ನಿಮ್ಮ ಬ್ಯಾಂಕ್ ಅಕೌಂಟ್ 1 ವರ್ಷದಲ್ಲಿ ಖಾತೆಗೆ ಇಷ್ಟು ಹಣ ಬಂದರೆ !! ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುವುದು ಖಚಿತ!!

ಸ್ನೇಹಿತರೆ, ಇತ್ತೀಚೆಗೆ ಬದಲಾಗಿರುವ ಆದಾಯ ತೆರಿಗೆ ನಿಯಮಗಳು ಭಾರತದ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಿವೆ. ಇಂದಿನ ಪರಿಸ್ಥಿತಿಯಲ್ಲಿ ನೀವು ಯಾವುದೇ ಹಣಕಾಸಿನ ವ್ಯವಹಾರಗಳನ್ನ ಮಾಡಲಿದ್ರೆ, ಹೊಸ ತೆರಿಗೆ ನಿಯಮಗಳ ಪ್ರಕಾರ ಅದರ ಪರಿಣಾಮಗಳನ್ನು ತಿಳಿದುಕೊಂಡು ಮುಂದುವರಿಯುವುದು ಬಹುಮುಖ್ಯ. ಉದಾಹರಣೆಗೆ, ನೀವು ಬ್ಯಾಂಕ್ ಖಾತೆಯ ಮೂಲಕ ವಾರ್ಷಿಕ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ಮಾಡಿದರೆ, ಅಥವಾ ಚಾಲ್ತಿ ಖಾತೆಯ ಮೂಲಕ 50 ಲಕ್ಷ ರೂ. ಮೀರಿದ ವ್ಯವಹಾರ ಮಾಡಿದರೆ, ಆದಾಯ ತೆರಿಗೆ ಇಲಾಖೆ ನಿಮ್ಮ ಬಗ್ಗೆ ಗಮನ ಹರಿಸಬಹುದು.
ಅದೇ ರೀತಿ, ಆದಾಯ ತೆರಿಗೆ ಸೆಕ್ಷನ್ 269ST ಪ್ರಕಾರ, ನೀವು ಒಂದೇ ದಿನ ಅಥವಾ ಒಂದೇ ವ್ಯವಹಾರದಲ್ಲಿ 2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವುದು ಅಥವಾ ಕೊಡುವುದು ಕಾನೂನಿಗೆ ವಿರುದ್ಧವಾಗಿದ್ದು, ಈ ನಿಯಮ ಉಲ್ಲಂಘನೆಯಾಗಬಹುದು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ನಿಮಗೆ ನೆರವಾಗುವ ಯಾವುದೇ ವ್ಯವಹಾರಗಳು ಆದಾಯ ತೆರಿಗೆ ಇಲಾಖೆ ಗಮನದಲ್ಲಿರುತ್ತವೆ. ಇವುಗಳ ಕುರಿತಾದ ಮಾಹಿತಿ ತಕ್ಷಣವೇ ತೆರಿಗೆ ಇಲಾಖೆಗೆ ರವಾನೆಯಾಗುತ್ತೆ.
ಹೆಚ್ಚುವರಿ ನಿಗಿತೆಯ ಪ್ರಕಾರ, ನೀವು ಕ್ರೆಡಿಟ್ ಕಾರ್ಡನ್ನು ಬಳಸುತ್ತಿರುವಾಗ, ಒಂದೇ ಬಾರಿಗೆ ₹2 ಲಕ್ಷಕ್ಕೂ ಮಿಕ್ಕಾದ ಬಿಲ್ ಪಾವತಿಸಿದರೆ ಇದೂ ನೋಟಿಸ್ ಪಡೆಯುವ ಸಾಧ್ಯತೆಯಲ್ಲಿದೆ. ಇತರ ಪ್ರಮುಖ ಅಂಶವೆಂದರೆ ವಿದೇಶ ಪ್ರಯಾಣ. ನೀವು ವರ್ಷಕ್ಕೆ ಎರಡು ಬಾರಿಗೆ ಅಥವಾ ಹೆಚ್ಚಿನ ಬಾರಿ ವಿದೇಶ ಪ್ರವಾಸ ಕೈಗೊಂಡರೆ, ಈ ಬಗ್ಗೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ಕಳುಹಿಸಬಹುದು. ಆ ಹಣದ ಮೂಲವೇನು ಎಂಬುದನ್ನು ನಿಖರವಾಗಿ ದಾಖಲೆಗಳೊಂದಿಗೆ ಸ್ಪಷ್ಟಪಡಿಸಬೇಕಾಗುತ್ತೆ.
