ದರ್ಶನ್ ಕುದುರೆ ಮಾರಾಟ ಮಾಡುತ್ತಿರೋದು ಯಾಕೆ ? ಕೊನೆಗೂ ಅಸಲಿ ಸತ್ಯ ಬಯಲು

ದರ್ಶನ್ ಕುದುರೆ ಮಾರಾಟ ಮಾಡುತ್ತಿರೋದು ಯಾಕೆ ?  ಕೊನೆಗೂ ಅಸಲಿ ಸತ್ಯ ಬಯಲು

ಇತ್ತೀಚೆಗೆ ಕೆಲವು ಚಾನೆಲ್‌ಗಳಲ್ಲಿ ದರ್ಶನ್ ಸರ್ ಅವರ ತೋಟ ಮತ್ತು ಕುದುರೆ ಮಾರಾಟದ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಸ್ವಲ್ಪ ಸ್ಪಷ್ಟನೆ ನೀಡಲು ಬಯಸುತ್ತೇನೆ. ದರ್ಶನ್ ಸರ್ ಅವರು ತೊಂದರೆಗಳಲ್ಲಿ ಇದ್ದು ಕುದುರೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಆದರೆ ವಾಸ್ತವದಲ್ಲಿ, ಮಾರಾಟದ ಉದ್ದೇಶವು ಸಂಪೂರ್ಣವಾಗಿ ಭಿನ್ನವಾಗಿದೆ. ನಮ್ಮ ತೋಟದಲ್ಲಿ ಹಲವಾರು ಕುದುರೆಗಳು ಇವೆ, ಮತ್ತು ಇವುಗಳನ್ನು ಸಾಕಲು ಆಸಕ್ತಿ ಇರುವವರು ಸಂಪರ್ಕಿಸಿ ತಗೊಳ್ಳಬಹುದೆಂಬ ಉದ್ದೇಶದಿಂದ ಮಾತ್ರ ಮಾರಾಟದ ಬೋರ್ಡ್ ಹಾಕಲಾಗಿದೆ. ಇದು ಸುಮಾರು ಒಂದೂವರೆ ವರ್ಷಗಳ ಹಿಂದೆ ಹಾಕಲಾಗಿದೆ.

ಇದು ಯಾವುದೇ ತೊಂದರೆಯ ಸೂಚನೆಯಲ್ಲ. ಮೈಸೂರು, ಬೆಂಗಳೂರು, ಹಾಸನ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕುದುರೆ ಸಾಕಲು ಆಸಕ್ತಿ ಇರುವವರು ಇದ್ದರೆ, ಅವರಿಗೆ ನೇರ ಸಂಪರ್ಕದ ಅವಕಾಶ ಕಲ್ಪಿಸುವ ಉದ್ದೇಶವಷ್ಟೆ. ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ಕಡೆಗಳಿಂದ ಕುದುರೆಗಳನ್ನು ತರಲು ಪ್ರಯತ್ನಿಸುವವರು ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಕಾರಣದಿಂದ, ನಮ್ಮ ಯಜಮಾನರು—ದರ್ಶನ್ ಸರ್—ಸ್ವತಃ ಉತ್ತಮ ಗುಣಮಟ್ಟದ ಕುದುರೆಗಳನ್ನು ಸರಿಯಾದ ದರದಲ್ಲಿ ಒದಗಿಸಲು ಮುಂದಾಗಿದ್ದಾರೆ.

 

ಇವತ್ತಿನ ದಿನಗಳಲ್ಲಿ ವಿವಿಧ ಬ್ಲಡ್‌ಲೈನ್‌ಗಳ ಕುದುರೆಗಳು ಲಭ್ಯವಿವೆ: ಪೋನಿ, ಟಾಂಗ್ ಕುದುರೆ, ಮಾರ್ವಾರಿ, ಕಾಟೆವಾರಿ ಮುಂತಾದವು. ನಮ್ಮ ತೋಟದಲ್ಲಿ ಗಂಡು ಕುದುರೆಗಳು (ಸ್ಟಾಲಿಯನ್ಸ್) ಮತ್ತು ಹೆಣ್ಣು ಕುದುರೆಗಳು ಎರಡೂ ಇವೆ. ಆದರೆ ಕೆಲವರು ಹೆಣ್ಣು ಕುದುರೆಗಳನ್ನು ಮಾತ್ರ ಮಾರುತ್ತಿದ್ದಾರೆ ಎಂಬ ತಪ್ಪು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಸರಿಯಾದ ಮಾಹಿತಿ ಪಡೆದು, ತಪ್ಪು ಸಂದೇಶಗಳನ್ನು ಹರಡಬೇಡಿ. ದರ್ಶನ್ ಸರ್ ಅವರು ಲಾಕ್‌ಡೌನ್ ಸಮಯದಲ್ಲಿ ಸರ್ಕಾರಕ್ಕೆ ದೇಣಿಗೆ ನೀಡಿ, ಅನೇಕ ಮೂಖ ಪ್ರಾಣಿಗಳಿಗೆ ಆಹಾರ ಒದಗಿಸಿದವರು. ಅವರ ಮಾನವೀಯತೆ ಮತ್ತು ಸಮಾಜ ಸೇವೆ ಎಲ್ಲರಿಗೂ ಗೊತ್ತಿದೆ. ಅವರು ಹೊರಗಡೆ ಇದ್ದಾಗ ಅನೇಕ ಜನರಿಗೆ ಉದ್ಯೋಗ ಸಿಕ್ಕಿತ್ತು. ಇಂತಹ ವ್ಯಕ್ತಿಯ ಬಗ್ಗೆ ತಪ್ಪು ಸುದ್ದಿ ಹರಡುವುದು ನ್ಯಾಯವಲ್ಲ.

ನಮ್ಮ ವಿನಂತಿ: ದಯವಿಟ್ಟು ದರ್ಶನ್ ಸರ್ ಅವರ ವೈಯಕ್ತಿಕ ಜೀವನ, ತೋಟ, ಕುಟುಂಬದ ಬಗ್ಗೆ ಯಾವುದೇ ತಪ್ಪು ಮಾಹಿತಿ ನೀಡಬೇಡಿ. ನೀವು ಯಾವುದೇ ಚಾನೆಲ್‌ನಲ್ಲಿ ಏನಾದರೂ ನೋಡಿದರೆ, ಮೊದಲು ಸಂಪೂರ್ಣ ಮಾಹಿತಿ ಪಡೆದು, ನಂತರವೇ ಮಾತನಾಡಿ. ಕುದುರೆ ಸಾಕಲು ಆಸಕ್ತಿ ಇರುವವರು ನೇರವಾಗಿ ಬಂದು ವಿಚಾರಿಸಿ, ತಗೊಳ್ಳಬಹುದು. ಯಾವುದೇ ನಿರ್ಬಂಧವಿಲ್ಲ ಧನ್ಯವಾದಗಳು. ನಮ್ಮ ಹಂಬಲ್ ರಿಕ್ವೆಸ್ಟ್: ಸರಿಯಾದ ಮಾಹಿತಿ ನೀಡಿರಿ, ತಪ್ಪು ಸಂದೇಶ ಹರಡಬೇಡಿ.