ಕಡಿಮೆ ಸಿಬಿಲ್ ಸ್ಕೂಲ್ ಇರುವವರಿಗೆ ಭರ್ಜರಿ ಗುಡ್ ನ್ಯೂಸ್!! ಹೊಸ ರೂಲ್ಸ್ ನಿಂದ ಸಾಲ ಪಡೆಯುವ ಸುವರ್ಣ ಅವಕಾಶ!!

ಕಡಿಮೆ ಸಿಬಿಲ್ ಸ್ಕೂಲ್ ಇರುವವರಿಗೆ ಭರ್ಜರಿ ಗುಡ್ ನ್ಯೂಸ್!!  ಹೊಸ ರೂಲ್ಸ್ ನಿಂದ ಸಾಲ ಪಡೆಯುವ ಸುವರ್ಣ ಅವಕಾಶ!!

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 1ರಿಂದ ದೇಶಾದ್ಯಂತ ಸಿಬಿಲ್ ಸ್ಕೋರ್‌ಗಳ ಸಂಬಂಧದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಯಮಗಳು ಕಡಿಮೆ ಸ್ಕೋರ್ ಹೊಂದಿರುವ ಗ್ರಾಹಕರಿಗೂ ಸಾಲ ಸಿಗುವ ಅವಕಾಶವನ್ನು ಕಲ್ಪಿಸಿವೆ. ಹಣಕಾಸಿನ ಒಳಹರಿವು ಹೆಚ್ಚಿಸುವ ಉದ್ದೇಶದಿಂದ RBI ಈ ಹೊಸ ಕ್ರಮವನ್ನು ಕೈಗೊಂಡಿದೆ.

ಈ ನಿಯಮಗಳ ಅನುಸಾರ, ಕಡಿಮೆ ಸಿಬಿಲ್ ಸ್ಕೋರ್ ಇರುವ ವ್ಯಕ್ತಿಗಳಿಗೂ ಸಾಲ ನೀಡುವಂತೆ ಎಲ್ಲ ಬ್ಯಾಂಕುಗಳಿಗೆ RBI ಸೂಚನೆ ನೀಡಿದೆ. ಈವರೆಗೂ ಸಾಲ ತಿರಸ್ಕಾರಕ್ಕೆ ಕಾರಣವಾಗುತ್ತಿದ್ದ ಸ್ಕೋರ್‌ನ್ನು ಆಧಾರವನ್ನಾಗಿ ಬಳಸಬಾರದು ಎಂದು RBI ಆದೇಶಿಸಿದೆ. ಬದಲಿಗೆ, ವ್ಯಕ್ತಿಯ ಉದ್ಯಮದ ಸ್ಥಿತಿ ಹಾಗೂ ಆರ್ಥಿಕ ಚಟುವಟಿಕೆಯನ್ನು ಪರಿಗಣಿಸಿ ಸಾಲ ನೀಡಬೇಕು.

ಅದಿಲ್ಲದೆ, ಗ್ರಾಹಕರ ಹಿಂದಿನ ಪಾವತಿ ಇತಿಹಾಸ ಮತ್ತು ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟು ಬೇಗನೆ ಸಾಲ ಮಂಜೂರು ಮಾಡಬೇಕೆಂದು RBI ಸೂಚಿಸಿದೆ. ಸ್ಕೋರ್ ಕಡಿಮೆ ಇರುವುದರಿಂದ ಯಾವುದೇ ವಿಳಂಬವಾಗಬಾರದು. ಇದರಿಂದ, ಸಾಲ ಪಡೆದವರು ಬದ್ಧತೆಯಿಂದ ಪಾವತಿ ಮಾಡುತ್ತಿರುವ ಅಂಶವೂ ಪರೀಕ್ಷೆಗೊಳಪಡಬೇಕು.

ಇನ್ನೊಂದು ಪ್ರಮುಖ ಅಂಶವೆಂದರೆ, ಸಿಬಿಲ್ ಸ್ಕೋರ್ ಸಂಸ್ಥೆಗಳು ತಿಂಗಳಿಗೆ ಎರಡು ಬಾರಿ ಸ್ಕೋರ್‌ಗಳನ್ನು ಅಪ್ಡೇಟ್ ಮಾಡಬೇಕೆಂದು RBI ಆದೇಶಿಸಿದೆ. ಇದರಿಂದ, ಗ್ರಾಹಕರ ಸಾಲಕ್ಕೆ ಅನುಮೋದನೆ ತ್ವರಿತವಾಗುತ್ತದೆ ಹಾಗೂ ಬಡ್ಡಿ ದರ ನಿಶ್ಚಿತಗೊಳಿಸಲು ಸಹಾಯವಾಗುತ್ತದೆ.

