ಈ ಬಾರಿಯ ಬಿಗ್ ಬಾಸ್ ವಿಜೇತ ಪ್ರತಾಪ್ ಅಂತೆ..! ಹೊರಬಿತ್ತು ದೊಡ್ಡ ಸುಳಿವು
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಅತಿಕ್ರಮಣ ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಅತ್ಯದ್ಭುತವಾಗಿ ಮೂಡಿ ಬಂದಿದೆ. ಹಾಗೆ ಮೂಡಿ ಬರುತ್ತಲಿದೆ. ಈಗಾಗಲೇ ನೂರು ದಿನಗಳನ್ನು ಮುಕ್ತಾಯಗೊಳಿಸಿರುವ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮನೆಯ ಈ ಬಾರಿಯ ವಿನ್ನರ್ ಯಾರೆಂದು ತುಂಬಾನೇ ತಮಕದಲ್ಲಿ ದಿನಗಳ ಎದುರು ನೋಡುತ್ತಿದ್ದಾರೆ.. ಇನ್ನೊಂದು ಕಡೆ ಹೇಳಬೇಕು ಅಂದ್ರೆ ಪ್ರೇಕ್ಷಕರಲ್ಲಿ ವೀಕ್ಷಕರಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ ತಮ್ಮ ಕಾರ್ಯಕ್ರಮವನ್ನು ಈ ಬಾರಿಯೂ ನಡೆಸಿಕೊಟ್ಟಿದ್ದು ಗೆಲುವು ಸಾಧಿಸಿದೆ ಎಂದು ಹೇಳಬಹುದು.
ಸಾಕಷ್ಟು ಹೊರಗಿನ ವೀಕ್ಷಕರಿಗೆ ಈ ಬಾರಿ ಬಿಗ್ ಬಾಸ್ ವಿಜೇತ ಯಾರು ಆಗಬೇಕು ಎನ್ನುವ ಚರ್ಚೆ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು, ಸಾಕಷ್ಟು ಜನರು ಪ್ರತಾಪ್ ಹೆಸರು ಹೇಳುತ್ತಿದ್ದರೆ, ಇನ್ನೂ ಕೆಲವು ಜನರು ಕಾರ್ತಿಕ್ ಹಾಗೂ ಅತ್ತ ವಿನಯ್ ಎನ್ನುತ್ತಿದ್ದಾರೆ. ಇನ್ನಷ್ಟು ಜನರು ಸಂಗೀತ ಎಂದು ಕೂಡ ಹೇಳುತ್ತಿದ್ದಾರೆ. ಆದರೆ ಇವರ ನಾಲ್ಕರಲ್ಲೇ ಒಬ್ಬರು ಗೆಲ್ಲುವುದು ಖಚಿತ ಆಗಿದೆ ಗೆಳೆಯರೇ. ಹೌದು ಹೆಚ್ಚಾಗಿ ಪ್ರತಾಪ್ ಹೆಸರು ಕೇಳಿ ಬರುತ್ತಿದ್ದು, ಈ ಹೆಸರು ಕೆಲವರಿಗೆ ಅಸಮಾಧಾನ ಸಹ ಮಾಡಿದೆ. ಪ್ರತಾಪ್ ಸಿಂಪತಿಗಾಗಿ ನೋಡಲು ಮುಗ್ಧನ ರೀತಿ ಕಾಣಿಸಿಕೊಂಡು, ಬಿಗ್ಬಾಸ್ ಮನೆಯಲ್ಲಿ ಹೇಗೆ ಇದ್ದರೂ ವಿನ್ನರ್ ಅವನು ಆಗುವುದಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ..
ಹೀಗಿರುವಾಗ ನಿನ್ನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ಉತ್ತರ ನೀಡಿ ಎಂದಿದ್ದರು. ಮನೆಯವರ ಆಯ್ಕೆಯಂತೆ ಕೇಳುವ ಪ್ರಶ್ನೆಗೆ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರ ಕೈಯಲ್ಲಿ ಆ ಚಟುವಟಿಕೆ ಮಾಡಿಸಿದರೆ ಈ ವಾರದ ದಿನಸಿ ವಸ್ತುಗಳನ್ನು ನೀಡುವುದಾಗಿ ಹೇಳಿದ್ದು ಅದರಂತೆ ಎಲ್ಲರ ಮನಸ್ಸಿನಲ್ಲಿ ಈ ಬಾರಿಯ ಬಿಗ್ ಬಾಸ್ ವಿಜೇತ ಯಾರು ಎನ್ನುವುದಾಗಿ ಪ್ರಶ್ನೆ ಕೇಳಿ ಬಂದಿದ್ದು ಎಲ್ಲರ ಮನಸಿನಲ್ಲಿ ಚರ್ಚೆ ಮೂಲದ ಪ್ರಕಾರ ಬಿಗ್ಬಾಸ್ ಮನೆ ಸ್ಪರ್ಧಿಗಳು ಹೆಚ್ಚಾಗಿ ಪ್ರತಾಪ್ ಹೆಸರನ್ನೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಗ್ ಬಾಸ್ ಮನೆಗೆ ಇದೀಗ ಮತ್ತೆ ಈ ಬಾರಿಯ ಕೆಲವು ಸ್ಪರ್ಧಿಗಳು ಆಗಮಿಸಿದ್ದು, ಕಿಚ್ಚ ಸುದೀಪ ಅವರು ಪ್ರತಾಪ್ ಅವರಿಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ..ಅದುವೇ ನೀತು ಅವರ ಕೈಯಲ್ಲಿ ಬಂದ ಫಿನಾಲೆ ಟಿಕೆಟ್. ಅದು ಎರಡನೇ ಸ್ಪರ್ಧಿ ಆಗಿ ಪ್ರತಾಪ್ ಅವರು ಟಿಕೆಟ್ ಟು ಫಿನಾಲೆ ಈ ಮೂಲಕ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪೂರಕವಾದ ವಿಡಿಯೋ ಇಲ್ಲಿದೆ ಒಮ್ಮೆ ನೋಡಿ. ಹಾಗೆ ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರು ಚೆನ್ನಾಗಿ ಆಟವಾಡಿದ್ದಾರೆ, ಜೊತೆಗೆ ಯಾರು ನಿಮ್ಮ ಪ್ರಕಾರ ಈ ಬಾರಿಯ ವಿಜೇತ ಆಗಬೇಕು ಎಂದು ಕಮೆಂಟ್ ಮೂಲಕ ತಿಳಿಸಿ, ಮತ್ತು ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂದು ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದ.