ಎಂದು ಭಾವುಕರಾಗಿ ಹೇಳಿದರು. “ಅವನಿಗೆ ನನ್ನ ಮದುವೆ ದೊಡ್ಡ ಕನಸಾಗಿತ್ತು. ಆ ಕನಸು ಈಡೇರಿದಾಗ ನಾನು ತುಂಬಾ ಸಂತೋಷಪಟ್ಟೆ,” ಎಂದು ಅನುಶ್ರೀ ಹೇಳಿದರು. ಈ ಮಾತುಗಳನ್ನು ಹೇಳುವಾಗ ಅವರು ಕಣ್ಣೀರು ಹಾಕಿದರು.
ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ್ಟ ಅಭಿಮಾನಿ ವರುಣ್ ಗೌಡ ಅವರ ಬಗ್ಗೆ ಮಾತನಾಡುತ್ತಾ, “ಅಪ್ಪು ಸಾರ್ ಅವರೇ ಅವನನ್ನು ಕಳುವಿಸಿ ನನ್ನ ಮದುವೆ ಮಾಡಿಸಿದ್ದಾರೆ ಅಂತ ನಾನು ನಂಬುತ್ತೇನೆ,” ಎಂದು ಹೇಳಿದರು. ಅವರು ತಮ್ಮ ಮದುವೆಯಲ್ಲಿ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಅವರನ್ನು ನೋಡಿ ಅಪ್ಪು ಸಾರ್ ಅವರ ಸ್ಮರಣೆ ಮಾಡಿಕೊಂಡರು.
ಈ ರೀತಿಯಾಗಿ ತಮ್ಮ ಮದುವೆಯ ಅನುಭವವನ್ನು ಹಂಚಿಕೊಂಡು, ವೇದಿಕೆಯಲ್ಲಿ ಭಾವುಕರಾಗಿ ಮಾತನಾಡಿದ ಅನುಶ್ರೀ ಅವರ ಮಾತುಗಳು ಎಲ್ಲರ ಮನಸ್ಸನ್ನು ತಟ್ಟಿದವು. ಅವರ ನಿರೂಪಣಾ ಶೈಲಿ ಮತ್ತು ರೋಷನ್ ಅವರೊಂದಿಗೆ ಅವರ ಜೋಡಿ ಹೇಗಿದೆ ಎಂಬುದರ ಬಗ್ಗೆ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.