ನೀವು ಇನ್ಮೇಲೆ ಈ ತಪ್ಪುಗಳನ್ನ ಮಾಡಿದರೆ ಕೂಡಲೇ ಬರುತ್ತೆ ಟ್ಯಾಕ್ಸ್ ನೋಟಿಸ್ !! ಯಾವುದು ನೋಡಿ ?

ನೀವು ಇನ್ಮೇಲೆ ಈ ತಪ್ಪುಗಳನ್ನ ಮಾಡಿದರೆ ಕೂಡಲೇ ಬರುತ್ತೆ ಟ್ಯಾಕ್ಸ್ ನೋಟಿಸ್ !! ಯಾವುದು ನೋಡಿ ?


ನಮಸ್ಕಾರ ಸ್ನೇಹಿತರೆ, ಆದಾಯ ತೆರಿಗೆ ಸಲ್ಲಿಸುವ ದಿನಾಂಕ ಮುಂದುಡಿದ ಬೆನ್ನಲ್ಲೇ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸುಗಳು ಬರುತ್ತಿವೆ. ಯುಪಿಐ ಮುಖಾಂತರ ಹಣ ಸ್ವೀಕರಿಸುವ ವ್ಯಾಪಾರಸ್ಥರಿಗೆ ಈಗ ಜಿಎಸ್ಟಿ ನೋಟೀಸುಗಳು ಕೂಡ ಕಳಿಸಲಾಗುತ್ತಿವೆ. ನೀವು ಪ್ರತಿವರ್ಷ ಹೆಚ್ಚಿನ ಹಣಕಾಸಿನ ವೈವಾಟುಗಳನ್ನು ಮಾಡುತ್ತಿದ್ದರೆ, ಕೆಲವು ರೀತಿಯ ವಹಿವಾಟುಗಳನ್ನು ತಪ್ಪಿಸಬೇಕು. ಏಕೆಂದರೆ ಈ ಐದು ರೀತಿಯ ವಹಿವಾಟುಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತವೆ.

ಇಲ್ಲಿದೆ ಆ ಐದು ಮುಖ್ಯ ವಹಿವಾಟುಗಳು:
1) ಕ್ರೆಡಿಟ್ ಕಾರ್ಡ್ ಪಾವತಿಗಳು – ನೀವು ಒಂದು ಲಕ್ಷ ರೂ. ಅಥವಾ ಹೆಚ್ಚಿನ ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದರೆ, ಆದಾಯ ತೆರಿಗೆ ಇಲಾಖೆ ನಿಮಗೆ ನೋಟೀಸ್ ಕಳುಹಿಸುತ್ತದೆ. 

2)ಬ್ಯಾಂಕ್ ಖಾತೆಯಲ್ಲಿ ಹಣ ಜಮೆ – ನಿಮ್ಮ ಬ್ಯಾಂಕ್ ಖಾತೆಯಲ್ಲಿ ವರ್ಷಕ್ಕೆ 10 ಲಕ್ಷ ರೂ. ಅಥವಾ ಹೆಚ್ಚು ಹಣ ಟೇವಣಿ ಮಾಡಿದರೆ, ನೀವು ಆ ಹಣದ ಮೂಲವನ್ನು ಸಾಬೀತುಪಡಿಸಬೇಕಾಗುತ್ತದೆ. ಸ್ಪಷ್ಟನೆ ನೀಡದೆ ಇದ್ದರೆ, ದಂಡವನ್ನು ಎದುರಿಸಬೇಕಾಗುತ್ತದೆ.

3) ಹೂಡಿಕೆಗಳು – ಮ್ಯೂಚುವಲ್ ಫಂಡ್ ಅಥವಾ ಶೇರು ಮಾರುಕಟ್ಟೆಗಳಲ್ಲಿ ವರ್ಷಕ್ಕೆ 10 ಲಕ್ಷ ರೂ. ಅಥವಾ ಹೆಚ್ಚು ಹಣ ಹೂಡಿಕೆ ಮಾಡಿದರೆ, ಆದಾಯ ತೆರಿಗೆ ನೋಟೀಸ್ ಬರುತ್ತದೆ. ಹೂಡಿಕೆ ಮಾಡುವ ಮೊತ್ತದ ಮೂಲವನ್ನು ವಿವರಿಸದಿದ್ದರೆ 60%ರಷ್ಟು ತೆರಿಗೆ ವಿಧವಾಗಬಹುದು. 

4)ಆಸ್ತಿ ಖರೀದಿಗಳು – ನೀವು ಒಂದು ವರ್ಷದಲ್ಲಿ 30 ಲಕ್ಷ ರೂ. ಅಥವಾ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಖರೀದಿ ಮಾಡಿದರೆ, ಅದರ ಹಣದ ಮೂಲವನ್ನು ತೆರಿಗೆ ಇಲಾಖೆಗೆ ವಿವರಿಸಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ 50 ಲಕ್ಷ ರೂ. ಮೌಲ್ಯದ ಆಸ್ತಿ ಖರೀದಿಸಿದರೆ ಕೂಡ ಇದೇ ನಿಯಮ ಅನ್ವಯಿಸುತ್ತದೆ. 

5) FD  ಅಥವಾ ಆರ್ಡಿ ಯೋಜನೆಗಳಿಗೆ ನಗದು ಹೂಡಿಕೆ – 5 ಲಕ್ಷರಿಂದ 10 ಲಕ್ಷ ರೂ.ವರೆಗೆ ಹಣವನ್ನು Fd  ಅಥವಾ ಆರ್ಡಿಯಲ್ಲಿ ಹಾಕಿದರೆ, ನಿಮ್ಮ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಹೋಗುತ್ತದೆ. ತದ್ವಾರ ಅವರು ನೋಟೀಸ್ನ್ನ ಕಳುಹಿಸಬಹುದು.

ಈ ಎಲ್ಲಾ ವಹಿವಾಟುಗಳು ತೆರಿಗೆ ನಿಯಮದ ಪ್ರಕಾರ ಟ್ರ್ಯಾಕ್ ಆಗುತ್ತವೆ. ನೀವು ಆನ್ಲೈನ್ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ, ಆದಾಯ ತೆರಿಗೆ ಇಲಾಖೆ ಅದರ ಮೇಲೆ ನಿಗಾ ಇಡುತ್ತದೆ. ನೀವು ಯಾವುದೇ ವಹಿವಾಟಿನಲ್ಲಿ ನೋಟೀಸ್ ಪಡೆದರೆ, ಅದರ ಉತ್ತರವನ್ನು ಸರಿಯಾಗಿ ನೀಡುವುದು ಅತ್ಯಗತ್ಯ.