ಸರಿಗಮಪ ಶೋನಿಂದ ಹಿಂದೆ ಸರಿದ್ರಾ ಆ್ಯಂಕರ್‌ ಅನುಶ್ರೀ? ಅಸಲಿ ಕಾರಣವೇನು?

ಸರಿಗಮಪ ಶೋನಿಂದ ಹಿಂದೆ ಸರಿದ್ರಾ ಆ್ಯಂಕರ್‌ ಅನುಶ್ರೀ? ಅಸಲಿ ಕಾರಣವೇನು?

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀಗೆ ದೊಡ್ಡ ಅಭಿಮಾನಿ ಬಳಗವಿದೆ. ಜೀ ಕನ್ನಡದಲ್ಲಿ ಕೆಲವು ಶೋಗಳನ್ನು ಅನುಶ್ರೀಯೇ ನಡೆಸಿಕೊಡ್ತಾ ಬಂದಿದ್ದಾರೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಆ್ಯಂಕರ್ ಅನುಶ್ರೀ 'ಸರಿಗಮಪ' ಶೋನಿಂದ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಶನಿವಾರ ನಡೆದ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಆ್ಯಂಕರ್ ಅನುಶ್ರೀ ಅವರು ನಿರೂಪಣೆಗೆ ಬಂದಿರಲಿಲ್ಲ. ಅನುಶ್ರೀ ಬದಲಾಗಿ ಮಾಸ್ಟರ್ ಆನಂದ್ ಅವರು ನಿರೂಪಣೆ ಮಾಡಿದ್ದಾರೆ. ಹೀಗಾಗಿ ಅನುಶ್ರೀ ಅವರು ನಿರೂಪಣೆಗೆ ನಿವೃತ್ತಿ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಅನುಶ್ರೀ ಅವರ ಬರ್ತ್‌ಡೇ ಆದ ಕಾರಣ ಅವರು ಗೈರಾಗಿದ್ದರು ಎಂದು ಕೆಲವರು ಹೇಳಿದ್ದಾರೆ. ಖುದ್ದು ಮಾಸ್ಟರ್ ಆನಂದ್ ಕೂಡ ಮುಂದಿನ ವಾರ ಆಂಕರ್ ಅನುಶ್ರೀ ಅವರೇ ವಾಪಸ್ ಬರ್ತಾರೆ ಅನ್ನೋ ಸ್ಪಷ್ಟನೆ ಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅನುಶ್ರೀ ಅವರು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.  ( video credit : sandalwood kannada )