ಏಕೆ ಪರಿಹಾರ ಏನಂದರೆ ನೀವು ಕರೆಂಟ್ ಅಕೌಂಟ್ ಓಪನ್ ಮಾಡಿ ಅದರಲ್ಲಿ ಟ್ರಾನ್ಸಾಕ್ಷನ್ ಮಾಡಿ ಮತ್ತೆ ಅದಕ್ಕೆ ನೀವು ಇನ್ಕಮ್ ಇನ್ಕಮ್ ಟ್ಯಾಕ್ಸ್ ರಿಟರ್ನ್ ಮಾಡಿ ನಿಮ್ಮ ಖರ್ಚು ವೆಚ್ಚವನ್ನು ಅದರಲ್ಲಿ ತೋರಿಸಿ ಅವಾಗ್ಲೇ ನಿಮಗೆ ನೋಟೀಸ್ ಬರೋದಿಲ್ಲ ಇಲ್ಲ ಅಂದ್ರೆ ಸುಖ ಸುಮ್ಮನೆ ಮಾಡಿದರೆ ಅಧಿಕೃತವಾಗಿ ನೋಡಿ ಬಂದೆ ಬರುತ್ತೆ. ಉದಾಹರಣೆಗೆ ನೀವು ರೂ.10,000 ಸೇಲ್ ಮಾಡಿದರೆ ನಿಮಗೆ ಸಿಗುವುದು ಬರಿ 10% ಮಾತ್ರ ಅಂದರೆ 1000 ಮಾತ್ರ. ಇನ್ಕಮ್ ಟ್ಯಾಕ್ಸ್ ಏನ್ ಮಾಡ್ತಾರೆ ಅಂದರೆ ಇಲ್ಲಿದಿದ್ದರೆ ನಿಮಗೆ ಬಂದಿರುವ 10000 ಪ್ರಾಫಿಟ್ ಎಂದು ಪರಿಗಣಿಸಿ ಅದರ ಮೇಲೆ ಟ್ಯಾಕ್ಸ್ ಮಾಡುತ್ತಾರೆ. ಅದೇನೋ ಅದೇ ನೀವು ಇನ್ಕಮ್ ಟ್ಯಾಕ್ಸ್ ನ ಕರೆಕ್ಟಾಗಿ ಸಲ್ಲಿಸಿದರೆ ಇತರ ಸಮಸ್ಯೆಗಳು ಬರುವುದಿಲ್ಲ ಮತ್ತು ಯಾವುದು ನೋಟಿಸ್ ಬರುವುದಿಲ್ಲ ಯಾಕೆಂದರೆ ನೀವು ಅದರಲ್ಲಿ ಕರೆಕ್ಟಾಗಿ ತಿಳಿಸಿರುತ್ತೀರಾ ಎಷ್ಟು ಹಣ ಬಂತು ಮತ್ತೆ ಅದರ ಖರ್ಚು ಮತ್ತೆ ನಿಮಗೆ ಬಂದ ಆದಾಯ ಎಷ್ಟು ಎಂದು. ಇದು ನಿಮಗೆ ಉಪಯೋಗ ಆದರೆ ದಯವಿಟ್ಟು ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ.
ನೀವು ಈ ನಿಯಮಗಳನ್ನು ಉಲ್ಲಂಘಿಸಿದರೆ, ಆದಾಯ ತೆರಿಗೆ ಇಲಾಖೆಯಿಂದ ಜೋಪಾನವಾಗಿ ಉತ್ತರ ನೀಡುವುದು ಅತ್ಯವಶ್ಯ. ಉತ್ತರ ನೀಡದ ಸ್ಥಿತಿಯಲ್ಲಿ, ಶೇಕಡಾ 60 ರಷ್ಟು ದಂಡ ಅಥವಾ ಇತರ ಕಾನೂನು ಕ್ರಮಗಳನ್ನ ಎದುರಿಸಬೇಕಾಗುತ್ತದೆ. ಹಣದ ಮೂಲ, ಅದರ ಲೆಕ್ಕಪತ್ರಗಳು, ಮತ್ತು ನ್ಯಾಯಸಮ್ಮತ ದಾಖಲೆಗಳನ್ನು ಕಾಯ್ದಿರಿಸುವುದು ಈ ಸಂದರ್ಭದಲ್ಲಿ ಬಹುಪಯೋಗಿಯಾಗುತ್ತೆ. ಆದ್ದರಿಂದ ಯಾವುದೇ ಹಣಕಾಸಿನ ವ್ಯವಹಾರ ಮಾಡುವ ಮುನ್ನ, ಈ ನಿಯಮಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳುವುದು ಮತ್ತು ಪಾಲಿಸುವುದು ಅತಿ ಅಗತ್ಯ.