ನಿವೇದಿತಾ ಗೌಡ ಅವರಲ್ಲಿ ಇರುವ ಈ ಗುಣದಿಂದ ಡೈವರ್ಸ್ ಎಂದ ಚಂದನ್ ಶೆಟ್ಟಿ! ಅದೇನು ಗೊತ್ತಾ?

ನಿವೇದಿತಾ ಗೌಡ ಅವರಲ್ಲಿ ಇರುವ ಈ ಗುಣದಿಂದ ಡೈವರ್ಸ್ ಎಂದ   ಚಂದನ್ ಶೆಟ್ಟಿ! ಅದೇನು ಗೊತ್ತಾ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡೈವರ್ಸ್ ಎಂದೇ ಹೇಳಬಹುದು. ಈಗ ಅವರೇ ತನ್ನ ವಿಚ್ಛೇದನದ ವಿಚಾರ ಹೇಳ್ಕೊಂಡ ನಂತರವಂತೂ ಸಾಕಷ್ಟು ಪ್ರಶ್ನೆ ಹಾಗೂ ಗೊಂದಲ ಸೃಷ್ಟಿ ಆಗಿದೆ ಎಂದೇ ಹೇಳಬಹುದು. ಇನ್ನೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿವಾಹವು ಫೆಬ್ರವರಿ 26, 2020 ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿ ಸಾಂಪ್ರದಾಯಿಕ ಸಮಾರಂಭದಲ್ಲಿ ನಡೆಯಿತು.  "ಬಿಗ್ ಬಾಸ್ ಕನ್ನಡ 5" ಸೆಟ್‌ನಲ್ಲಿ ಭೇಟಿಯಾದ ದಂಪತಿಗಳು ಅಕ್ಟೋಬರ್ 2019 ರಲ್ಲಿ ಮೈಸೂರು ಯುವ ದಸರಾ ಕಾರ್ಯಕ್ರಮದ ಸಂದರ್ಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. 


ಯುವ ದಸರಾ ಸಮಯದಲ್ಲಿ  ಚಂದನ್ ವೇದಿಕೆಯಲ್ಲಿ ನಿವೇದಿತಾಗೆ ಪ್ರಸ್ತಾಪಿಸಿದರು, ಇದು ಗಮನಾರ್ಹ ಸಾರ್ವಜನಿಕ ಗಮನ ಮತ್ತು ವಿವಾದವನ್ನು ಸೆಳೆಯಿತು. ಅವರ ಮದುವೆಯಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.  ನಿವೇದಿತಾ ಸಾಂಪ್ರದಾಯಿಕ ಹಳದಿ, ಗೋಲ್ಡನ್ ಮತ್ತು ಹಸಿರು ಸೀರೆಯನ್ನು ಧರಿಸಿದ್ದರೆ, ಚಂದನ್ ಪ್ರಕಾಶಮಾನವಾದ ಬಾರ್ಡರ್ ಮತ್ತು ಪೇಟವನ್ನು ಹೊಂದಿರುವ ರೇಷ್ಮೆ ವೇಷಿಯನ್ನು ಧರಿಸಿದ್ದರು.  ಸಮಾರಂಭದ ನಂತರ ಅದ್ದೂರಿ ಸ್ವಾಗತದಲ್ಲಿ ನಿವೇದಿತಾ ಮೆರೂನ್ ಗೌನ್ ಧರಿಸಿದ್ದರು, ಮತ್ತು ಚಂದನ್ ಮೆರೂನ್ ಟುಕ್ಸೆಡೊ.

 ಈಗ ಅವ್ರು ಈ ಹಿಂದೆ ಕೊಟ್ಟ ಇಂಟರ್ವ್ಯೂ ಸಾಕಷ್ಟು ವೈರಲ್ ಆಗಿದೆ ಎಂದೇ ಹೇಳಬಹುದು. ಹೀಗೆ ಒಂದು ಇಂಟರ್ವ್ಯೂ ನಲ್ಲಿ ತಮ್ಮ ವರ್ತನೆಯ ಹಾಗೂ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದ ಈ ಜೋಡಿ ತಾವು ಸಿಹಿ ಹಾಗೂ ಕಹಿ ಸಮಯದಲ್ಲಿ ಹೇಗೆ ನಡೆದುಕೊಳ್ಳುತ್ತೇವೆ ಎಂದು ಕೊಡ ಪ್ರಸ್ತಾಪ ಮಾಡಿದರು. ಇನ್ನೂ ಶೆಟ್ಟಿ ಅವರು ತಿಳಿಸಿರುವ ಹಾಗೆ ನಿವೇದಿತಾ ಅವ್ರು ಯಾವ ಸಮಯದಲ್ಲಿ ಕೊಡ ಸಾರಿ ಎಂಬ ಪದವನ್ನು ಉಪಯೋಗಿಸುವುದಿಲ್ಲ. ಯಾರದ್ದೇ ತಪ್ಪು ಆಗಿದ್ದರು ಕೊಡ ತನ್ನದೇ ತಪ್ಪು ಮಾಡಿದರೂ ಕೊಡ ಕೆಲವೊಮ್ಮೆ ಕ್ಷಮೆ ಕೇಳಲು ಹಿಂಜರಿಯುತ್ತಾರೆ ಎಂದು ಹೇಳಿದರು. ಅದಕ್ಕೆ ನಿವೇದಿತಾ ಗೌಡ ನಾವು ತಪ್ಪು ಮಾಡುವುದು ಬಹಳ ಕಡಿಮೆ ಎಂದು ಪ್ರತ್ಯತ್ತರ ನೀಡಿದರು. ಇನ್ನೂ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎಂದೇ ಹೆಸರು ಪಡೆದ ಈ ಜೋಡಿ ದೂರಗಿರುವುದು ನಿಜಕ್ಕೂ ಬೇಸರವನ್ನು ತಂದಿದೆ.