ನನ್ನ ಬಿಟ್ಟು ಬಿಡಿ' ಲೈವ್ ಬಂದು ಬಿಕ್ಕಿಬಿಕ್ಕಿ ಅತ್ತ ಕೊತ್ತಲವಾಡಿ ನಟಿ!! ಅಸಲಿಗೆ ಆಗಿದ್ದು ಏನು ?

ನನ್ನ ಬಿಟ್ಟು ಬಿಡಿ' ಲೈವ್ ಬಂದು ಬಿಕ್ಕಿಬಿಕ್ಕಿ ಅತ್ತ ಕೊತ್ತಲವಾಡಿ ನಟಿ!! ಅಸಲಿಗೆ ಆಗಿದ್ದು ಏನು ?

ಈ ವಿಡಿಯೋವನ್ನು ಮಾಡುತ್ತಿರುವ ಕಾರಣವೆಂದರೆ ಇತ್ತೀಚೆಗೆ "ಕೊತ್ತಲವಾಡಿ" ಸಿನಿಮಾದ ಪೇಮೆಂಟ್ ಇಶ್ಯೂ ಬಗ್ಗೆ ಎಲ್ಲೆಡೆ ವಿಡಿಯೋಗಳು ಹರಡಿವೆ. ನಾನು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಮಾಡುತ್ತಿದ್ದೇನೆ. ನಾನು ಯಾವುದೇ ಕಂಪ್ಲೇಂಟ್ ಕೊಟ್ಟಿಲ್ಲ, ಮತ್ತು ಆ ಸಮಯದಲ್ಲಿ ಅವರು ನನಗೆ ಉಳಿದ ಪೇಮೆಂಟ್ ಕೊಡೋದಿಲ್ಲ ಅಂತ ಗಲಾಟೆ ಮಾಡಿದ್ರು. ನಾನು ಅದನ್ನ ಅಲ್ಲೇ ಬಿಟ್ಟುಬಿಟ್ಟೆ, ಏಕೆಂದರೆ ನನಗೂ ಫ್ಯೂಚರ್ ಇದೆ, ಮುಂದಿನ ಪ್ರಾಜೆಕ್ಟ್‌ಗಳಿಗೆ ಸಮಸ್ಯೆ ಆಗಬಾರದು ಅಂತ ಯೋಚಿಸಿ, ನಾನು ಶಾಂತವಾಗಿದ್ದೆ.

ಆದರೆ ಈಗ ಇಷ್ಟು ದಿನಗಳ ನಂತರ ಯಾರೋ ವಾಯ್ಸ್ ರೆಕಾರ್ಡ್ ಹಾಕಿದ್ದಾರೆ, ಅದನ್ನ ಹಿಡ್ಕೊಂಡು ಇವರು ಕಂಪ್ಲೇಂಟ್ ಮಾಡಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಾರೆ, ನಮ್ಮ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರು ಈಗ ಪೇಮೆಂಟ್ ಕೊಟ್ಟಿದ್ದೇವೆ, ದುಡ್ಡಿಗೋಸ್ಕರ ಬಂದಿದ್ದಾರೆ ಅಂತ ಹೇಳುತ್ತಿದ್ದಾರೆ. ನಾನು ಅವರ ಸವಾಸ ಬೇಡ ಅಂತ ಹೇಳಿ ಮನೆಗೆ ಹಿಂತಿರುಗಿದ್ದೆ. ಆದರೆ ಇವರು ಮತ್ತೆ ಈ ವಿಷಯವನ್ನು ಎಳೆದು, ನ್ಯೂಸ್ ಚಾನೆಲ್‌ಗಳಿಗೆ ತಂದು, ಟಿಆರ್ಪಿ ಗಾಗಿ ಬಳಸುತ್ತಿದ್ದಾರೆ.

ನ್ಯೂಸ್ ಚಾನೆಲ್‌ಗಳು ಈ ವಿಷಯವನ್ನು ದಬಕ್ ಅಂತ ಎತ್ತಿಕೊಂಡು, ಬಾವಿಲ್ಲಿ ಬಿಸಾಕಿದಂತೆ ವರದಿ ಮಾಡುತ್ತಿದ್ದಾರೆ. ಅವತ್ತು ಪೇಮೆಂಟ್ ಕೊಡಲಿಲ್ಲ ಅಂತ ಹೇಳಿದವರು, ಈಗ ನಮ್ಮನ್ನು ಆಳ್ ಮಾಡಲಿಕ್ಕೂ ಇನ್ನೊಂದು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದು ನನ್ನ ವ್ಯಕ್ತಿತ್ವಕ್ಕೂ, ನನ್ನ ಕೆಲಸಕ್ಕೂ, ನನ್ನ ಭವಿಷ್ಯಕ್ಕೂ ದೊಡ್ಡ ಹೊಡೆತವಾಗಿದೆ. ನಾನು ಯಾರನ್ನೂ ದೋಷಾರೋಪಣೆ ಮಾಡುತ್ತಿಲ್ಲ, ಆದರೆ ಸತ್ಯವನ್ನು ಹೇಳುವುದು ನನ್ನ ಕರ್ತವ್ಯ.

 

ದಯವಿಟ್ಟು ಎಲ್ಲರೂ ಈ ವಿಷಯವನ್ನು ಸಮಜವಾಗಿ ನೋಡಿ. ನೀವು ಮಾಡೋ ಒಂದು ಕೆಲಸದಿಂದ ಯಾರೋ ಒಬ್ಬರ ಫ್ಯೂಚರ್‌ಗೆ ಹೊಡೆತ ಬೀಳಬಹುದು. ನಾನು ಈ ವಿಡಿಯೋದಲ್ಲಿ ನನ್ನ ಪಕ್ಕದ ಸತ್ಯವನ್ನು ಹೇಳುತ್ತಿದ್ದೇನೆ. ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ನಾನು ಈ ಬಗ್ಗೆ ಸಂಪೂರ್ಣ ಸ್ಪಷ್ಟನೆ ನೀಡಿದ್ದೇನೆ. "ಎಸ್ಎಸ್ ಟಿವಿ" ಸಿನಿಮಾ ಜಗತ್ತಿನ ಕ್ಷಣ ಕ್ಷಣದ ಸುದ್ದಿಯೊಂದಿಗೆ, ನಾನು ಈ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದೇನೆ.