ಚಿನ್ನ ಖರೀದಿದಾರರಿಗೆ ಸಂತಸದ ಸುದ್ದಿ !! ಸತತ 5 ದಿನಗಳಿಂದ ಬಾರಿ ಇಳಿಕೆ !!

ವಿಶ್ವದ ವಿವಿಧ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟುಗಳು ಕಡಿಮೆಯಾಗುತ್ತಿದ್ದು, ವಿವಿಧ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ. ಇದರಿಂದ ಚಿನ್ನದ ಮೇಲಿನ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆಆದ್ದರಿಂದ ಮುಂಚಿತವಾಗಿ ಬಂಗಾರ ಖರೀದಿಸುವುದು ಒಳ್ಳೆಯದು. ಚಿನ್ನವಷ್ಟೇ ಅಲ್ಲ ಜನರು ಬೆಳ್ಳಿಯ ಮೇಲೂ ಹೆಚ್ಚಿನ ಹೂಡಿಕೆಗೆ ತೊಡಗಿದ್ದಾರೆ. ಇದು ಕೂಡ ಮುಂದೆ ಲಾಭವನ್ನು ನೀಡುತ್ತದೆ.
ಆಗಸ್ಟ್ 9 ರಿಂದ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಲೇ ಬಂದಿದೆ. ಕೇವಲ ಎಂಟು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 2,130 ರೂ. ಇಳಿಕೆಯಾಗಿದೆ. ಇಂದು ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆ ದಾಖಲಾಗಿದ್ದು, ತಜ್ಞರ ಪ್ರಕಾರ ಇದು ಚಿನ್ನ ಮತ್ತು ಬೆಳ್ಳಿ ಖರೀದಿಗೆ ಒಳ್ಳೆಯ ಸಮಯ.
ಭಾರತದಲ್ಲಿನ ಇಂದಿನ ಚಿನ್ನದ ಬೆಲೆ (22 ಕ್ಯಾರಟ್ ಚಿನ್ನ): 1 ಗ್ರಾಂ ₹9,275 (₹5 ಇಳಿಕೆ). 8 ಗ್ರಾಂ: ₹74,200 (₹40 ಇಳಿಕೆ) 10 ಗ್ರಾಂ: ₹92,750 (₹50 ಇಳಿಕೆ). 100 ಗ್ರಾಂ: ₹9,27,500 (₹500 ಇಳಿಕೆ)
24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ: ₹10,118 (₹6 ಇಳಿಕೆ). 8 ಗ್ರಾಂ: ₹80,944 (₹48 ಇಳಿಕೆ). 10 ಗ್ರಾಂ: ₹1,01,180 (₹60 ಇಳಿಕೆ). 100 ಗ್ರಾಂ: ₹10,11,800 (₹600 ಇಳಿಕೆ)
ಒಟ್ಟಾರೆಯಾಗಿ ಹೇಳುವುದಾದರೆ ಈಗಿನ ಚಿನ್ನದ ಬೆಲೆ ಕುಸಿತ ಖರೀದಿದಾರರಿಗೆ ಲಾಭದಾಯಕ ಅವಕಾಶವಾಗಿದೆ. ಮುಂದಿನ ದಿನಗಳಲ್ಲಿ ದರ ಏರಿಕೆ ಸಂಭವಿಸುವ ಸಾಧ್ಯತೆ ಇರುವುದರಿಂದ, ಈಗಲೇ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳ್ಳೆಯದು