ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಪವಿತ್ರಾ ಸಂಜಯ್! ಪವಿತ್ರಾ ಗಂಡ ಹೇಳಿದ್ದೇನು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇತ್ತೀಚೆಗೆ ಮಹತ್ವದ ಬೆಳವಣಿಗೆಗಳನ್ನು ಕಂಡಿದೆ. ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಮೂವರನ್ನು ಜುಲೈ 4, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಯಿತು, ಅವರ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು. ದರ್ಶನ್ ಅವರ ಸಹನಟ ಹಾಗೂ ಸ್ನೇಹಿತೆ ಪವಿತ್ರಾ ಗೌಡ. ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ದರ್ಶನ್ ಅವರನ್ನು ಭೇಟಿ ಮಾಡುವ ನೆಪದಲ್ಲಿ ರೇಣುಕಾಸ್ವಾಮಿ ಅವರನ್ನು ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅವರನ್ನು ಬರ್ಬರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡುವ ಮೊದಲು ವಿದ್ಯುತ್ ಶಾಕ್ ನೀಡಲಾಗಿತ್ತು.
ಇನ್ನು ಶವಪರೀಕ್ಷೆಯ ವರದಿಯು ಅವರು ಬಹು ಮೊಂಡಾದ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ತೋರಿಸಿದೆ. ಮುಂದಿನ ವಿಚಾರಣೆಯವರೆಗೆ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲು ನ್ಯಾಯಾಲಯ ಆದೇಶಿಸಿದೆ. ಇದೀಗ ಪವಿತ್ರ ಗೌಡ ಅವರು ಈಗ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಅವನಿಗೆ ಬಯ್ಯಲ್ಲು ಮಾತ್ರ ಹೋಗಿದ್ದು ಅದಾದ ಮೇಲೆ ನಡೆದಿರುವ ಘಟನೆಗೂ ಯಾವ ಸಂಭಂದ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ವರೆಗೂ ಯಾವ ಮಾಹಿತಿ ಕೊಡ ಲಿಕ್ ಆಗಿಲ್ಲ. ಇನ್ನು ಇವರ ಕೇಸ್ ಅನ್ನು ಜೂಲೈ ಹದಿನೆಂಟರ ವರೆಗೂ ಮುಂದೂಡಿದೆ. ಈ ಪವಿತ್ರ ಗೌಡ ಅವ್ರ ಹಿನ್ನಲೆ ಸಾಕಷ್ಟು ಸುದ್ದಿ ಮಾಡುತ್ತಾ ಬಂದಿದೆ. ಆದರೆ ಇವರ ಹಿಂದಿನ ಡೈವರ್ಸ್ ಗೆ ಸೂಕ್ತ ಕಾರಣ ಏನು ಎಂದು ಎಲ್ಲಿಯೂ ಹೊರಬಿದ್ದಿಲ್ಲ.
ಇನ್ನು 2007ರಲ್ಲಿ ಪವಿತ್ರ ಗೌಡ ಅವರು ಉತ್ತರ ಪ್ರದೇಶದ ಸಂಜಯ್ ಸಿಂಗ್ ಎಂಬುವವರನ್ನು ಮದುವೆಯಾಗುತ್ತಾರೆ. ಹಾಗೆಯೇ ಒಂದು ವರ್ಷದಲ್ಲಿ ಹೆಣ್ಣು ಮಗು ಕೊಡ ಆಗುತ್ತೆ. ಆದರೆ ತನ್ನ ಸೌಂದರ್ಯದ ಮೇಲೆ ಹೆಚ್ಚು ಗಮನ ಇದ್ದ ಈಕೆ ಮಗುವಾದ ನಂತರ ಸಣ್ಣ ಆಗಲು ಜಿಮ್ ಸೇರುತ್ತಾರೆ. ಅಲ್ಲಿಗೆ ಬಂದ ಕೆಲವು ವ್ಯಕ್ತಿಗಳಿಂದ ಬಣ್ಣದ ರಂಗ ಕೊಡ ಪರಿಚಯ ಆಗುತ್ತೆ. ಹೀಗೆ ತಾನು ಕೊಡ ಹೆಸರು ಮಾಡಬೇಕು ಎಂಬ ಆಸೆ ಕೊಡ ಹೆಚ್ಚಾಗುತ್ತಾ ಹೋಗುತ್ತದೆ. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಪತಿಯನ್ನು ದೂರ ಮಾಡಲು ಮುಂದಾದರು. 2013ನಲ್ಲಿ ಕಾನೂನು ಬದ್ಧವಾಗಿ ಬೇರೆ ಬೇರೆ ಆದರೂ. 2013ರಿಂದ ಈ ವರೆಗೂ ನಾನು ನನ್ನ ಮಗಳನ್ನು 2-3 ಅಷ್ಟೇ ನೋಡಿರುವುದು. ನಾವು ಬೇರೆಯಾದ ಮೂರು ತಿಂಗಳಲ್ಲಿ ದರ್ಶನ್ ಹಾಗೂ ಪವಿತ್ರ ಗೆ ಸಂಭಂದ ಇದೆ ಎಂದು ತಿಳಿಯಿತು. ನಾನು ಅದಕ್ಕೂ ಕೊಡ ತಲೆ ಕೆಡಿಸಿಕೊಳ್ಳದೆ ಇವತ್ತಿಗೂ ಕೊಡ ನಾನು ಅವಳಿಗಾಗಿ ಕಾಯುತ್ತಾ ಇದ್ದೇನೆ ಎಂದು ಹೇಳಿದ್ದಾರೆ.