ಸ್ವಂತ ಬಿಸಿನೆಸ್ ನಡೆಸುವವರು ಕೂಡ ತಮ್ಮ ಸಿಬಿಲ್  ಸ್ಕೋರ್  ಕಡಿಮೆ ಇದ್ದರೂ ಟ್ರಾನ್ಸಾಕ್ಷನ್ ಹಿಸ್ಟರಿ ಆಧರಿಸಿ ಸಾಲ ಪಡೆಯಬಹುದು. ಬ್ಯಾಂಕುಗಳು ಇಎಂಐ ಪಾವತಿ ಹಾಗೂ ಬಡ್ಡಿದರಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕಾಗಿದೆ. ಇಎಂಐ ಪಾವತಿಯಲ್ಲಿ ವ್ಯತ್ಯಯವಾದಲ್ಲಿ, 90 ದಿನಗಳ ಕಾಲಾವಕಾಶ ನೀಡಬೇಕು.

ಹೌದು ಸ್ನೇಹಿತರೆ ಕಡಿಮೆ ಸಿಬಿಲ್ ಸ್ಕೋರ್ಗಳನ್ನ ಆಧರಿಸಿ ಸಾಲವನ್ನ ತಿರಸ್ಕಾರ ಮಾಡದಂತೆ ಮತ್ತು ಹಣಕಾಸು ಉದ್ಯಮಗಳನ್ನ ಗಣನೆಗೆ ತೆಗೆದುಕೊಳ್ಳುವಂತೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನು ಹೊರಡಿಸಿದೆ. ಸಿಬಿಲ್ ಸ್ಕೋರ್ ಕಡಿಮೆ ಇದೆ ಅನ್ನೋ ಕಾರಣಕ್ಕೆ ಯಾವುದೇ ಸಾಲವನ್ನ ತಿರಸ್ಕಾರ ಮಾಡಬಾರದು. ಒಬ್ಬ ವ್ಯಕ್ತಿಯ ಉದ್ಯಮವನ್ನ ಗಣನೆಗೆ ತೆಗೆದುಕೊಂಡು ಸಾಲವನ್ನ ಮಂಜೂರು ಮಾಡಬೇಕು ಅಂತ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶವನ್ನ ಹೊರಡಿಸಿದೆ.

ಮೂರು ತಿಂಗಳ ಕಾಲ ಇಎಂಐ ಪಾವತಿ ವಿಳಂಬವಾದರೆ, ಬ್ಯಾಂಕುಗಳು ಗ್ರಾಹಕರಿಗೆ ನೋಟೀಸ್ ನೀಡಬೇಕು. ನೋಟೀಸ್ನಿಗೆ ಉತ್ತರಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಬಹುದು. ಜೊತೆಗೆ, ಬ್ಯಾಂಕಿಂಗ್ ಸಿಬ್ಬಂದಿಗಳು ಕೇವಲ ಕೆಲಸದ ಅವಧಿಯಲ್ಲಿಯೇ ಸಾಲಗಾರರಿಗೆ ಕರೆ ಮಾಡಬೇಕೆಂದು ಸೂಚಿಸಲಾಗಿದೆ. ಕಾರ್ಯ ಸಮಯದ ಹೊರತು ಯಾವುದೇ ಸಮಯದಲ್ಲಿ ಸಂಪರ್ಕ ಮಾಡಬಾರದು.

ಈ ಎಲ್ಲಾ ನಿಯಮಗಳು ಆಗಸ್ಟ್ 1ರಿಂದ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿದೆ. ಇದು ಹಣಕಾಸು ಪ್ರಜ್ಞೆ ಮತ್ತು ಸಮಾನ ವ್ಯವಹಾರಗಳಿಗೆ ದಾರಿ ತೆಗೆಯುವ ಮಹತ್ವದ ಹೆಜ್ಜೆಯಾಗಬಹುದು