ಲಿವಿಂಗ್ ರಿಲೇಶನ್ ನಲ್ಲಿ ಇರುವ ಬಗ್ಗೆ ಸದ್ದು ಮಾಡುತ್ತಿರುವ ಮೋಹಕ ತಾರೆ! ಆ ಬಹುಕಾಲದ ಸ್ನೇಹಿತ ಯಾರು ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯ ನಟಿಯರು ಇದ್ದಾರೆ. ಆದರೆ ಯಾರೊಬ್ಬರೂ ಕೊಡ ಮೋಹಕ ತಾರೆ ಎಂದೇ ಪ್ರಖ್ಯಾತಿ ಪಡೆದಿರುವ ರಮ್ಯಾ ಅವರಷ್ಟು ಬೇರೂರಲು ಸಾಧ್ಯವಾಗಿಲ್ಲ ಎಂದು ಹೇಳಬಹುದು. ಇನ್ನು ಮೂಲತ ದಿವ್ಯ ಸ್ಪಂದನ ಅವರು ಮೋಹಕ ತಾರೆ ರಮ್ಯಾ ಎಂದೇ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ದಿ ಪಡೆದಿದ್ದಾರೆ, ಕನ್ನಡ ಅಲ್ಲದೆ ತೆಲಗು, ತಮಿಳು ಚಿತ್ರದಲ್ಲಿ ಕೊಡ ಬಹಳ ಜನಪ್ರಿಯ ನಟಿ. ಸಿನಿಮಾ ರಂಗಕ್ಕೆ ಬರಬೇಕು ಎಂದಾಗ 2003ರಲ್ಲಿ ತೆರೆಕಂಡ ಅಭಿ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟ ಅವರು ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆಕಾಶ, ಜುಲೈ 4, ಅರ್ಜುನ್ ಮತ್ತು ಗೌರಿ ಸೇರಿದಂತೆ ಹಲವು ಪ್ರಖ್ಯಾತ ಚಿತ್ರಗಳಲ್ಲಿ ತಮ್ಮ ಪಾತ್ರ ಹಾಗೂ ಸೌಂದರ್ಯದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
ಇನ್ನು ತಮ್ಮ ಸಿನಿಮಾ ಕೆರಿಯರ್ ನಲ್ಲಿ ಬೇಡಿಕೆಯಲ್ಲಿ ಇದ್ದ ಸಮಯದಲ್ಲಿಯೇ ಅವರು ಸಿನಿಮಾ ರಂಗವನ್ನು ತೊರೆದು ರಾಜಕೀಯಕ್ಕೆ ಸೇರಬೇಕು ಎಂಬ ನಿರ್ಧಾರ ಕೊಡ ಮಾಡುತ್ತಾರೆ. ರಮ್ಯಾ ಅವರು ರಾಜಕೀಯದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡು ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿದ್ದರು. 2013ರಲ್ಲಿ ಮಂಡ್ಯದ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಆದರೆ ಕೆಲವು ಕಾರಣಗಳಿಂದ ಸಿನಿಮಾ ರಂಗ ಕೊಡ ತೋರೆದು ಅದಾದ ಬಳಿಕ ರಾಜಕೀಯವನ್ನು ತೆರೆಯುವ ನಿರ್ಧಾರ ಮಾಡಿ ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮೂವತ್ತು ದಾಟಿರುವ ರಮ್ಯಾ ಅವರ ಮದುವೆಯ ಬಗ್ಗೆ ಆಗಾಗ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಆದರೆ ತನಗೆ ಆಸಕ್ತಿ ಇಲ್ಲವೆಂದು ಹೇಳುತ್ತಿದ್ದರು. ರಮ್ಯಾ ಮದುವೆ ಕುರಿತಾಗಿ ಹಲವು ಬಾರಿ ಸುದ್ದಿಗಳಲ್ಲಿ ಹಲವಾರು ರೀತಿಯ ಗಾಸಿಪ್ ಕೊಡ ಹುಟ್ಟಿಕೊಂಡಿತ್ತು. 2023ರಲ್ಲಿ, ಅವರು ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸೂಚನೆ ನೀಡಿದ್ದರು, ಮತ್ತು ತಮ್ಮ ಪ್ರಿಯಕರನೊಂದಿಗೆ ವಿವಾಹವಾಗುವ ಯೋಜನೆಗಳನ್ನು ಹಂಚಿಕೊಂಡಿದ್ದರು. ಆದರೆ ಅದು ಸುಳ್ಳು ಎಂದು ಹೇಳಿದ್ದರು.ಆದ್ರೆ ಈಗ ರಮ್ಯಾ ಅವರ ಬಹುಕಾಲದ ಸ್ನೇಹಿತ ಕಾರ್ತಿಕ್ ಗೌಡ ಅವರ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಅವರು ಯಾವ ಪ್ರತಿಕ್ರಿಯೆ ನೀಡಿಲ್ಲ.