ವಿಷ್ಣುವನ್ನು ಬಹಳ ಕೀಳಾಗಿ ನಡೆಸಿಕೊಂಡಿದ್ದೆ ಎಂದು ಮಾದ್ಯಮಗಳಲ್ಲಿ ಹೇಳಿ ಕ್ಷಮೆ ಕೇಳಿದ್ದ ದ್ವಾರಕೀಶ್! ಇವರಿಬ್ಬರಲ್ಲಿ ಇದ್ದ ಮುನಿಸು ಏನು ಗೊತ್ತಾ?

ವಿಷ್ಣುವನ್ನು ಬಹಳ ಕೀಳಾಗಿ ನಡೆಸಿಕೊಂಡಿದ್ದೆ ಎಂದು ಮಾದ್ಯಮಗಳಲ್ಲಿ ಹೇಳಿ ಕ್ಷಮೆ ಕೇಳಿದ್ದ ದ್ವಾರಕೀಶ್! ಇವರಿಬ್ಬರಲ್ಲಿ ಇದ್ದ ಮುನಿಸು ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನ ಕಿಟ್ಟು ಪುಟ್ಟು ಎಂದು ಹೆಸರು ಪಡೆದಿರುವ ವಿಷ್ಣು ವರ್ಧನ್ ಹಾಗೂ ದ್ವಾರಕೀಶ್ ಅವ್ರ ಸ್ನೇಹದ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಇನ್ನೂ ಇವರಿಬ್ಬರೂ ಆಗಿನ ಕಾಲಕ್ಕೆ ಒಂದು ಅದ್ಬುತ ಸ್ನೇಹದ ಉದಾಹರಣೆಯಾಗಿ ಬೆಳೆದು ನಿಂತಿದ್ದರೂ ಎಂದ್ರೆ ತಪ್ಪಾಗಲಾರದು. ಇನ್ನೂ ವಿಷ್ಣು ದಾದ ಚಿತ್ರ ರಂಗದಲ್ಲಿ ತೊಡಗಿಸಿಕೊಳ್ಳುವ ಮುನ್ನವೇ ದ್ವಾರಕೀಶ್ ಚಿತ್ರ ರಂಗದಲ್ಲಿ ಹಾಸ್ಯ ಕಲಾವಿದನಾಗಿ , ನಟನಾಗಿ ಹಾಗೂ ನಿರ್ಮಾಪಕನಾಗಿ ಕೊಡ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡು ಒಳ್ಳೆಯ ಹೆಸರು ಮಾಡಿದ್ದರು ಎಂದು ಹೇಳಬಹುದು. ಆಗಿನ ಕಾಲಕ್ಕೆ ಸ್ಯಾಂಡಲ್ ವುಡ್ ನ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಇವರಗೆ ಇತ್ತು ಎಂದು ಹೇಳಬಹುದು. 

ಇನ್ನೂ ಕಿಟ್ಟು ಪುಟ್ಟು ಚಿತ್ರದ ಮೂಲಕ ಒಂದಾದ ಈ ಜೋಡಿ ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತ ಬಂದರು. ಆಗ ಇವರಿಬ್ಬರ ನಡುವೆ ಸ್ನೇಹ ಕೊಡ ಹೆಚ್ಚಾಗಿತ್ತು ಹಾಗೆಯೇ ಸಿನಿಮಾಗಳಲ್ಲಿ ಇವರಿಬ್ಬರ ಕಾಂಬಿನೇಷನ್ ಹಿಟ್ ಸಿಲ್ ಪಡೆದಿತ್ತು. ಹೀಗೆ ಪ್ರಾಣ ಸ್ನೇಹಿತರಾದ ಇವರು ದಿನ ಕಳೆಯುತ್ತಿದ್ದಂತೆ ಮನಸ್ತಾಪ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಕಾರಣ ದ್ವಾರಕೀಶ್ ಗೆ ಇದ್ದ ಅಹಂ ನಿಂದಾ ಇವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಸ್ವತಃ ದ್ವಾರಕೀಶ್ ಅವರು ಮಾದ್ಯಮಗಳ ಮುಂದೆ ತಿಳಿಸಿದ್ದಾರೆ. ಅದ್ರಲ್ಲೂ ವಿಷ್ಣು ನಮ್ಮನ್ನು ಬಿಟ್ಟು ಹೋದಾಗ ಮಾದ್ಯಮಗಳ ಮುಂದೆ ನಿಂತು ಬಹಿರಂಗವಾಗಿ ಕ್ಷಮೆ ಕೇಳಿದ್ದು ಉಂಟು. ಇದೀಗ ದ್ವಾರಕೀಶ್ ಅವರು ಕೊಡ ತಮ್ಮ ಸ್ನೇಹಿತನ ಬಳಿ ಹೋಗಿದ್ದಾರೆ.

ಇನ್ನೂ ದ್ವಾರಕೀಶ್ ಅವರು ತಮ್ಮ ಇಂಟರ್ವ್ಯೂ ನಲ್ಲಿ ನಾನು ಮತ್ತು ವಿಷ್ಣು ಬಹಳ ಒಳ್ಳೆಯ ಸ್ನೇಹಿತರು ಆಗಿದ್ದೆವು ಆದರೆ ನನಗೆ ಚಿಕ್ಕ ವಯಸ್ಸಿನಲ್ಲಿ ಬಯಸದ್ದಕ್ಕಿಂತ ಹೆಚ್ಚಾಗಿ ಯಶಸ್ಸು ಹಾಗೂ ಹಣ ಪಡೆದುಕೊಂಡಿದ್ದರಿಂದ ನಾನು ಎಂಬ ಅಹಂ ಕೊಡ ಹೆಚ್ಚಾಗಿತ್ತು. ಇನ್ನೂ ವಿಷ್ಣು ಕೊಡ ನನ್ನಿಂದಲೇ ಎಲ್ಲವನ್ನೂ ಪಡೆದುಕೊಂಡ ಎನ್ನುವ ಭ್ರಮೆ ನನ್ನಲ್ಲಿ ಹೆಚ್ಚಾಗಿ ತುಂಬಿತ್ತು ಆದರೆ ಅವನಿಂದ ನಾನು ಹೆಚ್ಚಾಗಿ ಯಶಸ್ಸು ಪಡೆದಿದ್ದು ಎಂಬ ವಿಷಯ ಅರ್ಥ ಆಗುವುದು ಬಹಳ ತಡವಾಗಿತ್ತು ಎಂದು ತಿಳಿಸಿದ್ದರು. ಇನ್ನೂ ಅವನೊಬ್ಬ ನಟ ಎಂಬ ಮರ್ಯಾದೆ ಕೊಡ ನೀಡದೆ ಅವನನ್ನು  ನಾನು ತುಂಬಾ ಕೀಳಾಗಿ ನಡೆಸಿಕೊಂಡೆ ಅವನಿಗೆ ಸೂಕ್ತವಾದ ಚಿತ್ರಗಳನ್ನು ಕೊಡ ಅವನಿಗೆ ನೀಡುತ್ತಾ ಬಂದೆ ಆದರೆ ಅವನು ತನ್ನ ಸ್ನೇಹಕ್ಕೆ ಬೆಲೆ ಕೊಟ್ಟು ಎಲ್ಲಾ ಚಿತ್ರವನ್ನು ಮಾಡಿದ ಎಂದು ತಿಳಿಸಿದರು.